BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

CM BASAVARAJ BOMMAI FLYING TO AMERICA FOR WHAT..WHY…?! ಜನವರಿಯಲ್ಲಿ “ವಿದೇಶ” ಕ್ಕೆ ಸಿಎಂ ಬೊಮ್ಮಾಯಿ….. “ಅಮೆರಿಕಾ ಪ್ರವಾಸ”ದ ಹಿಂದಿನ “ಮರ್ಮ” ಏನ್ ಗೊತ್ತಾ..?

ಬೆಂಗಳೂರು:ಜನವರಿ 2ನೇ ವಾರ…ಎನ್ನೋದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ ಹಾಗೂ ಕುತೂಹಲ ಹುಟ್ಟುಹಾಕಿದೆ. ಅಂದು ಏನಾಗಲಿದೆ..? ಏನಾಗಬಹುದು..? ಏನಾದ್ರೂ ಅಸಂಭವ ಎನ್ನೋದು ಸಂಭವಿಸಿ ಹೋಗುತ್ತಾ..? ಯಾರದಾದ್ರೂ ಭವಿಷ್ಯ ನಿರ್ಧಾರವಾಗುತ್ತಾ..? ರಾಜಕೀಯ ಹಾವು ಏಣಿ ಆಟ ಮತ್ತೊಂದು ಆಯಾಮ ಪಡೆದುಕೊಳ್ಳುತ್ತಾ..? ಅಂದಿನ ಬೆಳವಣಿಗೆ ಹಿನ್ನಲೆಯಲ್ಲಿ ಹೀಗೊಂದಿಷ್ಟು ಪ್ರಶ್ನೆಗಳು ಉದ್ಭವವಾಗಿವೆ..ಇದಕ್ಕೆಲ್ಲಾ ಕಾರಣವಾಗಿರೋದು ಸಿಎಂ ಬಸವರಾಜ ಬೊಮ್ಮಾಯಿ ಅವರ ಆ ವಿದೇಶ ಪ್ರವಾಸ..

ಯೆಸ್..ಯೆಸ್…ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಕೆಲ ಮಾಹಿತಿಗಳಂತೆ ಜನವರಿ 2ನೇ ವಾರದಲ್ಲಿ ಬಸವರಾಜ ಬೊಮ್ಮಾಯಿ ವಿದೇಶಕ್ಕೆ ತೆರಳಲಿದ್ದಾರೆ.ಅವರ ಪ್ರವಾಸವೂ ಬಹುತೇಕ ನಿಶ್ಚಿತವಾಗಿದ್ದು,ದಿನಾಂಕವಷ್ಟೇ ನಿಕ್ಕಿಯಾಗಬೇಕಿದೆ.ಎಲ್ಲಾ ನಿರೀಕ್ಷೆಯಂತಾದ್ರೆ ಜನವರಿ 10-15 ರ ನಡುವೆ ಬಸವರಾಜ ಬೊಮ್ಮಾಯಿ ಅಮೆರಿಕಾಕ್ಕೆ ಹಾರಲಿದ್ದಾರಂತೆ. ಆದ್ರೆ..ಆದ್ರೆ ಕುತೂಹಲ ಇರೋದೇ ಅಲ್ಲಿ..ಬಸವರಾಜ ಬೊಮ್ಮಾಯಿ ವಿದೇಶಕ್ಕೆ ಹಾರುತ್ತಿರುವುದೇಕೆ..ಇದರ ಹಿಂದಿರುವ ಆ ರಾಜ”ಕಾರಣ”ವಾದರೂ ಏನು? ಎನ್ನುವುದು.ರಾಜಕೀಯ ಮೂಲಗಳು ಹೇಳುವಂತೆ ಬೊಮ್ಮಾಯಿ ಅನಾರೋಗ್ಯದ ನೆಪವಿಟ್ಟುಕೊಂಡು ಅಮೆರಿಕಾಕ್ಕೆ ಹಾರಲಿದ್ದಾರಂತೆ.

