BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

DONT PERMIT TO KARNATAKA BUNDH-LETTER TO POLICE COMMISSIONOR:“ನಷ್ಟ ಕಟ್ಟಿಕೊಡಲಿಕ್ಕಾಗದವರಿಗೆ ಬಂದ್ ಗೂ ಅವಕಾಶ ಕೊಡಬೇಡಿ.ಮುಚ್ಚಳಿಕೆ ಬರೆಸಿಕೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತೆ..”

ಬೆಂಗಳೂರು: ಕನ್ನಡ ಪರ ಸಂಘಟನೆಗಳ ಹೋರಾಟಗಾರರೆಲ್ಲಾ ಕರ್ನಾಟಕ ಬಂದ್ ಮೂಡ್ ನಲ್ಲಿರುವಾಗ ಲೇ ವಿರೋಧಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರ ಲಾರಂಭಿಸಿವೆ.ಕರ್ನಾಟಕವನ್ನು ಸ್ಥಬ್ಧಗೊಳಿಸಿ, ಜನರಿಗೆಲ್ಲಾ ತೊಂದರೆ ಕೊಟ್ಟಿಕೊಂಡು, ವ್ಯಾಪಾರ ವಹಿವಾಟುಗಳನ್ನೆಲ್ಲಾ ಸ್ಥಗಿತಗೊಳಿಸಿ ಬಡ  ವ್ಯಾಪಾರಿಗಳ ತುತ್ತಿನ ಚೀಲಕ್ಕೆ ಕುತ್ತು ತರಿಸುವಂಥದ್ದು ಬೇಕಾ..ನೊಂದವರ ಹಿಡಿಶಾಪಕ್ಕೆ ತುತ್ತಾಗುವಂತದ್ದೆಲ್ಲಾ ಬೇಕಾ…ಎನ್ನುವಂಥ ಅಭಿಪ್ರಾಯಗಳು ವ್ಯಕ್ತವಾಗ್ತಿವೆ.ಆ ಪೈಕಿ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ಪೊಲೀಸ್ ಕಮಿಷನರ್ ಗೆ ಬರೆದಿರುವ ಇ-ಮೇಲ್ ಕನ್ನಡ ಪರ ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳುವಂತಿದೆ.

ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್

ಕರ್ನಾಟಕ್ ಬಂದ್ ಗೆ ಬೆಂಬಲ ಕೊಟ್ಟರೇನೇ ಕನ್ನಡಾಭಿಮಾನನ….ಇಲ್ಲವಾದ್ರೆ ಅದು ನಿರಭಿಮಾನವಾ.. ಅವಮಾನಿಸುವಂತದ್ದಾ ಎನ್ನುವ ವಾದಕ್ಕೆ ಎಡೆ ಮಾಡಿ ಕೊಡುವಂಥ ಸಂಗತಿಗಳನ್ನು ಒಳಗೊಂಡ ಇ-ಮೇಲ್ ನ್ನು ವೆಂಕಟೇಶ್ ಅವರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ರವಾನಿಸಿದ್ದಾರೆ.ಅದರಲ್ಲಿ ಅವರು ಪ್ರಸ್ತಾಪಿಸಿರುವಂಥ ಸಂಗತಿಗಳು..ಎತ್ತಿರುವ ಪ್ರಶ್ನೆಗಳು ಇವತ್ತಿನ ಕಾಲಘಟ್ಟದಲ್ಲಿ ಕನ್ನಡಪರ ಹೋರಾಟಗಾರರ ಬದ್ಧತೆ ಹಾಗೂ ನೈತಿಕತೆಯನ್ನು ಪ್ರಶ್ನಿಸುವಂತಿದೆ.

ಕೊರೊನಾ ಸನ್ನಿವೇಶದಲ್ಲಿ ಜನರ ಬದುಕುಗಳಿಗೆ ಆರ್ಥಿಕ ಹಿಂಜರಿತ ಎನ್ನೋದು ಬಲವಾದ ಪೆಟ್ಟು ನೀಡಿದೆ.ಇಂಥಾ ಸಂದರ್ಭದಲ್ಲಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಧೋರಣೆ ಖಂಡಿತಾ ಸರಿಯಲ್ಲ..ಈ ಹೋರಾಟಗಾರರಿಗೆ ಕರ್ನಾಟಕ್ ಬಂದ್ ನಿಂದ ಆಗಬಹುದಾದ ನಷ್ಟ ತುಂಬಿಕೊಡಲಿಕ್ಕೆ ಸಾಧ್ಯವಿದೆಯಾ..? ಎಂದು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್  ಪೊಲೀಸ್ ಕಮಿಷನರ್ ಗೆ  ಕನ್ನಡಪರ ಹೋರಾಟಗಾರರಿಂದ ಮುಚ್ಚಳಿಕೆ ಬರೆಯಿಸಿಕೊಂಡೇ  ಅನುಮತಿ ಕೊಡುವ ಬಗ್ಗೆ ಪರಿಶೀಲಿಸಿ ಎಂದು ಮನವಿ ಮಾಡಿದ್ದಾರೆ.

