BREAKING NEWS….EXCLUSIVE NEWS..ನ್ಯೂಸ್ ಚಾನೆಲ್ ಗೆ “ಈ” ಸ್ಟಾರ್ ಆಂಕರ್” ಗುಡ್ ಬೈ !!-ರಾಜಕೀಯಕ್ಕೆ ಎಂಟ್ರಿ..?!-

2023 ರ ವಿಧಾನಸಭೆ ಚುನಾವಣೆಯಲ್ಲೇ ಸ್ಪರ್ಧೆ..?! ಉತ್ತರ ಕರ್ನಾಟಕದಿಂದಲೇ ಅಖಾಡಕ್ಕೆ..

0

ಬೆಂಗಳೂರು: ನಿನ್ನೆಯೆಲ್ಲಾ..ಮಾದ್ಯಮಸ್ನೇಹಿತರ ಪ್ರಶ್ನೆ ಒಂದೇ…ಆ ಸ್ಟಾರ್  ಆಂಕರ್ ಯಾರು..? ಯಾವ ಚಾನೆಲ್ ನವರು…? ನಮ್ಮ ಚಾನೆಲ್ಲಾ..? ಅಥವಾ ಆ ಚಾನೆಲ್ಲಾ..? ಯಾವಾಗ ರಿಸೈನ್ ಮಾಡ್ತಾರಂತೆ..? ಯಾವ ಪಕ್ಷಕ್ಕೆ ಹೋಗ್ತಾರಂತೆ..? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ.? ಗೆಲ್ಲೋದು ಗ್ಯಾರಂಟಿನಾ..?  ಪರದೆ ಮೇಲೆ ಹಾರಾಡಿದಷ್ಟು ಸಲೀಸಲ್ಲ ಬಿಡಪ್ಪಾ ಚುನಾವಣೆಯಲ್ಲಿ ನಿಂತು ಗೆಲ್ಲೋದು..? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ..

ಇನ್ನು ಕೆಲವು ಸ್ನೇಹಿತರು.. ತಮ್ಮದೇ ಆದ ಊಹೆಗಳಲ್ಲಿ ಹಲವರ  ಹೆಸರನ್ನು ಉಲ್ಲೇಖಿಸಿದ್ದೂ ಆಯ್ತು. ಅವ್ನಾ ಗೆಲ್ಲೋ ಮುಖನಾ ಅದು.! ಅವರಿವರ ಕಾಲೆಳೆದುಕೊಂಡು,ಕಳ್ಳಾಟ ಆಡಿಕೊಂಡಿರೊಕ್ಕೇ ಸರಿ..! ಹೀಗೆ ಅಭಿಪ್ರಾಯ ಕೇಳಿಬಂದ್ವು..ಇದರ ನಡುವೆ  .ಕೆಲವರ ಗೆಸ್ ಸರಿಯಾಗಿಯೇ ಇತ್ತು ಕೂಡ..

ಮಾದ್ಯಮ ಕ್ಷೇತ್ರವನ್ನು ಬಿಟ್ಟು ರಾಜಕಾರಣದತ್ತ ಹೊರಳೊಕ್ಕೆ ಸಿದ್ಧವಾಗಿ ನಿಂತಿರುವ,ರಾಜಕೀಯ ಇನ್ಸಿಂಗ್ಸ್ ನಲ್ಲಿ ಅಸ್ಥಿತ್ವ ಕಂಡುಕೊಳ್ಳೊಕ್ಕೆ ಹೊರಟಿದ್ದಾರೆನ್ನಲಾಗುತ್ತಿರುವ ಆ ಆಂಕರ್ ಬಗ್ಗೆ ಕೆಲವು ಹಿಂಟ್ಸ್ ಕೊಟ್ಟರೆ ಸಾಕು  ನಮ್ಮ ಮಾದ್ಯಮ ಸ್ನೇಹಿತರು ಸಲೀಸಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಾರ್ವಜನಿಕರಿಗೂ ಈ ಸಂಗತಿ ಅರ್ಥವಾಗದೆ ಇರೊಲ್ಲ ಎನ್ನುವುದು ನಮ್ಮ ಭಾವನೆ.

