BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಡಗು-ಬಿನ್ನಾಣರಾಜ್ಯ-ರಾಜಧಾನಿಸಿನೆಮಾ ಹಂಗಾಮ

BIGBOSS CELEBRITIES CONTROVERSIES: ಏನಿದೆಲ್ಲಾ “ಬಿಗ್ ಬಾಸ್”.!! ಅವತ್ತು ಕೀರ್ತಿ “ಕಿರಿಕ್“?! ಇವತ್ತು ಬಿಂದಾಸ್ ಬೆಡಗಿ ದಿವ್ಯಾ ಸುರೇಶ್ “ಯಡವಟ್ಟು”?!

ಬೆಂಗಳೂರು: ಸ್ವಲ್ಪನಾದರೂ ವಿವೇಚನೆ-ಸ್ವಂತಿಕೆ ಇದ್ದರೆ  ಇಂಥವರು ಆತ್ಮಾವಲೋಕನ ಮಾಡಿಕೊಳ್ಳಬೇಕು..ತಾವೇನು..ತಮ್ಮ ಸ್ಥಾನಮಾನದ ಘನತೆಯೇನು…ಅದರ ಗಾಂಭೀರ್ಯದ ಚೌಕಟ್ಟಿನಲ್ಲಿ ಹೇಗೆ ಬದುಕಬೇಕೆನ್ನುವುದನ್ನು ಕಲಿಯಬೇಕು. ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು. .ಅದೆಲ್ಲಾ ಇದ್ದಿದ್ದರೆ ಇವರೆಲ್ಲಾ ಹೇಗೆ ಸಮಾಜದಲ್ಲಿ ತಮ್ಮ ಫ್ಯಾನ್ ಫಾಲೋವರ್ಸ್ ಗೆ ಮಾದರಿಯಾಗಿ ಜೀವನ ನಡೆಸಬೇಕೆನ್ನುವುದನ್ನು ರೂಢಿಸಿಕೊಳ್ಳುತ್ತಿದ್ದರೇನೋ..?ಅದ್ಯಾವ ಪರಿಜ್ಞಾನವೂ ಇಲ್ಲದ ಇಂಥವರಿಂದ ಸಮಾಜಕ್ಕೆ ಇರುವ ಪ್ರಯೋಜನವಾದರೂ ಏನಿದೆಯೋ… ? ಇವರನ್ನು ಸೆಲೆಬ್ರಿಟಿಗಳೆಂದು ಅಭಿಮಾನದಿಂದ ಸಂಭಾವನೆಯನ್ನೂ ಕೊಟ್ಟು ಕಾರ್ಯಕ್ರಮಗಳಿಗೆ ಕರೆಯಿಸಿಕೊಳ್ಳುವ “ಪ್ರಾಯೋಜಕ”ರು ಇವರ ಯೋಗ್ಯತೆ ಅರ್ಥ ಮಾಡಿಕೊಂಡು ದೂರವಿಟ್ಟರೆ ಕೀರ್ತಿ-ಖ್ಯಾತಿಯ ಅಮಲು ಬಿಟ್ಟು ಜನಸಾಮಾನ್ಯರಾಗಿ ಬದುಕಬಲ್ಲರೇನೋ..

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಮೊನ್ನೆ ಮೊನ್ನೆಯಷ್ಟೇ ಕಿರಿಕ್ ಕೀರ್ತಿ ಎನ್ನುವ ಬಿಗ್ ಬಾಸ್ ಸೆಲೆಬ್ರಿಟಿ ಪಬ್ಬೋ..ಹೊಟೇಲ್ಲೋ ಒಂದರಲ್ಲಿ ಅಭಿಮಾನಿ ಜತೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿ ಸುದ್ದಿಯಾಗಿದ್ದ.ತನ್ನ ಮೇಲೆ ಯಾರೋ ಬಂದು ಹಲ್ಲೆ ಮಾಡಿದ ಎಂದು ಹೇಳಿದ್ದ.ಆದರೆ ತನ್ನದೇನೂ ತಪ್ಪೇ ಇಲ್ಲ ಎನ್ನುವಂತೆ ಬಿಂಬಿಸಿಕೊಂಡ ಕೀರ್ತಿ ವರ್ತನೆ ಬಗ್ಗೆ   ಸಾಕಷ್ಟು ಸಾರ್ವಜನಿಕವಾಗಿ ಟೀಕೆಯ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು…ಇದರ ಬೆನ್ನಲ್ಲೇ ನಿನ್ನೆ ರಾತ್ರಿ  ಬಿಗ್ ಬಾಸ್ ಖ್ಯಾತಿಯ ಮತ್ತೋರ್ವ “ಬಿಂದಾಸ್” ಹುಡುಗಿ ದಿವ್ಯಾ ಸುರೇಶ್ ಕಿರಿಕ್ ಮಾಡಿಕೊಂಡಿದ್ದಾಳೆ. ನೈಟ್ ಕರ್ಫ್ಯೂ ರೂಲ್ಸನ್ನೆಲ್ಲಾ ಬ್ರೇಕ್ ಮಾಡಿ ಮದ್ಯದ ಮತ್ತಲ್ಲಿ ಯಡವಟ್ಟು ಮಾಡಿಕೊಂಡು ಅವಮಾನ ತಾಳದೆ ಆಟೋದಲ್ಲಿ ಮುಖಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾಳೆ.