ಅಮೆರಿಕಾದಲ್ಲಿ ಉತ್ಕ್ರಷ್ಟ ದರ್ಜೆಯ ಚಿಕಿತ್ಸೆ ಸಿಗಲಿರುವುದರಿಂದ ಬೊಮ್ಮಾಯಿ ವಿದೇಶಕ್ಕೆ ತೆರಳುತ್ತಿದ್ದಾರೆನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.ಆದರೆ ಅನಾರೋಗ್ಯಕ್ಕೆ ಚಿಕಿತ್ಸೆ ಎನ್ನುವುದು ಕೇವಲ ನೆಪ,ನಿಜವಾದ ಕಾರಣ ಅನಾರೋಗ್ಯದ ನೆಪದಲ್ಲಿ ಪದತ್ಯಾಗ ಎನ್ನಲಾಗುತ್ತಿದೆ.ಯೆಸ್…ಬಸವರಾಜ ಬೊಮ್ಮಾಯಿ ಅವರಿಗೆ ಅಮೆರಿಕಾ ಪ್ರವಾಸ,ಓರ್ವ ಮುಖ್ಯಮಂತ್ರಿಯಾಗಿ ತೆರಳಲಿರೋ ಕೊನೆಯ ಪ್ರಯಾಣವಾಗಬಹುದೆಂದೇ ಬಿಂಬಿಸಲಾಗುತ್ತಿದೆ.

ಬಸವರಾಜ ಬೊಮ್ಮಾಯಿ ಅವರ ಆರೋಗ್ಯ-ದೈಹಿಕ ಸ್ಥಿರತೆ ಹಾಗೂ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಅವರು ಇತ್ತೀಚೆಗೆ ಬಳಲಿದವರಂತೆ ಕಾಣುತ್ತಿರುವುದು ಸ್ಪಷ್ಟವಾಗುತ್ತದೆ.(ಹಾವೇರಿಯಲ್ಲಿ ಇತ್ತೀಚೆಗೆ ವೈರಾಗ್ಯದ ಮಾತುಗಳನ್ನಾಡಿದ್ದರ ಹಿಂದೆಯೂ ಪದತ್ಯಾಗದ ನೋವಿದ್ದರೂ ಇರಬಹುದು).ತಮ್ಮ ಮನೆಯ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದರೆನ್ನಲಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರೂ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ

ಇದೇ ಚಿಕಿತ್ಸೆಯ ನೆವ ಮುಂದಿಟ್ಟುಕೊಂಡು ಬಸವರಾಜ ಬೊಮ್ಮಾಯಿ ವಿದೇಶಕ್ಕೆ ಹಾರುತ್ತಿದ್ದು,ತೆರಳುವ ಮುನ್ನವೇ ಹೈಕಮಾಂಡ್ ಆದೇಶ-ನಿರ್ದೇಶನ-ಸೂಚನೆ-ಸಲಹೆಯಂತೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆನ್ನುವ ಗುಸು ಗುಸು ಶುರುವಾಗಿದೆ. ಕೆಲವು ಮೂಲಗಳ ಪ್ರಕಾರ ಅಮೆರಿಕಾಕ್ಕೆ ತೆರಳೊಕ್ಕೆ ಬಸವರಾಜ ಬೊಮ್ಮಾಯಿ ಅಪ್ಲೈ ಮಾಡಿದ್ದ ಆರೋಗ್ಯ ವೀಸಾ ಡಿಸೆಂಬರ್ 12 ರಂದೇ ಅಂಗಿಕೃತವಾಗಿದೆಯಂತೆ.ಹಾಗಾಗಿ ಅವರು ವಿದೇಶಕ್ಕೆ ತೆರಳೋದು ಬಹುತೇಕ ನಿಕ್ಕಿಯಾದಂತೆಯೇ.ಅಷ್ಟರೊಳಗೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಮುಗಿಸಿ ವಿಮಾನ ಹಾರುವ ಮುನ್ನ ಪದತ್ಯಾಗ ಮಾಡುವ ಆಲೋಚನೆಯಲ್ಲಿ ಬೊಮ್ಮಾಯಿ ಕೂಡ ಇದ್ದಾರಂತೆ.

