CM CHANGE.. IS IT MEDIA HYPE OR HIGH-COMMAND DECISION…?! :ನೋ…..ನೆವರ್…..ಇಂಪಾಸಿಬಲ್…..ಚಾನ್ಸೇ ಇಲ್ಲ… ಎಂದ್ರೂ ಸಿಎಂ ಬದಲಾಗೋದು ಪಕ್ಕಾ..ಅಂತೆ..?!

ಅನಾರೋಗ್ಯ” ಅಸ್ತ್ರ ಪ್ರಯೋಗಿಸಿ ಸಿಎಂ ಬದಲಾಯಿಸಲು ಹೈಕಮಾಂಡ್ ಪ್ಲ್ಯಾನ್ ರೆಡಿ.- ಸಿಎಂ ಬದಲಾವಣೆ ಇಲ್ಲ ಎಂದ್ಹೇಳಿಸುತ್ತಿರುವುದೂ ಒಂದು ಗಿಮಿಕ್ ?

0
ಸಿಎಂ ಬದಲಾವಣೆ ಪ್ರಹಸನ ಕುರಿತು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸಿದ್ದ ಸುದ್ದಿಯ ಝಲಕ್..
ಸಿಎಂ ಬದಲಾವಣೆ ಪ್ರಹಸನ ಕುರಿತು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸಿದ್ದ ಸುದ್ದಿಯ ಝಲಕ್..

ಬೆಂಗಳೂರು: ಹೈಕಮಾಂಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಸಿಎಂ ಬದಲಾವಣೆ ಹಾಗೂ ಅವರ ಅನಾರೋಗ್ಯ..ದೆಹಲಿಯಿಂದ ಬಂದ ಪಕ್ಷದ ವರಿಷ್ಠರು ಹಾಗೂ ಕೈಗೆ ಕಾಲಿಗೆ ಸಿಗೋ ಬಿಜೆಪಿ ನಾಯಕರೆಲ್ಲಾ ಸಿಎಂ ಬದಲಾವಣೆ ಮಾದ್ಯಮಗಳ ಊಹೆ-ಊಹಾಪೋಹ ಎಂದೇಳುವುದು ಕಾಮನ್ ಆಗಿದೆ.ಆದ್ರೆ ಈ ಎಲ್ಲಾ ಡ್ರಾಮದ ಸೃಷ್ಟಿಕರ್ತರು,ನಿರೂಪಕರು, ನಿರ್ದೆಶಕರು ಹಾಗೂ ಕಲಾವಿದರಾದಿಯಾಗಿ ಎಲ್ಲವೂ ಆಗಿರುವುದು ಪಕ್ಷದ ಹೈಕಮಾಂಡ್ ಹಾಗೂ ಥಿಂಕ್ ಟ್ಯಾಂಕ್ಸ್ ಎನ್ನುವುದು ಕೂಡ ಅಷ್ಟೇ ಸತ್ಯ.

ಕನ್ನಡ ಮಾದ್ಯಮ ಕ್ಷೇತ್ರದಲ್ಲಿ ಕನ್ನಡ ಫ್ಲ್ಯಾಶ್ ನ್ಯೂಸ್ ಮೊದಲು ಸಿಎಂ ಬದಲಾವಣೆಯ ಅವಕಾಶಗಳು.. ಅದಕ್ಕೆ ಕಾರಣಗಳಾಗಬಹುದಾದ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಿತ್ತು.ಇದನ್ನೇ ಪ್ರಮುಖವಾಗಿಟ್ಟುಕೊಂಡು ಮಾದ್ಯಮಗಳು ಸಿಎಂ ಬಸವರಾಜ ಬೊಮ್ಮಾಯಿ ಅವರಾದಿಯಾಗಿ ಪಕ್ಷದ ವರಿಷ್ಠರು-ಸಚಿವರು ಹಾಗೂ ಶಾಸಕರನ್ನು ಪ್ರಶ್ನಿಸಿದ್ದವು.ಒನ್ಸ್ ಅಗೈನ್ ಅದೇ ಹಳೇ ಉತ್ತರದ ರೂಪವಾಗಿ ಇದೆಲ್ಲಾ ನಿಮ್ಮ ಕಲ್ಪನೆ-ಊಹೆ-ಸತ್ಯಕ್ಕೆ ದೂರವಾದದ್ದೆನ್ನುವ ಮಾತುಗಳು ಕೇಳಿಬಂದಿದ್ದವು.