ಎಲ್ಲವೂ ನಿರೀಕ್ಷೆಯಂತಾದ್ರೆ,ಸಧ್ಯದ ವಿದ್ಯಾಮಾನಗಳು ಅದೇ ಕ್ರಮದಲ್ಲಿ ಮುಂದುವರೆದರೆ ಶೀಘ್ರವೇ ಮಾದ್ಯಮ ಲೋಕದಲ್ಲಿ ಸುಮಾರು ಒಂದೂವರೆ ದಶಕಗಳಿಗಿಂತ ಧೀರ್ಘ ಅವಧಿಯಿಂದ ಕ್ರಿಯಾಶೀಲ ವಾಗಿರುವ ಸ್ಟಾರ್ ಆಂಕರ್ ಶೀಘ್ರಾತೀಶೀಘ್ರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ.ಪತ್ರಿಕೋದ್ಯಮಕ್ಕೆ ಅದು ಶಾರ್ಟ್ ವಿರಾಮವೂ ಆಗಿರಬಹುದು( ಒಂದ್ವೇಳೆ ಫಲಿತಾಂಶ ವ್ಯತಿರಿಕ್ತವಾಗಿ ಬಂದಲ್ಲಿ..ಆಗಾಗೋದು ಬೇಡ..).ಇದು ಖಡಾಖಂಡಿತಾ..ಸತ್ಯ..ಸತ್ಯ…ಸತ್ಯ..

ಕನ್ನಡ ನ್ಯೂಸ್ ಚಾನೆಲ್ ಗಳ ಪೈಕಿ ಫಸ್ಟ್ ಲೇಯರ್  ಚಾನೆಲ್ ಒಂದರ “ಸ್ಟಾರ್ ಆಂಕರ್” ಮಾದ್ಯಮ ಲೋಕವನ್ನು ರಾಜಕೀಯಕ್ಕಾಗಿ ತೊರೆಯುತ್ತಿದ್ದಾರೆನ್ನುವ ಸುದ್ದಿ ಬಹುತೇಕ ಪಕ್ಕಾ ಆಗಿದೆ. ಆ ನ್ಯೂಸ್ ಪ್ರಸೆಂಟರ್ ಅವ್ರೇ  ಇಂತದ್ದೊಂದು ನಿರ್ದಾರವನ್ನು ಅಂತಿಮಗೊಳಿಸಿದ್ದಾರೆನ್ನುವುದು ಕೆಲವು ಆಪ್ತಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕ ಮಾಹಿತಿ.

ಮೂಲತಃ ಉತ್ತರ ಕರ್ನಾಟಕ ಮೂಲದ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಆ ಆಂಕರ್ ಇವತ್ತಿನ ದೃಶ್ಯ ಮಾದ್ಯಮದ ಮಟ್ಟಿಗೆ  “ಸ್ಟಾರ್ ಆಂಕರ್” ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುದ್ದಿ ಯನ್ನು  ಓತಪ್ರೋತವಾಗಿ ಓದೋ.,.ವಿಷಯದ ಪರಿಜ್ಞಾನವಿಲ್ಲದೆ ಬಾಯಿಗೆ ಬಂದಂತೆ ಕ್ವಶ್ಚನ್ ಕೇಳುವ “ಕೆಲವು ಜೊಳ್ಳು-ಹೊಟ್ಟಿ”ನ ಆಂಕರ್ ಗಳ ನಡುವೆ  ತಮ್ಮ ಆಳವಾದ ಪರಿಜ್ಞಾನ-ವಿಷಯದ ಬಗೆಗಿನ ಸಮಗ್ರ ಅರಿವಿನಿಂದ ಗಮನ ಸೆಳೆಯುತ್ತಾರೆ ಈ ಸ್ಟಾರ್ ಆಂಕರ್ .