ತೆರಳುವಾಗ ಪದತ್ಯಾಗದ ಮಾತನ್ನಾಡಿದ್ರೆ ಬೇರೆಯದೇ ಸಂದೇಶ ರವಾನೆಯಾಗಬಹುದೆನ್ನುವ ಕಾರಣಕ್ಕೆ ಹೈಕಮಾಂಡ್ ಸೂಚನೆ ಮೇರೆ ಅಲ್ಲಿಂದಲೇ ಅಥವಾ ಅಲ್ಲಿಂದ ವಾಪಸ್ಸಾದ ಮೇಲೆ ಅನಾರೋಗ್ಯದಿಂದಾಗಿ ಧೀರ್ಘಾವಧಿಯ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆನ್ನುವ ಕಾರಣ ಮುಂದೊಡ್ಡಿ ರಾಜೀನಾಮೆ ನೀಡಬಹುದೆನ್ನುವ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಮುಖ್ಯಮಂತ್ರಿಯಾಗಿ ಆ ಸ್ಥಾನಕ್ಕೆ ನ್ಯಾಯ ಒದಗಿಸುವುದರಲ್ಲಿ,ಭಿನ್ನ ಮನಸ್ತಿತಿಯ ಬಣಗಳವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆ ಪ್ರದರ್ಶಿಸುವುದರಲ್ಲಿ, ರಾಜಕೀಯ ಚುನಾವಣೆಗಳಲ್ಲಿ ಪಕ್ಷದ ಪ್ರದರ್ಶನವನ್ನು ತೃಪ್ತಿಕರಗೊಳಿಸುವುದರಲ್ಲಿ ಬಸವರಾಜ ಬೊಮ್ಮಾಯಿ ವಿಫಲವಾಗಿದ್ದಾರೆನ್ನುವುದು ಹೈಕಮಾಂಡ್ ಗೆ ಮನವರಿಕೆ ಆಗಿರುವುದರಿಂದಲೇ ಬಸವರಾಜ ಬೊಮ್ಮಾಯಿ ಅವರ ಮಹಾನಿರ್ಗಮನಕ್ಕೆ ವೇದಿಕೆ ಸೃಷ್ಟಿ ಮಾಡೊಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಜನರ ಮನಸಿನಲ್ಲಿ ಉಳಿಯುವಂಥ ವ್ಯಕ್ತಿತ್ವವಾಗಿ ಬಸವರಾಜ ಬೊಮ್ಮಾಯಿ ಉಳಿದಿಲ್ಲ.ಈಗಿನ ಮುಖ್ಯಮಂತ್ರಿ ಯಾರು ಎಂದರೆ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಜನ ತಡವರಿಸಿಕೊಂಡು ಹೇಳು ವಷ್ಟು ಸಾರ್ವಜನಿಕವಾಗಿ ಅಜ್ಞಾತವಾಗಿದ್ದಾರೆನ್ನುವ ಫೀಡ್ ಬ್ಯಾಕ್ ನ್ನು ಕೂಡ ಹೈಕಮಾಂಡ್ ಪಡೆದುಕೊಂಡಿದೆಯಂತೆ.

ಚುನಾವಣೆ ಗೆ ದಿನಗಳು ಹತ್ತಿರವಾಗುತ್ತಿರುವಂತೆ ಪಕ್ಷವನ್ನು ಹಾಗೂ ಸರ್ಕಾರದ ಕೆಲಸಗಳನ್ನು ಜನರತ್ತ ಕೊಂಡೊಯ್ಯುವ-ಹೆಚ್ಚೆಚ್ಚು ಆಪ್ತವಾಗು ವ ಕೆಲಸವನ್ನು ಬೊಮ್ಮಾಯಿ ಮಾಡಬೇಕಿತ್ತು.ಆದರೆ ಅವರಿಂದ ಅಂತಹ ಕೆಲಸಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎನ್ನು ವುದು ಸ್ವಪಕ್ಷೀಯರಿಂದಲೇ ಹೈಕಮಾಂಡ್ ಗಮನಕ್ಕೆ ಹೋಗಿದೆ. ಅಧಿಕಾರವನ್ನು ಮತ್ತೆ ಪಡೆಯಬೇಕೆನ್ನುವ ಉಮೇದಿನಲ್ಲಿರುವ ಬಿಜೆಪಿ ಹೈಕಮಾಂಡ್, ಬಸವರಾಜ ಬೊಮ್ಮಾಯಿ ಅವರ ಸಧ್ಯದ “ವರ್ಚಸ್ಸುರಹಿತ” ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಮನಸ್ತಿತಿಯಲ್ಲಿ ಇಲ್ಲವೇ ಇಲ್ಲ..