ಹಾಗಾದ್ರೆ ಹೈಕಮಾಂಡ್ ಬಸವರಾಜ ಬೊಮ್ಮಾಯಿ ವಿಷಯದಲ್ಲಿ ಅಷ್ಟೊಂದು ತೃಪ್ತವಾಗಿದೆಯೇ..? ಅವರ ಕಾರ್ಯವೈಖರಿಯಿಂದ ಸಮಾಧಾನಗೊಂಡಿದೆಯೇ..? ಅವರನ್ನು 2023ರವರೆಗೆ ಬದಲಾಯಿಸುವುದೇ ಇಲ್ಲವೇ..? ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಸಲಿದೆಯೇ..? ಹೀಗೊಂದಿಷ್ಟು ಪ್ರಶ್ನೆಗಳನ್ನಿಟ್ಟುಕೊಂಡು ಒಟ್ಟಾರೆ ವಾತಾವರಣ ನೋಡಿದ್ರೆ ಖಂಡಿತಾ ಇಲ್ಲ ಎನ್ನುವುದು ಮಾದ್ಯಮಗಳಿಂದಲ್ಲ..ಸ್ವತಃ ಪಕ್ಷದ ಅನೇಕರಿಂದಲೇ ಕೇಳಿಬರುತ್ತಿದೆ.

ಬಸವರಾಜ ಬೊಮ್ಮಾಯಿ ಅವರನ್ನು ವರ್ಷ ಕಳೆಯುವುದರೊಳಗೆ  ಸಿಎಂ ಸ್ಥಾನದಿಂದ ಕೆಳಕ್ಕಿಳಿಸುವುದು ಹೈಕಮಾಂಡ್ ಅಂದುಕೊಂಡಷ್ಟು ಸಲೀಸಲ್ಲ…ಜಾತಿ ಯಾಧಾರಿತ ರಾಜಕೀಯ ವ್ಯವಸ್ಥೆಯಲ್ಲಿ  ಅದು ಅಸಾಧ್ಯವಲ್ಲ ಎನ್ನುವುದು ವರಿಷ್ಟರಿಗೂ ಗೊತ್ತು..ಹಾಗಾಗಿನೇ ಬದಲಾವಣೆಗೊಂದು ನೆಪ ಎನ್ನುವಂತೆ ಬಸವರಾಜ ಬೊಮ್ಮಾಯಿ ಅವರ ಅನಾರೋಗ್ಯವನ್ನೇ ಮುನ್ನಲೆಗೆ ತಂದು ಅದನ್ನೇ ಅಸ್ತ್ರವನ್ನಾಗಿಸಿಕೊಳ್ಳೊಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅಸಾಧ್ಯ ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಪದತ್ಯಾಗಕ್ಕೆ ಅದೇ ಕಾರಣವಾಗಲಿದೆಯೇ..?
ಅಸಾಧ್ಯ ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಪದತ್ಯಾಗಕ್ಕೆ ಅದೇ ಕಾರಣವಾಗಲಿದೆಯೇ..?

