GREAT INSULT TO VATAAL NAGARAJAJ…:”VATAAL MANIA” ENDS..?!.. ಇದು ವಾಟಾಳ್ ಹೋರಾಟಗಳ “ಯುಗಾಂತ್ಯ”ದ ಮುನ್ಸೂಚನೆನಾ..?! ಜೀವಮಾನದಲ್ಲೇ “ಮಹಾನ್ ಮುಖಭಂಗ..ಮುಜುಗರ” !!

ವಾಟಾಳ್ ಗೆ ಮುಳುವಾಯ್ತಾ ಹಿಟ್ಲರ್ ಧೋರಣೆ-ನಾನೆನ್ನುವ ಅಹಂ-ಎಚ್ಚೆತ್ತುಕೊಂಡ್ರೆ ಉಳಿಗಾಲ-ಮೊಂಡುತನದಿಂದ ವಿನಾಶ ಕಟ್ಟಿಟ್ಟ ಬುತ್ತಿ.?!

0

ಬೆಂಗಳೂರು:ವಾಟಾಳ್ ನಾಗರಾಜ್ ಗೆ ಇದು ಜೀವಮಾನದ ಅತೀ ದೊಡ್ಡ ಮುಖಭಂಗ.. ಇಷ್ಟೊಂದು ಮುಜುಗರ -ನಾಚಿಕೆಯಿಂದ ತಲೆತಗ್ಗಿಸಿದ ಇತಿಹಾಸವೇ ಇರಲಿಲ್ಲವೇನೋ..ಏರುಧ್ವನಿ ಈ ಪ್ರಮಾಣದಲ್ಲಿ ಕ್ಷೀಣಿಸಿರಲೇ ಇಲ್ಲವೇನೋ…ಆದರೆ ಇದೆಲ್ಲಾ ಅವರ ಸ್ವಯಂಕೃತಪರಾಧದ ಪ್ರತಿಫಲ ಎನ್ನೋದು ಕೂಡ ಅಷ್ಟೇ ಸೂಕ್ತ.ವ್ಯಕ್ತಿಗಿಂತ ಸಮುದಾಯ ದೊಡ್ಡದು..ತಾನೇ ಎಲ್ಲಾ..ತನ್ನಿಂದಲೇ ಎಲ್ಲಾ..ತಾನಿಲ್ಲದೆ ಏನೂ ಇಲ್ಲ..ಎನ್ನುವ ಅವರ ಏಕಪಕ್ಷೀಯ ಹಿಟ್ಲರ್ ಧೋರಣೆಗೆ ಸರಿಯಾಗೇ ಪೆಟ್ಟುಬಿದ್ದಿದೆ.ಈ ಅವಮಾನವನ್ನು ಜೀವವಿರುವವರೆಗೂ ಅವರು ಮರೆಯಲಿಕ್ಕಿಲ್ಲವೇನೋ..?

ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್ ವಾಪಸ್ ಪಡೆಯಲಾಗಿದೆ.ಇದೇನು ವಾಟಾಳ್ ಅವ್ರೇ ಹೇಳುವಂತೆ ಮುಖ್ಯಮಂತ್ರಿಗಳ ಒತ್ತಡಕ್ಕೋ,ವಿಶ್ವಾಸಕ್ಕೋ ಮಣಿದು ಮಾಡಿದ ನಿರ್ದಾರವೇನಲ್ಲ.ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳಲ್ಲಿ ಬಹುತೇಕ ಸಂಘಟನೆಗಳು ವಾಟಾಳ್ ಅವರ ಏಕಪಕ್ಷೀಯ ಧೋರಣೆಗೆ ಬೇಸತ್ತು ಬೆಂಬಲ ವಾಪಸ್ ಪಡೆದಿದ್ದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಆತಂಕಗೊಂಡು ದಿಢೀರ್ ತೆಗೆದುಕೊಂಡ ನಿರ್ಣಯ.