ಸಾಮಾನ್ಯವಾಗಿ ಹೊತ್ತಲ್ಲದ ಹೊತ್ತಲ್ಲಿ, ವಯಸ್ಸಲ್ಲದ ವಯಸ್ಸಲ್ಲಿ ಕೀರ್ತಿ-ಹೆಸರು ಬಂದ್ರೆ ಹೀಗೆಯೇ ಆಗುತ್ತೇನೋ.. ಎಲ್ಲಿಯೂ ಹೇಳಿಕೊಳ್ಳುವಂಥ ಹೆಸರನ್ನೇನು ಮಾಡದ ಈಗಲೂ ಒಂದೊಳ್ಳೆ ಅವಕಾಶಕ್ಕೆ ಹೋರಾಡುತ್ತಿರುವ ಸ್ಟ್ರಗಲ್ ಹುಡುಗಿ ಈ ದಿವ್ಯಾ ಸುರೇಶ್.ಬಿಗ್ ಬಾಸ್ ನಲ್ಲಿ ಏನೋ ಒಂದಷ್ಟು ಹೆಸರು ಮಾಡಿ ಹೊರ ಬಂದಾಕ್ಷಣ ಅದೇ ಟ್ರಂಪ್ ಕಾರ್ಡ್ ಪ್ಲೇ ಮಾಡಲಿಕ್ಕೆ ಹೋದರೆ ಆಗುತ್ತಾ..ಬಹುಷಃ ಅಂತದ್ದೊಂದು ಪ್ರಯೋಗ ಮಾಡಲಿಕ್ಕೆ ಹೋಗಿ ಸಾರ್ವಜನಿಕವಾಗಿ  ಛೀಮಾರಿ ಹಾಕಿಸಿಕೊಂಡಿದ್ದಾಳೆ.

ಅಂದ್ಹಾಗೆ ಆಗಿದ್ದೇನು ಗೊತ್ತಾ  ನೈಟ್ ಕರ್ಫ್ಯೂ ಇದೆ ಎಂದು ಮಾದ್ಯಮಗಳು ಬಾಯಿ ಬಡಿದು ಕೊಳ್ಳುತ್ತಲೇ ಇವೆ..ಇದು ಈಕೆಗೂ ಗೊತ್ತಿಲ್ಲ ಎಂದೇನಲ್ಲ.ಆದರೆ ಆ  ಕಾಮನ್ ಸೆನ್ಸ್ ಇಲ್ಲದೆ ಬ್ರಿಗೇಡ್ ರಸ್ತೆಯಲ್ಲಿರುವ ರಾಸ್ತಾ ಪಬ್ ನಲ್ಲಿ ಕುಡಿದು ಹೊರಬರುವಾಗ ಸಿಕ್ಕಾಕೊಂಡಿದ್ದಾಳೆ. ಮಾಡಿದ್ದೇ  ತಪ್ಪು ಅದನ್ನು ಒಪ್ಪಿಕೊಂಡು ಹೋಗೋದನ್ನು ಬಿಟ್ಟು.ಸೆಲಬ್ರಿಟಿಯಾಗಿ ಮಾದರಿಯಾ ಗಿರಬೇಕಾದವರು ಹೀಗೆ ಮಾಡಿದ್ದು ಸರಿನಾ ಎಂದು ಪ್ರಶ್ನಿಸಿದ್ರೆ ಮಾದ್ಯಮಗಳ ಮೇಲೆ ಹರಿಹಾಯ್ದು ಪ್ರಶ್ನಿಸಿದವರಿಗೆ ಅವಾಚ್ಯವಾಗಿ ನಿಂದಿಸಿ ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿ ಚೆನ್ನಾಗಿ ಉಗಿಸಿಕೊಂಡಿದ್ದಾಳೆ ದಿವ್ಯಾಸುರೇಶ್.