ತಾನು ಪ್ಯಾನಲ್ ನಲ್ಲಿ ಕೂರುವ ಮುನ್ನ ಗಂಟೆಗಟ್ಟಲೇ ವಿಷಯದ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳುವ ವಿಶಿಷ್ಟ ಗುಣದಿಂದಾಗಿಯೇ ಅವರು ಓದುವ ಸುದ್ದಿಯನ್ನು ನೋಡಲೇಬೇಕೆನಿಸುತ್ತದೆ. ಕನ್ನಡದ ಬೆರಳೆಣಿಕೆಯ ನ್ಯೂಸ್ ಆಂಕರ್ಸ್ ಗಳನ್ನಷ್ಟೇ ಹೀಗೆ ನೋಡ್ಬೇಕೆನಿಸುವುದು ಕನ್ನಡಿಗರಾದ ನಮ್ಮ ದುರಂತ ಬಿಡಿ. ಹಾಗಾಗಿಯೇ ಅಗ್ರಗಣ್ಯ  ನ್ಯೂಸ್ ಆಂಕರ್ಸ್ ಅಥವಾ  ನ್ಯೂಸ್ ಪ್ರಸೆಂಟರ್ಸ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ಈ ಸ್ಟಾರ್ ಆಂಕರ್.

ಬಹುತೇಕ ಪತ್ರಕರ್ತರು ಸ್ವಭಾವತಃ- ಮೂಲತಃ ಎಡ-ಬಲ-ಮದ್ಯ ಎನ್ನುವ ಪಂಥಗಳಿಗೆ ಅಂಟಿಕೊಂಡಿ ರುವುದಿಲ್ಲ.. ಅಂಟು ಕೊಂಡಿರಲೂ ಬಾರದು ಎನ್ನುತ್ತೆ ಪತ್ರಿಕಾಧರ್ಮ. ಆದ್ರೆ ದುರಾದೃಷ್ಟವಶಾತ್ ಇವತ್ತು ಚಾನೆಲ್ ಗಳ ಸ್ಟೈಲ್ ಶೀಟ್ ಹಾಗೆ ಒಗ್ಗಿಕೊಳ್ಳುವಂತೆ ಮಾಡಿಬಿಟ್ಟವೆ..ಅದು ಈ ಸ್ಟಾರ್ ಆಂಕರ್ ವಿಷಯಕ್ಕೂ ಹೊರತಾಗಿಲ್ಲ.ಬಲಪಂಥೀಯ ಮನಸ್ಥಿತಿಯ ಚಾನೆಲ್ ನಲ್ಲಿ ಅಲ್ಲಿನ ಸ್ಟೈಲ್ ಶೀಟ್ ನ ವರ್ತುಲದೊಳಗೆ ಕೆಲಸ ಮಾಡುತ್ತಲೇ, ಆ ಬಲಪಂಥೀಯ ವಿಚಾರಧಾರೆಗಳನ್ನೇ ಪ್ರತಿಪಾದಿಸುತ್ತಾರೆನ್ನುವ ಆರೋಪ ಇವರ ಮೇಲಿದೆ.

ಬಲಪಂಥೀಯ ವಿಚಾರಧಾರೆಗಳು ಹಾಗೂ  ಅದನ್ನು ಪ್ರತಿಪಾದಿಸುವ ಪಕ್ಷದ ವಕ್ತಾರನಂತೆ ಮಾತನಾಡುತ್ತಾರೆನ್ನುವ ಕೆಟ್ಟ ಅಪವಾದವಿದೆ..ಅವರ ಡಿಸ್ಕಷನ್ಸ್ ಹಾಗೂ ಅದನ್ನು ಸಾಗಿಸಿಕೊಂಡು ಹೋಗುವ ರೀತಿಯೇ ಬಹುತೇಕ ಸನ್ನಿವೇಶಗಳಲ್ಲಿ ಇವರೇನು ಪತ್ರಕರ್ತರೋ ಅಥವಾ ಪಕ್ಷದ ವಕ್ತಾರರೋ ಎನಿಸುವಂತೆ ಮಾಡುತ್ತೆನ್ನೋ ದು ಈ ಸ್ಟಾರ್ ಆಂಕರ್ ಪ್ಯಾನಲ್ ನಲ್ಲಿ ಕೂತು ಅವರನ್ನು ಸೂಕ್ಷ್ಮವಾಗಿ ಗಮನಿಸಿರುವ ರಾಜಕೀಯ ಪಕ್ಷ ವಕ್ತಾರರ ಗಂಭೀರ ಆಪಾದನೆ.