ತಾನು ಹೇಳಿದಾಕ್ಷಣ ಕರ್ನಾಟಕ ಬಂದ್ ಆಗಿಬಿಡ್ತದೆ..ಕನ್ನಡಿಗರೆಲ್ಲಾ ತಮ್ಮ ಮಾತು ಕೇಳಿಬಿಡ್ತಾರೆ..ಸಂಘಟನೆಗಳೆಲ್ಲಾ ಒಗ್ಗೂಡಿ ಕೈ ಜೋಡಿಸುತ್ತಾರೆಂದುಕೊಂಡಿದ್ದ ತನ್ನ ಆ ಜಮಾನ  ಮುಗಿಯುತ್ತಾ ಬಂದಿದೆ.ಈಗೇನಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಮಾರ್ಮಿಕ ಸಂದೇಶ  ತಾನು ಹಾಗೂ  ತನ್ನ ಅವರ ಬೆಂಬಲಿಗರ ಪಾಲಿಗೆ ರವಾನೆಯಾಗಿದೆ ಎನ್ನುವುದನ್ನು ವಾಟಾಳ್ ಅರ್ಥ ಮಾಡಿಕೊಳ್ಳಬೇಕಿದೆ.

ಅದೊಂದು ಜಮಾನ ಇತ್ತು.ನಿಜ..ವಾಟಾಳ್ ಗುಡುಗಿದರೆ ವಿಧಾನಸೌಧ ನಡುಗುತ್ತೆ.ಅವರು ಬಂದ್ ಕರೆ ಕೊಟ್ಟರೆ ಕರ್ನಾಟಕವೇ ಸ್ಥಬ್ಧಗೊಳ್ಳುತ್ತೆನ್ನುವ ಸನ್ನಿವೇಶವಿತ್ತು.ಅದಕ್ಕೆ ಇತಿಹಾಸವೇ ಸಾಕ್ಷಿಯಿದೆ.ಆದರೆ ಹೋರಾಟಗಳು ಗಂಭೀರತೆ ಕಳೆದುಕೊಂಡವೋ..ವಿದೂಷಕನಂತೆ ಪ್ರತಿಭಟನೆಗಳನ್ನು ಮಾಡೊಕ್ಕೆ ಶುರುಮಾಡಿಕೊಂಡ್ರೋ ಆಗಲೇ ಅವರ ವ್ಯಕ್ತಿತ್ವವೂ ಘನತೆ ಕಳೆದುಕೊಳ್ತು.ಮಾತು ಬೆಲೆ ಕಳೆದುಕೊಳ್ತು.ಹೋರಾಟಗಳೂ ಅರ್ಥಹೀನ ಎನ್ನಲಾರಂಭಿಸಿದ್ವು. ಅವರಿಂದ ಸೃಷ್ಟಿಯಾಗಲಾರಂಭಿಸಿದ ನಿರ್ವಾತವನ್ನು ಕರ್ನಾಟಕ ರಕ್ಷಣಾ ವೇದಿಕೆ,ಜಯಕರ್ನಾಟಕದಂಥ ಸಂಘಟನೆಗಳು ತುಂಬಲಾರಂಭಿಸಿದವು.ಅದರ ಪ್ರಯೋಜನ ನಿಜಕ್ಕೂ ಅವರಿಗಾಯ್ತು..ನಷ್ಟವಾಗಿದ್ದು ಮಾತ್ರ ವಾಟಾಳ್ ಹಾಗೂ ಬೆಂಬಲಿಗರಿಗೆ.