ಇದರ ಮೊದಲ ಭಾಗ ಎನ್ನುವಂತೆ ಕಾಲಿನ ಸಮಸ್ಯೆಯನ್ನು ಬಿಂಬಿಸಲಾಗುತ್ತಿದ್ದು,ನಾಟಿ ಚಿಕಿತ್ಸೆ ಪಡೆಯುತ್ತಿರುವ ಸೀನ್ ಕ್ರಿಯೇಟ್ ಮಾಡಲಾಗ್ತಿದೆಯಂತೆ. ಅಸಾಧಾರಣವಾದ ನೋವಿನಿಂದ ಮುಖ್ಯಮಂತ್ರಿಗಳು ಬಳಲುತ್ತಿದ್ದಾರೆನ್ನುವ ಸನ್ನಿವೇಶ ಸೃಷ್ಟಿಸಲಾಗ್ತಿದೆಯಂತೆ. ಜನವರಿ ಮೊದಲ ವಾರದ ವೇಳೆಗೆ ಆ ನೋವು ವಿಪರೀತವಾಗಿ ವೈದ್ಯರು ಅಮೆರಿಕಾದಲ್ಲೋ..ಇಥವಾ ವಿದೇಶದ ಇನ್ನೆಲ್ಲೋ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ ಎಂದು ಹೇಳಿಸಲಾಗುತ್ತದೆಯಂತೆ.. ಅದರಂತೆಯೇ ಬೊಮ್ಮಾಯಿ ವಿದೇಶಕ್ಕೆ ಹಾರಲಿದ್ದಾರಂತೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಬೇರೆಯವರಿಗೆ ಸಿಎಂ ಹೊಣೆಗಾರಿಕೆ ವರ್ಗಾಯಿಸುತ್ತಿರುವುದಾಗಿ ಅವರಿಂದಲೇ ಹೇಳಿಸುವ ಕೆಲಸಕ್ಕೂ ಹೈಕಮಾಂಡ್ ಸ್ಕೆಚ್ ರೆಡಿ ಮಾಡಿಟ್ಟುಕೊಂಡಿದೆ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಪಕ್ಷದ ವಿಶ್ಚಸನೀಯ ಮೂಲಗಳಿಂದಲೇ ತಿಳಿದುಬಂದಿದೆ.

ಬಸವರಾಜ ಬೊಮ್ಮಾಯಿ ಬದಲಾವಣೆಗೆ ಸಂಕಲ್ಪಮಾಡಿಯೇ ತೀರಿದೆ ಎನ್ನಲಾಗುತ್ತಿರುವ ಹೈಕಮಾಂಡ್.!
ಬಸವರಾಜ ಬೊಮ್ಮಾಯಿ ಬದಲಾವಣೆಗೆ ಸಂಕಲ್ಪಮಾಡಿಯೇ ತೀರಿದೆ ಎನ್ನಲಾಗುತ್ತಿರುವ ಹೈಕಮಾಂಡ್.!

ಇಷ್ಟು ದಿನ ಇಲ್ಲದ ಅನಾರೋಗ್ಯ ದಿಢೀರ್ ಮುನ್ನಲೆಗೆ ಬರೊಕ್ಕೆ ಕಾರಣವೇನು..?ಎನ್ನುವ ಪ್ರಶ್ನೆಗೆ ಉತ್ತರವೇ ಸಿಎಂ ಬದಲಾವಣೆಯ ಪ್ರಹಸನ ಎನ್ನಲಾಗುತ್ತಿದೆ.ಬೇರೆ ಕಾರಣವನ್ನಿಟ್ಟುಕೊಂಡು ಬದಲಾವಣೆಗೆ ಕೈ ಹಾಕಿದರೆ ಅದು ಜೇನುಗೂಡಿಗೆ ಕಲ್ಲು ಹೊಡೆದಂತೆ ಎನ್ನುವ ಸತ್ಯ ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ.ಹಾಗಾಗಿನೇ ಅನಾರೋಗ್ಯದ ಅಸ್ತ್ರ ಪ್ರಯೋಗಿಸಿದರೆ ಎಲ್ಲಾ ರೀತಿಯಲ್ಲೂ ಪರಿಸ್ಥಿತಿ ತಿಳಿಯಾಗಬಹುದೆನ್ನುವುದು ಹೈಕಮಾಂಡ್ ಆಲೋಚನೆ..ಇದಕ್ಕೆ ಅಗತ್ಯವಿರುವ ಎಲ್ಲಾ ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ.