ಹಾಗಾಗಿ ಅನಾರೋಗ್ಯವನ್ನೇ “ಕಾರಣ” ಮಾಡಿಕೊಂಡು ತಾವೇ ಅಧಿಕಾರದಿಂದ ಕೆಳಗಿಳಿಯುತ್ತಿದ್ದೇನೆ ಎನ್ನುವಂಥ ಚಿತ್ರಣ ಬಿಂಬಿಸಲು ಹೈಕಮಾಂಡ್ ಸೂಚಿಸಿದೆ ಎನ್ನುವ ಮಾಹಿತಿಗಳು ಡೆಲ್ಲಿ ರಾಜಕಾರಣದ ಪಡಸಾಲೆಯಿಂದ ಹೊರಬಿದ್ದಿವೆ. ಬಸವರಾಜ ಬೊಮ್ಮಾಯಿ ಅವರಿಗೆ ಗೌರವಯುತ ರಾಜಕೀಯ ವಿದಾಯ ನೀಡಲು ಹೈಕಮಾಂಡ್ ಮಟ್ಟದಲ್ಲಿ ನಿರ್ಣಾಯಕವಾದ ಪ್ರಯತ್ನ ನಡೆಯುತ್ತಿದೆ.ಉತ್ತರಾಧಿಕಾರಿ ಯಾರೆನ್ನುವ ಪ್ರಶ್ನೆಗೂ ಉತ್ತರ ಸಿದ್ದಪಡಿಸಿಟ್ಟುಕೊಂಡಿದೆ.ಜಾತಿ,ಪ್ರಾದೇಶಿಕತೆ ಹಾಗೂ ವಿಷಯಾಧಾರಿತವಾಗಿ ಕೆಲ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.

ಚುನಾವಣೆಯ ಕಾಲಘಟ್ಟದಲ್ಲಿ ಸೂಕ್ತ ನಿರ್ದಾರ ತೆಗೆದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.ಈಗ ಮಾದ್ಯಮಗಳಲ್ಲಿ ಹರಿಬಿಡಲಾಗುತ್ತಿರುವ ಹೆಸರುಗಳಿಗಿಂತ ಬೇರೆಯದೆ ಆಯ್ಕೆಯನ್ನು ಹೈಕಮಾಂಡ್ ಮುಂದಿಟ್ಟುಕೊಂಡಿದೆ.ಇದೆಲ್ಲವೂ ಹೈಕಮಾಂಡ್ ಮಟ್ಟದಲ್ಲಿ ಗಂಭೀರವಾಗಿ ನಡೆಯುತ್ತಿರುವುದು ಎಷ್ಟು ಸತ್ಯವೋ..ಬಸವರಾಜ ಬೊಮ್ಮಾಯಿ ಅವರಿಗೆ ಜನವರಿ 2ನೇ ವಾರದಲ್ಲಿ ಪದತ್ಯಾಗಕ್ಕೆ ಸೂಚಿಸಿರುವುದು ಕೂಡ ಅಷ್ಟೇ ನಿಜ.

ಅದೇನೇ ಆಗಲಿ,ಡಿಸೆಂಬರ್ 12 ರಂದೇ ಬಸವರಾಜ ಬೊಮ್ಮಾಯಿ ಅವರ ವಿದೇಶ ಪ್ರವಾಸದ ಆರೋಗ್ಯ ವಿಸಾಕ್ಕೆ ಗ್ರೀನ್ ಸಿಗ್ನಲ್ ದೊರೆತಿರುವುದು,ಜನವರಿ 2ನೇ ವಾರದಲ್ಲಿ ಅವರ ಪ್ರವಾಸಕ್ಕೆ ದಿನಾಂಕ ನಿಗಧಿಯಾಗಿದೆ ಎನ್ನುವುದು,ಆ ದಿನಗಳಲ್ಲಿ ನಡೆಯಬಹುದೆನ್ನಲಾಗುತ್ತಿರುವ ಬೆಳವಣಿಗೆಗಳೆಲ್ಲಾ ಸಾಕಷ್ಟು ಕುತೂಹಲ ಮೂಡಿಸಿರುವುದಂತೂ ಸತ್ಯ.

Spread the love

Related Articles

Leave a Reply

Your email address will not be published.

Back to top button
Flash News