ನ್ಯೂ ಇಯರ್ ಸೆಲಬ್ರೇಷನ್ ಗೆ ರೂಲ್ಸ್ ಗಳ ಮೂಲಕ ಬ್ರೇಕ್ ಹಾಕಲಾಗಿದೆ ಎನ್ನೋ ಕಾಮನ್ ಸೆನ್ಸೂ ಇಲ್ಲದೆ ಬ್ರಿಗೇಡ್ ರಸ್ತೆಗೆ ಬಂದು ರಾಸ್ತಾ ಪಬ್ ನಲ್ಲಿ ಕುಡಿದು ಹೊರಬರುವಾಗ ರೂಲ್ಸ್ ಬಗ್ಗೆ ಪ್ರಶ್ನಿಸಿದ್ದೇ ದಿವ್ಯಾ ಪಿತ್ತ ನೆತ್ತಿಗೇರಿಸಿದೆ.ವಿವೇಚನೆ ಕಳೆದುಕೊಂಡು ಬೈಯ್ದಿದ್ದಾಳೆ.ಪರಿಸ್ಥಿತಿ  ತಹಬದಿ ಕಳೆದುಕೊಳ್ಳುತ್ತಿರುವುದನ್ನು ಮನಗಂಡ ಬಾಡಿಗಾರ್ಡ್ಸ್ ಆಕೆಯನ್ನು ಆಟೋದಲ್ಲಿ ಸೆಕ್ಯೂರ್ ಮಾಡಿ ಕರೆದುಕೊಂಡು ಹೋಗಿದ್ದಾರೆ.

ಅದೇನೇ ಆಗಲಿ ಬಿಗ್ ಬಾಸ್ ನಂಥ ಫ್ಲಾಟ್ ಫಾರ್ಮ್ ನಲ್ಲಿ ನಿರ್ಣಾಯಕ ಘಟ್ಟದವರೆಗೂ ಸ್ಪರ್ಧೆಯಲ್ಲಿದ್ದ ದಿವ್ಯಾ ಸುರೇಶ್ ಹೀಗೆ ಮಾಡಿ ಹೆಸರು ಹಾಳು ಮಾಡಿಕೊಂಡಿದ್ದು ಮಾತ್ರ ದುರಾದೃಷ್ಟಕರ. ಹೆಸರು ಗಳಿಸೋದು ಸುಲಭ.. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಮಾತ್ರ ಕಷ್ಟ.ಈಕೆಯ ಯಡವಟ್ಟಿನ ಬಗ್ಗೆ ಹೇಳುವಾಗ ಬಿಗ್ ಬಾಸ್ ನ ಫೈನಲಿಸ್ಟ್..ಪ್ರತಿಭಾವಂತ ಹುಡುಗ ಕಿರಿಕ್ ಕೀರ್ತಿ  ಮೊನ್ನೆ ಮೊನ್ನೆಯಷ್ಟೇ   ಅಭಿಮಾನಿ ಜತೆಗೆ  ರಂಪಾಟ ಮಾಡಿಕೊಂಡ ಘಟನೆಯನ್ನು ನೆನಪಿಸಬೇಕಾಗುತ್ತದೆ

ಶಿವಮೊಗ್ಗ ಜಿಲ್ಲೆ ಶಂಕರಘಟ್ಟದ ಕೀರ್ತಿನಿಜಕ್ಕೂ ಪ್ರತಿಭಾವಂತ.ಸ್ಟ್ರಗಲ್ ಮಾಡಿ ಮೇಲೆ ಬಂದಾತ.ಆದ್ರೆ -ಹೆಸರು ಬರುತ್ತಿದ್ದಂತೆ ವಿವೇಚನೆ ಮರೆತವನಂತೆ ವರ್ತಿಸಲಾರಂಭಿಸಿ ದ ಎನ್ನುವ ಬಗ್ಗೆ ದೂರುಗಳಿವೆ.ಬಿಗ್ ಬಾಸ್ ನಲ್ಲಿ ಫೈನಲ್ ಗೆ ಹೋಗಿ ಬಂದ ಮೇಲಂತೂ ತಾನು ಏನು ಎನ್ನುವುದನ್ನೇ ಮರೆತ  ಎನ್ನುವ ಮಾತುಗಳಿವೆ.