ಅಂದ್ಹಾಗೆ  ವಾಟಾಳ್, ಪ್ರವೀಣ್ ಶೆಟ್ಟಿ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಎಂಇಎಸ್ ನಿಷೇಧ ಆಗ್ರಹಿಸಿ ಇದೇ 31 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ.ಕನ್ನಡದ ಅಸ್ಮಿತೆಗೆ ಮರಾಠಿಗರಿಂದ ಅಪಮಾನವಾಗಿದೆ..ಇದು ಪ್ರತಿಯೋರ್ವ ಕನ್ನಡಿಗ ಖಂಡಿಸುವಂತ ಸಂಗತಿಯೇ ಸರಿ..ಆದ್ರೆ ಕರ್ನಾಟಕ ಬಂದ್ ನಿಂದ ಆಗಬಹುದಾದ ನಷ್ಟ ತುಂಬಿಕೊಡುವವರ್ಯಾರು..? ಕೊರೊನಾದಂಥ ಸನ್ನಿವೇಶದಲ್ಲಿ ಒಂದಿಡೀ ದಿನ ಬಂದ್ ಆಗುವುದರಿಂದ ಆಗಬಹುದಾದ ನಷ್ಟ ಜನಜೀವನವನ್ನು ಹೇಗೆಲ್ಲಾ ಬಾಧಿಸಬಹುದೆನ್ನುವ ಪರಿಕಲ್ಪನೆ ಬಂದ್ ಗೆ ಕರೆ ಕೊಟ್ಟಿರುವವರಿಗೆ ಇದೆಯೇ ಎನ್ನುವುದು  ಕಮಲ ಪಂತ್ ಅವರಿಗೆ  ವೆಂಕಟೇಶ್ ಮಾಡಿರುವ ಮನವಿ.

ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ಪೊಲೀಸ್ ಕಮಿಷನರ್ ಗೆ ಬರೆದಿರುವ ಇ-ಮೇಲ್
ಸಾಮಾಜಿಕ ಕಾರ್ಯಕರ್ತ  ವೆಂಕಟೇಶ್ ಪೊಲೀಸ್ ಕಮಿಷನರ್ ಗೆ ಬರೆದಿರುವ ಇ-ಮೇಲ್

ಬಂದ್ ಗೆ ಕರೆ ಕೊಟ್ಟರೆ, ಕರೆ ಕೊಟ್ಟವರಿಂದಲೇ ನಷ್ಟ ತುಂಬಿಸಿಕೊಡುವಂತೆ ಮುಚ್ಚಳಿಕೆ ಬರೆಯಿಸಿಕೊ ಳ್ಳಬೇಕೆಂದು ಈ ಹಿಂದೆಯೇ  ಕೋರ್ಟ್ ಗಳ ಆದೇಶವಿದೆ.ಬಂದ್ ಗೆ ಕರೆ ಕೊಡುವ ಮೂಲಕ ಕೇವಲ ತಮ್ಮ ಬೇಳೆ ಬೇಯಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವ ಕನ್ನಡ ಹೋರಾಟಗಾರರ ವಿಷಯದಲ್ಲೂ ಕೋರ್ಟ್ ನ ಆದೇಶವನ್ನು ಅನ್ವಯಿಸಬೇಕು.ಅದಕ್ಕೆ ಒಪ್ಪಿದ ಮೇಲೆಯೇ ಬಂದ್ ಗೆ ಅವಕಾಶ ಕೊಡಬೇಕು.