ಇದರ ನಡುವೆಯೇ ಕೆಲವರಿಂದ ಸಿಎಂ ಬದಲಾವಣೆ ಮಾದ್ಯಮಗಳ ಸೃಷ್ಟಿಯಷ್ಟೆ..ಅವರೇ ನಮ್ಮ ಸಿಎಂ..ಅವರು ತಮ್ಮ ಅವಧಿಪೂರ್ಣಗೊಳಿಸಲಿದ್ದಾರೆ.ಅವರ ನೇತೃತ್ವದಲ್ಲೇ 2023ರ ಚುನಾವಣೆಗೆ ಹೋಗ್ತೇವೆ ಎಂದು ಹೇಳಿಸುತ್ತಿರುವುದು ಕೂಡ ಗಿಮಿಕ್ ಎನ್ನಲಾಗ್ತಿದೆ.ಈ ನಡುವೆ ಕೆಲವರಿಂದ ಬದಲಾವಣೆಯ ಸಾಧ್ಯತೆಗಳ ಬಗ್ಗೆಯೂ ಅಲ್ಲೊಂದು..ಇಲ್ಲೊಂದು ಹೇಳಿಕೆ ಕೊಡಿಸುವ ಪ್ರಯತ್ನಗಳೂ ಆಗ್ತಿವೆ.ಜತೆಗೇ ಇನ್ನು ಕೆಲವು ಶಾಸಕರು ಅನಾರೋಗ್ಯವಿದ್ದರೆ ಅವರು ರೆಸ್ಟ್ ಪಡೆಯಲಿ..ಅವರು ಆರೋಗ್ಯವಾಗಿದ್ದರೆ ಉತ್ತಮ ಆಡಳಿತ ಸಾಧ್ಯ..ಅದು ಇಲ್ಲಿಯಾದರೂ ಓಕೆ..ವಿದೇಶದಲ್ಲಿಯಾದರೂ ಸರಿ ಎನ್ನುವಂತೆಯೂ ಹೇಳಿಕೆ ಕೊಡಿಸಲಾಗುತ್ತಿದೆ( ಉದಾಹರಣೆ;ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ..)

ಸೋ ..ಇದೆಲ್ಲಾ ಸಿಎಂ ಬದಲಾವಣೆಯ ಮುನ್ಸೂಚನೆಗಳಾ ಎನ್ನುವ ಅನುಮಾನವನ್ನು ಪುಷ್ಟೀಕರಿಸುವ ಬೆಳವಣಿಗೆಗಳೆಂದೇ ಪಕ್ಷದ ಮೂಲಗಳು ವಿಶ್ಲೇಷಿಸುತ್ತಿವೆ.ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಸಾಕಷ್ಟು ಚರ್ಚೆ-ಪುನರ್ ಮನನದಂಥ ಚಟುವಟಿಕೆಗಳು ನಡೆಯುತ್ತಿವೆಯಂತೆ.ಬಸವರಾಜ ಬೊಮ್ಮಾಯಿ ಅವರಿಗೂ ಒಟ್ಟಾರೆ ಪ್ಲ್ಯಾನ್ ನ್ನು ಮನವರಿಕೆ ಮಾಡಿಕೊಡಲಾಗಿದೆಯಂತೆ.ಇದಕ್ಕೆ ಒಲ್ಲದ ಮನಸಿನಿಂದಲೇ ಬೊಮ್ಮಾಯಿ ಸಮ್ಮತಿಸಿದ್ದಾರಂತೆ….ಹೀಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ.ಬಸವರಾಜ ಬೊಮ್ಮಾಯಿ ನಿರ್ಗಮನದಿಂದ ಸೃಷ್ಟಿಯಾಗಬಹುದಾದ ನಿರ್ವಾತವನ್ನು ಸಮರ್ಥವಾಗಿ ತುಂಬಬಲ್ಲ ಸೇನಾನಿಯನ್ನು ಹುಡುಕುವ ಪ್ರಯತ್ನವೂ ಯಶಸ್ವಿಯಾಗಿದೆಯಂತೆ.ಅವರು ಯಾರು ಎನ್ನುವುದನ್ನು ಕಾಲ ಪರಿಪಕ್ವವಾದಾಗ ಹೈಕಮಾಂಡೇ ಹೇಳಲಿದೆಯಂತೆ..ಒಟ್ಟಿನಲ್ಲಿ ಸಿಎಂ ಬದಲಾವಣೆ ಎನ್ನೋ ಸಿನೆಮಾದ ಟ್ರೈಯರ್ ಸಧ್ಯ ಬಿಡುಗಡೆಯಾಗಿದ್ದು ಪೂರ್ಣ ಪ್ರಮಾಣದ ಸಿನೆಮಾ ಜನವರಿ ಅಂತ್ಯದೊಳಗೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆಯಂತೆ..

Spread the love
Leave A Reply

Your email address will not be published.

Flash News