ಹುಕ್ಕಾ ಹೊಡೆಯುವ ಕ್ರೇಜ್ ಇತ್ತು ಎನ್ನುವ ಗಂಭೀರ ಆಪಾದನೆ ಕೀರ್ತಿ ಮೇಲಿದೆ.ದುಡಿಮೆಯ ಬಹುಪಾಲು ಹಣವನ್ನು  ಕನ್ನಿಂಗ್ ಹ್ಯಾಂ ರಸ್ತೆ-ಪೊಲೀಸ್ ಕಮಿಷನರ್ ಕಚೇರಿ ಹಿಂದಿನ ಕೂಡು ರಸ್ತೆಯಲ್ಲಿರುವ ಪಬ್ಒಂದರಲ್ಲಿ ಹುಕ್ಕಾ ಹೊಡೆಯುವು ದಕ್ಕೆ ಖರ್ಚು ಮಾಡುತ್ತಿದ್ದ ಎನ್ನುವುದು ಖುದ್ದು ಅವನನ್ನು ಆ ಸ್ಥಿತಿಯಲ್ಲಿ ಕಂಡವರ ಮಾತುಗಳು.ಸ್ಟ್ರಗಲ್  ಮಾಡಿ ಗಳಿಸಿಕೊಂಡ ಹೆಸರು.,ಸಂಪಾದಿಸಿದ ಹಣವನ್ನ ಹಾಳು ಮಾಡಿಕೊಂಡ ಎನ್ನೋದು “ಈ ಹುಡ್ಗನಲ್ಲಿ ಏನೋ ಒಂದು ಫೈರ್ ಇದೆ..ಅದನ್ನೇ ಬಳಸಿಕೊಂಡು ಏನೋ ಆಗುತ್ತಾನಪ್ಪ ..!! ಎಂದುಕೊಂಡವರ ಬೇಸರದ ಮಾತುಗಳು.

ಇವರಿಗಿಂತ  ಯೋಗ್ಯತೆ-ಸ್ಥಾನಮಾನ-ಗಳಿಕೆಯಲ್ಲಿ ಎಷ್ಟೋ ಪಾಲು ದೊಡ್ಡವರಿರುವ ಅದೆಷ್ಟೋ ಸ್ಟಾರ್ಸ್ ಗಳೇ ಇವತ್ತು ಸಾರ್ವಜನಿಕವಾಗಿ ತಮ್ಮ ಬದುಕುಗಳು ಶಿಸ್ತು-ಸಂಯಮದ ಚೌಕಟ್ಟಿನಲ್ಲಿರಬೇಕು ಎನ್ನುವ ಪ್ರಯತ್ನದಲ್ಲಿದ್ದುಕೊಂಡು ಬದುಕುತ್ತಿದ್ದಾರೆ.ಆ ಕಾರಣಕ್ಕೆ ಇವತ್ತು ಅವರನ್ನು ಬದು ಕಿನ ಮಾಡೆಲ್ ಗಳಾಗಿ ನೋಡಲಾಗುತ್ತಿದೆ.ಆ ಕಾರಣಕ್ಕೆ ಅವರಿಗೊಂದು ದೊಡ್ಡ ಫ್ಯಾನ್ ಫಾಲೋವರ್ಸ್ ಹುಟ್ಟಿ ಕೊಂಡಿರುತ್ತೆ.ಎಲ್ಲೂ ತಮ್ಮ ಹೆಸರನ್ನು ಹಾಳು ಮಾಡಿಕೊಳ್ಳದಂತೆ ಜತನದಿಂದ ಬದುಕನ್ನು ಕಾಯ್ದುಕೊಂಡಿರುವ ಸ್ಟಾರ್ ನಟರ ಮುಂದೆ ಈಗ ತಾನೇ ಕಣ್ಣು ಬಿಡುತ್ತಿರುವ ಕೀರ್ತಿ-ದಿವ್ಯಾ ಸುರೇಶ್ ಅವರಂಥವರು ತಮ್ಮ ಹೆಸರನ್ನು ಈ ರೀತಿ ರಂಪಾಟಕ್ಕೆ ಇಳಿಸಿಕೊಳ್ಳುತ್ತಿರುವುದು ನಿಜಕ್ಕೂ ಸರಿನಾ..

