SHIVAMOGGA BASED BEO SUCIDE…ಶಿವಮೊಗ್ಗ ಮೂಲದ ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್ ಆತ್ಮಹತ್ಯೆ:

ಡೆತ್ ನೋಟ್ ಬರೆದು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸೂಸೈಡ್, ಆತ್ಮಹತ್ಯೆಗೆ ದಿಗ್ಬ್ರಮೆ

0

ಬೆಂಗಳೂರು:ಶಿವಮೊಗ್ಗ ಮೂಲದ ಕ್ಷೇತ್ರ  ಶಿಕ್ಷಣಾಧಿಕಾರಿ ಕಮಲಾಕರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಲಹಂಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿನ ಕಾರ್ಯನಿರ್ವಹಿಸುತ್ತಿದ್ದ  ಟಿ.ಎನ್ ಕಮಲಾಕರ್ ಇಂದು ಮಧ್ಯಾಹ್ನ ಯಲಹಂಕ ವ್ಯಾಪ್ತಿಯಲ್ಲಿರುವ ತಮ್ಮ ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಇರುವಾಗಲೇ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಾರೋಗ್ಯ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.ಆದರೆ ಕೇವಲ ಇದೊಂದೇ ಕಾರಣಕ್ಕೆ ಕಮಲಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗದು.ಏಕೆಂದರೆ ಸ್ವಭಾವತಃ ತುಂಬಾ ಗಟ್ಟಿ ಗುಂಡಿಗೆ ಹೊಂದಿದ್ದ ಕಮಲಾಕರ್ ದಿಢೀರ್ ಇಂತದ್ದೊಂದು ನಿರ್ದಾರ ಕೈಗೊಳ್ಳುತ್ತಾರೆಂದರೆ ಅದಕ್ಕೆ ಬೇರೆ ಇನ್ನ್ಯಾವುದೋ ಕಾರಣ ಇರಬಹುದೆಂದು ಶಂಕಿಸಲಾಗಿದೆ.

ಸಧ್ಯ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು,ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಸಾಯುವ ಮುನ್ನ ಕಮಲಾಕರ್ ಡೆತ್ ನೆಟ್ ಬರೆದಿಟ್ಟಿದ್ದಾರೆನ್ನಲಾಗಿದ್ದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿರುವ ಸಂಗತಿ ಮೇಲೆ ತನಿಖೆ ಶುರು ಮಾಡಿದ್ದಾರೆ.

ಮೂಲತಃ ಶಿವಮೊಗ್ಗದವರಾಗಿದ್ದ ಕಮಲಾಕರ್ ಅನೇಕ ದಶಕ ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದರು.ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿತ್ತು.ಕಮಲಾಕರ್ ಅವರ ಆತ್ಮಹತ್ಯೆಗೆ ಶಿವಮೊಗ್ಗದ ಶಿಕ್ಷಣ ವಲಯ ಬೆಚ್ಚಿಬಿದ್ದಿದೆ.

Spread the love
Leave A Reply

Your email address will not be published.

Flash News