ಮಹಾರಾಷ್ಟ್ರ ಏಕೀಕರಣ ಸಮಿತಿ( ಎಂಇಎಸ್) ನ್ನು ಬ್ಯಾನ್ ಮಾಡಬೇಕೆನ್ನುವುದಕ್ಕೆ ಯಾವೊಬ್ಬ ಕನ್ನಡಿಗನ ವಿರೋಧವಿಲ್ಲ.ಆದ್ರೆ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಕನ್ನಡಪರ ಹೋರಾಟಗಾರರು ಮುಖ್ಯಮಂತ್ರಿ ಮನೆ ಮುಂದೆ, ಸಂಸದರ ಮನೆಗಳ ಮುಂದೆ,ಜವಾಬ್ದಾರಿಯುತ ಶಾಸಕರುಗಳ ಮನೆ ಮುಂದೆ ಎಷ್ಟು ದಿನವಾದ್ರೂ ಪ್ರತಿಭಟನೆ ಮಾಡಲಿ,ನಮ್ಮ ರಾಜಕಾರಣಿಗಳಿಂದ ಬದಲಾವಣೆ ಸಾಧ್ಯವಿದೆಯೇ ಹೊರತು,ಇದಕ್ಕಾಗಿ ಕರ್ನಾಟಕವನ್ನು ಬಂದ್ ಮಾಡಿಸುತ್ತೇವೆನ್ನುವ ವಾದ ಬಾಲಿಶ ಹಾಗೂ ಮೂರ್ಖತನದ ಪರಮಾವಧಿ.ಬಂದ್ ಮಾಡಿಸಿ ಎಲ್ಲರ ಹಿಡಿಶಾಪಕ್ಕೆ ತುತ್ತಾಗುವುದಷ್ಟೇ ಅಲ್ಲ, ಕೋಟ್ಯಾಂತರ ನಷ್ಟಕ್ಕೂ ಹೋರಾಟಗಾರರು ಕಾರಣವಾಗುವುದು ಎಷ್ಟು ಸರಿ,..ಬಂದ್ ಒಂದೇ ಎಲ್ಲಕ್ಕೂ ಪರಿಹಾರವಲ್ಲ..ಹಾಗಾಗಿ ಕನ್ನಡಪರ ಹೋರಾಟಗಾರರು ತಮ್ಮ ನಿಲುವು-ನಿರ್ದಾರಗಳ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಬಂದ್ ಗೆ ಅವಕಾಶ ನೀಡುವಂತೆ ಯಾವುದೇ ಪ್ರಸ್ತಾವನೆ-ಮನವಿ ಬಂದಿಲ್ಲ: ಬಂದ್ ಗೆ ಮುಚ್ಚಳಿಕೆ ಬರೆಯಿಸಿಕೊಳ್ಳದೆ ಅವಕಾಶ ಕೊಟ್ಟರೆ ಅದು ಕೋರ್ಟ್ ಆದೇಶ ಧಿಕ್ಕರಿಸಿದಂತಾ ಗುತ್ತದೆ.ನ್ಯಾಯಾಂಗ ನಿಂದನೆಯಾಗುತ್ತದೆ.ಇದನ್ನು ಕಮಿಷನರ್ ಕಮಲಪಂತ್ ಆಲೋಚಿಸಬೇಕಿದೆ. ಹಾಗಾಗಿ ಕನ್ನಡಪರ ಹೋರಾಟ ಗಾರರನ್ನು ಕರೆಯಿಸಿ ಅವರ ಮನವೊಲಿಸಬೇಕು..ಒಪ್ಪದಿದ್ದಲ್ಲಿ ಕೋರ್ಟ್ ಆದೇಶವನ್ನು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.ಮೇಲ್ಕಂಡ ಇ-ಮೇಲ್ ನ್ನು ಪರಿಶೀಲಿಸಿರುವ ಆಯುಕ್ತ ಕಮಲಪಂತ್ ಈವರೆಗೂ ಕರ್ನಾಟಕ ಬಂದ್ ಗೆ ಅವಕಾಶ ನೀಡಬೇಕೆಂದೇನು ಕನ್ನಡಪರ ಹೋರಾಟಗಾರರು ನಮಗೆ ಮನವಿ ಸಲ್ಲಿಸಿಲ್ಲ.ಒಂದ್ವೇಳೆ ಸಲ್ಲಿಸಿದ್ದಲ್ಲಿ ಕೋರ್ಟ್ ನ ಸುತ್ತೋಲೆ-ಆದೇಶದ ಅನ್ವಯವೇ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅದೇನೇ ಆಗಲಿ ಕರ್ನಾಟಕ ಬಂದ್ ಮುಂದಿಟ್ಟುಕೊಂಡು ಅನೇಕರು ತಮ್ ತಮ್ ಬೇಳೆ ಬೇಯಿಸಿಕೊಳ್ಳುತ್ತಿರುವ ನಡುವೆ ಬಡ- ಶ್ರೀಸಾಮಾನ್ಯನ ಮೇಲಾಗುವಂಥ ದುಷ್ಪರಿಣಾಮಗಳ ಬಗ್ಗೆ ಯಾರೊಬ್ಬರೂ ಆಲೋಚಿಸುತ್ತಿಲ್ಲ ಎನ್ನುವುದೇ ದುರಾದೃಷ್ಟಕರ.

Spread the love

Related Articles

Leave a Reply

Your email address will not be published.

Back to top button
Flash News