ಮಾದ್ಯಮದಲ್ಲಿದ್ದುಕೊಂಡು ತಾನು ನಿಷ್ಪಕ್ಷಪಾತವಾಗಿರಬೇಕೆನ್ನುವ ಸತ್ಯವನ್ನು ಬದಿಗೊತ್ತಿ ಒಂದು ಪಕ್ಷದ ಸಿದ್ಧಾಂತಗಳನ್ನು ಬಲವಾಗಿ ಪ್ರತಿಪಾದಿಸಿ ಅದರ ಸಮರ್ಥಕ ಎನ್ನುವಂತೆ ಬಿಂಬಿಸಿಕೊಂಡ ಓರ್ವ [ಪತ್ರಕರ್ತ ಎರಡನೇ ಬಾರಿ ಸಂಸದರಾಗಿರುವ ಉದಾಹರಣೆಗಳಿವೆ.ಈ ಸಂಸದರೊಂದಿಗೆ ಅತ್ಯಂತ ಆತ್ಮೀಯತೆ ಈ ಸ್ಟಾರ್ ಆಂಕರ್ ಗಿದೆಯಂತೆ. ಲ್ಲದೇ ಮತ್ತೋರ್ವ ಯುವಸಂಸದಗೂ ಇವರು “ಹೋಗೋ..ಬಾರೋ “ಎನ್ನುವಷ್ಟು ಆತ್ಮೀಯ ಫ್ರೆಂಡ್ ಅಂತೆ..ಇವರಿಬ್ಬರಿಂದಲೂ ಈಗಾಗಲೇ ರಾಜಕೀಯಕ್ಕೆ ಆಹ್ವಾನವೂ ಈ ಆಂಕರ್ ಗೆ ಸಿಕ್ಕಿದೆ ಎನ್ನುವ ಮಾತುಗಳಿವೆ.ಪತ್ರಿಕೋದ್ಯಮದಲ್ಲಿ ಸಾಧಿಸಿದ್ದಾಗಿದೆ..ಈಗ ರಾಜಕೀಯದಲ್ಲೂ ಒಂದು ಕೈ ನೋಡೇ ಬಿಡೋಣ.. ಲೆಟ್ಸ್ ಟ್ರೈ… ಎಂದು ಮುಗುಳ್ನಗೆ ಬೀರಿದ್ದಾರೆನ್ನುವುದು ಕೂಡ ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿಬರುತ್ತಿರುವ ಮಾತು.

ತನ್ನ ನಿರೂಪಣಾ ಶೈಲಿ ಹಾಗೂ ವಾಕ್ಚಾತುರ್ಯದಿಂದ ಈಗಾಗಲೇ ಜನರನ್ನು ಸೆಳೆದಿರುವ ಈ ಸ್ಟಾರ್ ಆಂಕರ್ ರಾಜಕೀಯ ಪ್ರವೇಶದ ಬಗ್ಗೆ  ರಾಷ್ಟ್ರೀಯ ಪಕ್ಷದ ಮುಖಂಡರೊಂದಿಗೆ ಮಾತನಾಡಿಯಾಗಿದೆ ಎನ್ನುವ ವರ್ತಮಾನಗಳಿವೆ.ಉತ್ತರ ಕರ್ನಾಟಕದಲ್ಲಿ ಒಂದು ಕ್ಷೇತ್ರವನ್ನು ಆಯ್ದುಕೊಂಡು ಪಕ್ಷವನ್ನು ಸಂಘಟಿಸುವ ಕೆಲಸ ಮಾಡುವ ಬಗ್ಗೆಯೂ ಮಾತುಕತೆ ನಡೆದಾಗಿದೆಯಂತೆ.ಚುನಾವಣೆಗಿನ್ನು ಎರಡು ವರ್ಷವಿರುವುದರಿಂದ  ಶೀಘ್ರವೇ ಎಲ್ಲವೂ ಇತ್ಯರ್ಥವಾಗಬೇಕಿದೆ ಹಾಗಾಗಿ ಏನೇ ನಿರ್ದಾರ ಮಾಡಬೇ ಕೆಂದಿದ್ದರೂ ಶೀಘ್ರವೇ ಮಾಡಿ ಎನ್ನುವ ಸೂಚನೆ ಕೂಡ ಇವರಿಗೆ ಬಂದಿದೆ ಎನ್ನುವ ಮಾತುಗಳಿವೆ.

