ಬೆಂಗಳೂರು: ಅದ್ಯಾವ ಒತ್ತಡವಿತ್ತೋ ಏನೋ ಗೊತ್ತಿಲ್ಲ,ನಾಳೆ ನಡೆಸಲು ಉದ್ದೇಶಿಸಿದ್ದ ಕರ್ನಾಟಕ ಬಂದ್ ನ್ನು ಇದೇ ನೆವ ಇಟ್ಟುಕೊಂಡು ವಾಪಸ್ ಪಡೆಯಲಾಗಿದೆ.ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ ಜನವರಿ 22 ರಂದು ಕರ್ನಾಟಕ ಬಂದ್ ಮುಂದೂಡಲಾಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕರ್ನಾಟಕ ಬಂದ್ ನಡೆಸುವ ಬಗ್ಗೆ ವಾಟಾಳ್ ತೆಗೆದುಕೊಂಡಿದ್ದು ಏಕಪಕ್ಷೀಯ ನಿರ್ದಾರ.ಯಾರೊಬ್ಬರ ನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ ಎನ್ನುವ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ಕೆಲ ಕ್ಷಣಗಳ ಮುನ್ನ ಸುದ್ದಿಗೋಷ್ಟಿ ಕರೆದು ಕರ್ನಾಟಕ ಬಂದ್ ನ್ನು ವಾಪಸ್ ಪಡೆಯಲಾಗಿದೆ ಎಂದು ವಾಟಾಳ್ ತಿಳಿಸಿದ್ದಾರೆ.