FROM TODAY TO TEN DAYS-NIGHT CURFEW: ಇಂದಿನಿಂದ ನೈಟ್ ಕರ್ಫ್ಯೂ:10 ಗಂಟೆಗೆಲ್ಲಾ ಬಾರ್-ಪಬ್ ಕ್ಲೋಸ್-ನಿಯಮ ಮೀರಿದ್ರೆ ಕೇಸ್ ಪಕ್ಕಾ..

ಎಲ್ಲೆಡೆ ಪೊಲೀಸ್ ಹದ್ದುಗಣ್ಣು- ನಾಕಾಬಂಧಿ-ಯಾಮಾರಿಸೋ ಮಾತೇ ಇಲ್ಲ:ಪೊಲೀಸ್ ಕಮಿಷನರ್ ಕಮಲ ಪಂತ್ ಖಡಕ್ ಎಚ್ಚರಿಕೆ

0

ಬೆಂಗಳೂರು:ಕೊರೊನಾ -ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವಂತೆ ನೈಟ್ ಕರ್ಫ್ಯೂ ನ್ನು ಪ್ರಾಯೋಗಿಕ ವಾಗಿ ಜಾರಿ ಮಾಡೊಕ್ಕೆ ಮುಂದಾಗಿರುವ ಸರ್ಕಾರ ಇಂದು ರಾತ್ರಿಯಿಂದಲೇ ಅದನ್ನು ಅನ್ವಯಿಸೊಕ್ಕೆ ಮುಂದಾಗಿದೆ.ಪೊಲೀಸ್ ಕಮಿಷನರ್ ಕಮಲಪಂತ್ ಈ ಬಗ್ಗೆ ನಾಗರಿಕರಿಗೆ ಸವಿಸ್ತಾರವಾದ ವಿವರಣೆ ಹಾಗೂ ಎಚ್ಚರಿಕೆ ನೀಡಿದ್ದಾರೆ ಕೂಡ.

ಪಬ್, ಬಾರ್ ರೆಸ್ಟೋರೆಂಟ್ ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು. ಎಮರ್ಜೆನ್ಸಿ ಕೆಲಸ ಇರುವವರು ಬಿಟ್ರೆ ಬೇರೆ ಯಾರು ಹೊರ ಬರೋದಕ್ಕೆ ಬಿಡಲ್ಲ‌ ಜನ ಅದನ್ನ ಪಾಲಿಸಬೇಕು, ಉಲ್ಲಂಘನೆ ಮಾಡಬಾರದು. ನೈಟ್ ಪ್ಯಾಟ್ರೋಲಿಂಗ್ ಇರುತ್ತೆ. ಸುಮ್ಮನೆ ಓಡಾಡಿದ್ರೆ, ವಶಕ್ಕೆ ಪಡೆಯುತ್ತೇವೆ. ಯಾವುದೇ ಪಾಸ್ ಕೊಡಲ್ಲ. ಸೂಕ್ತ ದಾಖಲೆ ಕೊಟ್ಟು ಓಡಾಡಬಹುದು ಎಂದು ಹೇಳಿದರು.

ಅಸ್ಪತ್ರೆಗೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಟಿಕೆಟ್ ತೋರಿಸಿ ಪ್ರಯಾಣಿಕರು ಟ್ರಾವೆಲ್ ಮಾಡಬಹುದು. ಇಂದಿರಾನಗರ, ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಓಡಾಡೋಕೆ ಬಿಡಲ್ಲ.

ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ. ರಾತ್ರಿ 10 ಗಂಟೆ ಬಳಿಕ ಜನರ ಓಡಾಟ, ಮೋಜಿಗೆ ಬ್ರೇಕ್ ಹಾಕಲಾಗಿದೆ.. ರಾತ್ರಿ 10 ಗಂಟೆ ಬಳಿಕ  ಎಂಜಿ ರೋಡ್,‌ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಲಿದೆ.. ಹೊಸ ವರ್ಷದ ಭರ್ಜರಿ ಪಾರ್ಟಿಗಳಿಗೆ ಬ್ರೇಕ್ ಹಾಕಲು ತಯಾರಿ ಶುರುಮಾಡಿದ್ದೇವೆ.. ಎಂಜಿ ರೋಡ್ ಸುತ್ತಮುತ್ತ 100ಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆಗೆ ಸಿದ್ದತೆ ಮಾಡಲಾಗಿದೆ.

ನ್ಯೂ ಇಯರ್ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದ ಅವರು, ಸರ್ಕಾರದ ಆದೇಶದ ಪ್ರಕಾರ  ರಾತ್ರಿ ಹತ್ತು ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ನೈಟ್ ಕರ್ಪ್ಯೂ  ಇರುತ್ತೆ‌ .ಯಾರು ಹೊರಗಡೆ ಓಡಾಡೋಕೆ ಬಿಡಲ್ಲ. ಬಸ್, ಕ್ಯಾಬ್ ಇರುತ್ತೆ. ನಾಕಾಬಂದಿ ಮಾಡಿ ಎಲ್ಲ ಕಡೆ ಬಂದ್ ಮಾಡ್ತಿವಿ. ನಮ್ಮ ಪ್ಯಾಟ್ರೋಲಿಂಗ್ ಇರುತ್ತೆ. ಉಲ್ಲಂಘನೆ ಮಾಡಿದ್ರೆ ಎನ್‌ಡಿಎಂಎ ಕೇಸ್ ಆಗುತ್ತೆ ಎಂದು ವಿವರಿಸಿದರು.