ರಾಜಕೀಯ ಪತ್ರಿಕೋದ್ಯಮದಷ್ಟು ಸುಲಭವಲ್ಲ,..ಹಾಗೆಯೇ ಸಲೀಸು ಅಲ್ಲ, ಟಿವಿ ಸ್ಕ್ರೀನ್ ಮೇಲೆ ಅಬ್ಬರಿ ಸಿದಂಗೆ..ವೀಕ್ಷಕರಿಂದ ಚಪ್ಪಾಳೆ-ಶಹಬ್ಬಾಸ್ ಗಿರಿಗಿಟ್ಟಿಸಿ ಕೊಂಡಂಗಲ್ಲ ರಾಜಕೀಯ.ಹಾಗಾಗಿ ಸಾಕಷ್ಟು ಪಟ್ಟುಗಳನ್ನು ಕಲಿಯಬೇಕಿದೆ..ಜನರ ನಾಡಿಮಿಡಿತ-ಮನಸ್ಥಿತಿ ಅರ್ಥೈಸಿಕೊಳ್ಳಬೇಕಿದೆ. ಕ್ಷೇತ್ರದಲ್ಲಿದ್ದು ಕೊಂಡು ಕೆಲಸ ಮಾಡಬೇಕಿದೆ.ಇದೆಲ್ಲವೂ ಕೆಲ ದಿನ-ತಿಂಗಳಲ್ಲಿ ಆಗೋಗುವಂಥ ಕೆಲಸವಲ್ಲ,ಹಾಗಾಗಿ ಈ ಎಲ್ಲಾ ಸೂಕ್ಷ್ಮಗಳನ್ನು ಪಕ್ಷದ ವರಿಷ್ಠರು ಮನವರಿಕೆ ಮಾಡಿಕೊಟ್ಟಿಯೂ ಆಗಿದೆಯಂತೆ.ಇದನ್ನು ಒಪ್ಪಿಕೊಂಡಿರುವ ಈ ಸ್ಟಾರ್ ಆಂಕರ್ ಶೀಘ್ರವೇ ಅಖಾಡಕ್ಕಿಳಿಯಬೇಕಿರುವು ದರಿಂದ ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳುವುದು ಕೂಡ ಅನಿವಾರ್ಯವಾಗಲಿದೆ.ಇದಕ್ಕೆ ಒಪ್ಪಿಕೊಂಡಿರುವ ಅವರು ಶೀಘ್ರದಲ್ಲೇ ತಾನು ಕೆಲಸ ಮಾಡುತ್ತಿರುವ ಸಂಸ್ಥೆಗೆ ವಿದಾಯ ಹೇಳಲಿದ್ದಾರೆನ್ನುವ ಮಾತುಗಳು ಬಲವಾಗಿ ಕೇಳಿಬಂದಿವೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳೊಕ್ಕೆ ಮುಂದಾಗಿದ್ದಾರೆನ್ನಲಾಗುತ್ತಿರುವ ಆ ಸ್ಟಾರ್ ಆಂಕರ್,ಗೆಲ್ಲುವ ಉಮೇದಿನೊಂದಿಗೇ ತೆರಳುತ್ತಿದ್ದಾರಂತೆ.ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ..ಇದೊಂದು ಕಠಿಣ ಸವಾಲೆನ್ನುವ ಸತ್ಯವೂ ಅವರಿಗೆ ಗೊತ್ತಿದೆ.ಆದರೂ ಒಂದು ಕೈ ನೋಡೇ ಬಿಡೋಣ   ಎಂದು ಹೊರಟಿರುವ ಆ ಸ್ಟಾರ್ ಆಂಕರ್ ಹೊಸ ಜರ್ನಿಗೆ ಒಂದು ಬೆಸ್ಟ್ ಆಫ್ ಲಕ್ ನಮ್ಮ ಕಡೆಯಿಂದ..

Spread the love
Leave A Reply

Your email address will not be published.

Flash News