ಬಿಗ್ ಬಾಸ್ ನಂತ ಪ್ರತಿಷ್ಟಿತ ಹಾಗೂ ಬೃಹತ್ ವೇದಿಕೆಗೆ ತಮ್ಮ ವಿವೇಚನಾರಹಿತ  ನಡುವಳಿಕೆಯಿಂದ ಇವರಿಬ್ಬರು ಅವಮಾನ ಮಾಡಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ..ಎಲ್ಲೋ ಇದ್ದ ತಮ್ಮನ್ನು ದೊಡ್ಡ ಸ್ಥಾನಕ್ಕೆ ಕೊಂಡೊ ಯ್ದ ಬಿಗ್ ಬಾಸ್ ಘನತೆಯನ್ನೂ ಹಾಳು ಮಾಡಿದ್ದಾರೆ ಎಂದು ಆಪಾದಿಸಲಾಗುತ್ತಿದೆ. ಸೆಲೆಬ್ರಿಟಿ ಸ್ಥಾನ ಮಾನ ಸಿಕ್ಕಾಕ್ಷಣ ಮೈಮರೆತು-ವಿವೇಚನೆ ಕಳೆದುಕೊಂಡು ವರ್ತಿಸಿದ ಅದೆಷ್ಟೋ ಸ್ಟಾರ್ ಗಳೇ ಮಣ್ಣುಮುಕ್ಕಿರುವ ಉದಾಹರಣೆಗಳಿವೆ.ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಬದುಕಬೇಕಿದೆ.ಸಾರ್ವಜನಿಕವಾಗಿ ಅಂತ ದ್ದೊಂದು ಶಿಸ್ತನ್ನು ರೂಢಿಸಿಕೊಳ್ಳಬೇಕಿದೆ ಎನ್ನುವುದು ಇವರ ಬೆಳವಣಿಗೆಯನ್ನು ಆಶಿಸುವವರ ಕಾಳಜಿ ಹಾಗೂ ಎಚ್ಚರದ ಸಲಹೆ.

ಸ್ವಲ್ಪ ಕೀರ್ತಿ-ಖ್ಯಾತಿ-ಹಣ ಕೈಸೇರುತ್ತಿದ್ದಂತೆಯೇ ಇಂಥಾ ಸೆಲಬ್ರಿಟಿಗಳಿಗೆ ತಲೆನೇ ನಿಲ್ಲದಂಗಾಗಿರುವುದು ಮಾತ್ರ ದುರಂತ..ಇಂಥವರನ್ನು ಮಾಡೆಲ್ ಆಗಿ ಇಟ್ಟುಕೊಳ್ಳುತ್ತೇವೆನ್ನುವುದಿದೆಯೆಲ್ಲಾ ಅದು ನಮ್ಮ ಮೂರ್ಖತನ ಅಷ್ಟೇ,. ಇನ್ನಾದ್ರೂ ಇಂಥವರ ಜಪದಲ್ಲಿ ಮುಳುಗಿರುವ ಅಭಿಮಾನಿಗಳು ಎಚ್ಚೆತ್ತುಕೊಳ್ಳಬೇಕಿದೆ.. ಎಂಥವರನ್ನು ಎಲ್ಲೆಲ್ಲಿ ಇಡಬೇಕೋ..ಅವರನ್ನು ಹೇಗೆ ಟ್ರೀಟ್ ಮಾಡಬೇಕೋ..ಹಾಗೆ ನಡೆಸಿಕೊಂಡರಷ್ಟೇ ಅವರ ತಲೆನೂ ಇರುವ ಜಾಗದಲ್ಲಿ ಇರುತ್ತೆ.. ತಮ್ಮ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ.. ಆಗ ವಿವೇಚನೆನೂ ಕೈಕೊಡಲ್ಲವೇನೋ…

Spread the love

Related Articles

Leave a Reply

Your email address will not be published.

Back to top button
Flash News