ನ್ಯೂ ಇಯರ್ ದಿನ ಪಾರ್ಟಿ ಪಬ್ಬು-ಮೋಜು ಮಸ್ತಿ ಅಂಥಾ ಬೀದಿಗೆ ಬಂದ್ ನಿಯಮ ಉಲ್ಲಂಘಿಸಿದ್ರೆ ಕೇಸ್ ಜಡಿತೀವಿ ಎಂದು ಬೆಂಗಳೂರಿನ ಜನರಿಗೆ ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ನ್ಯೂ ಇಯರ್ ಗೆ ಪಬ್ಲಿಕ್ ಪ್ಲೇಸ್ ನಲ್ಲಿ ಜನ ಸೇರೋವಂತಿಲ್ಲ‌ ಎಲ್ಲ

 • ***ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ
 • ***ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಸಂಚಾರ ಸ್ಥಬ್ಧ
 • ***ಯಾವುದೇ ವಾಣಿಜ್ಯ ಚಟುವಟಿಕೆ ಇರೊಲ್ಲ
 • ***10ರ ನಂತರ ರಸ್ತೆ ಮೇಲೆ ಅನಗತ್ಯವಾಗಿ ಸಂಚರಿಸುವಂತಿಲ್ಲ.
 • ***ಯಾರಿಗೂ ಪಾಸ್ ಕೊಡುವ ವ್ಯವಸ್ಥೆಯಿಲ್ಲ
 • ***ಆಸ್ಪತ್ರೆ-ಎಮರ್ಜೆನ್ಸಿ ಇದ್ದರಷ್ಟೇ ಸಂಚಾರಕ್ಕೆ ಅವಕಾಶ
 • ***ಪಬ್-ಬಾರ್-ರೆಸ್ಟೋರೆಂಟ್ ಗೂ ಸಮಯ ನಿಗಧಿ
 • ***ನಿಯಮ ಮೀರಿ ಚಟುವಟಿಕೆ ನಡೆಸಿದ್ರೆ ಕೇಸ್ ಪಕ್ಕಾ
 • ***ರಾತ್ರಿಯಿಂದ ಪೊಲೀಸರಿಂದ ನೈಟ್ ಪ್ಯಾಟ್ರೋಲಿಂಗ್
 • ***ನ್ಯೂ ಇಯರ್ ಆಚರಣೆಗೂ ಅನ್ವಯವಾಗಲಿದೆ ನೈಟ್ ಕರ್ಫ್ಯೂ
 • ***ಎಲ್ಲೆಡೆ ಸಿಸಿಟಿವಿ ಅಳವಡಿಕೆ-ಮೋಜು ಮಸ್ತಿಗೆ ಬ್ರೇಕ್

ಕಡೆ ಸಿಸಿಟಿವಿ ಹಾಕ್ತಿವಿ. ಸುಮ್ಮನೆ ಓಡಾಡಿದ್ರೆ ಕ್ರಮ ತೆಗೆದುಕೊಳ್ಳತ್ತೇವೆ. ಸುಮ್ಮನೆ ಓಡಾಡಿದ್ರೆ ವಶಕ್ಕೆ ಪಡೆಯುತ್ತೆವೆ. ಹೊಟೇಲ್ ರೆಸ್ಟೋರೆಂಟ್ ಗೆ 50 ಪರ್ಸೆಂಟ್ ಅವಕಾಶ ಇದೆ‌ ಅವರು ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು. ಅವರ ಟೀಕೆ ಟಿಪ್ಪಣಿ ಇದ್ರೆ ಸರ್ಕಾರದ ಮಟ್ಟದಲ್ಲಿ ಮಾಡಲಿ. ಸರ್ಕಾರಿ ಆದೇಶವನ್ನ ನಾವು ಪಾಲನೆ ಮಾಡುತ್ತೇವೆ. ಕೊವೀಡ್ ನಿಯಮಗಳ ಅನ್ವಯ ಜನ ಎಲ್ಲಿಯೂ ಸೇರಬಾರದು, ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳತ್ತೇವೆ ಎಂದರು.

ಎಂಜಿ ರೋಡ್ ಸುತ್ತಮುತ್ತ ಪೊಲೀಸರನ್ನ ನಿಯೋಜಿಸಿ ಕಟ್ಟೇಚ್ಚರ.. ಬ್ಯಾರಿಕೇಡ್ ಗಳ ನಿರ್ಮಾಣ ಮಾಡಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ರಾತ್ರಿ ಹತ್ತು ಗಂಟೆ ಬಳಿಕ ನೈಟ್ ಕರ್ಪ್ಯೂ ಇರೋದ್ರಿಂದ ಪಬ್, ಬಾರ್ ರೆಸ್ಟೋರೆಂಟ್ ಕ್ಲೋಸ್ ಮಾಡಿಸಲಾಗುವುದು.  ಬಸ್, ಕ್ಯಾಬ್ ಇರುತ್ತೆ. ನಗರದ ಏರಿಯಾಗಳಲ್ಲಿ ನಾಕಾಬಂದಿ ಮಾಡಿ ಎಲ್ಲ ಕಡೆ ಬಂದ್ ಮಾಡ್ತಿವಿ ಎಂದು ಪೊಲೀಸ್ ಆಯುಕ್ತ ಕಮಲಪಂತ್ ಹೇಳಿದ್ದಾರೆ.

Spread the love
Leave A Reply

Your email address will not be published.

Flash News