ವಾಟಾಳ್ ಅವರಂಥ ಮುತ್ಸದ್ಧಿ ಕರ್ನಾಟಕ ಬಂದ್ ನಂಥ ಗಂಭೀರ ಹಾಗೂ ಮಹತ್ವದ  ಎಲ್ಲಕ್ಕಿಂತ ನಿರ್ಣಾಯಕವಾದಂಥ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದರೆ ಕನ್ನಡ ಪರ ಸಂಘಟನೆಗಳ ವಿಶ್ವಾಸ ಪಡೆಯಬೇಕಿತ್ತು.ಹಿಂದೆಲ್ಲಾ ಸಂಘಟನೆಗಳು ಕಡಿಮೆ ಇದ್ವು..ಹಾಗೆಲ್ಲಾ ವಾಟಾಳ್ ಮಾತು ನಡೆದೋಗ್ತಿತ್ತು. ಆದರೆ ಈಗ ನಾಯಿಕೊಡೆಗಳಂತಾಗಿವೆ.ವಾಟಾಳ್ ಗೆ ಠಕ್ಕರ್ ಕೊಡುವ ಮಟ್ಟಕ್ಕೆ ಬೆಳೆದು ನಿಂತಿವೆ. ಇಂಥದೊಂದು ಸನ್ನಿವೇಶದಲ್ಲಿ ಸೂಕ್ಷ್ಮವಾದ ವಿಚಾರದ ಬಗ್ಗೆ ನಿರ್ದಾರ ಮಾಡುವಾಗ ಇಷ್ಟವಿಲ್ಲದಿದ್ದರೂ ಕಾಟಾಚಾರಕ್ಕಾಗಿಯಾದರೂ ಅವರನ್ನೆಲ್ಲಾ ಕರೆದು ಮಾತನಾಡಿಸಿ ವಿಶ್ವಾಸಕ್ಕೆ ತೆಗದುಕೊಳ್ಳುವ ಕೆಲಸ ಮಾಡಬೇಕಿತ್ತು.ಆದರೆ  ತನ್ನ ಸುತ್ತಲಿರುವ ಕನ್ನಡ ಸೇನೆ ಕುಮಾರ್, ಕರವೇ ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ ,ಸಾ.ರ ಗೋವಿಂದು ಅಂಥವರೊಂದಿಗಷ್ಟೇ ಚರ್ಚೆ ಮಾಡಿ ಏಕಾಏಕಿ ಕರ್ನಾಟಕ ಬಂದ್..ಬಂದ್..ಬಂದ್ ಅಬ್ಬರಿಸಿದಾಕ್ಷಣ ಒಪ್ಪಿಕೊಳ್ಳಲಿಕ್ಕೆ ಆಗುತ್ತಾ..? ಖಂಡಿತಾ ಇಲ್ಲ..ಹಾಗೆ ಒಪ್ಪಿಕೊಳ್ಳೊಕ್ಕೆ ಆಗೋದೂ ಇಲ್ಲ..ಆದರೂ 50ಕ್ಕೂ ಹೆಚ್ಚು ಸಂಘಟನೆಗಳು ವಾಟಾಳ್ ನಾಗರಾಜ್ ಅವರ ಮೇಲಿನ ಗೌರವಕ್ಕೆ ಮರು ಮಾತನಾಡದೆ ಬಂದ್ ನಿರ್ದಾರ ಬೆಂಬಲಿಸಿದ್ದವು.

ಆದರೆ ನಂತರದ ಆದ ಬೆಳವಣಿಗೆಗಳು ಕನ್ನಡ ಪರ ಸಂಘಟನೆಗಳಲ್ಲೇ ಒಗ್ಗಟ್ಟು-ಐಕ್ಯತೆ ಇಲ್ಲದ್ದನ್ನು ಸಾಕ್ಷೀಕರಿಸುವಂತಿದ್ದವು.ಸಂಘಟನೆಗಳು ತಮ್ಮದೇ ನಿರ್ದಾರಕ್ಕೆ ಮುಂದಾಗಲಾರಂಭಿಸಿದ್ದವು.ಕಾಲಘಟ್ಟದಲ್ಲಾಗುತ್ತಿರುವ ಪಲ್ಲಟಗಳನ್ನು ಅರಿಯಬೇಕಿದ್ದ ವಾಟಾಳ್ ಮಾತ್ರ ತನ್ನದೇ ಏಕಪಕ್ಷೀಯ ಧೋರಣೆ ಮುಂದುವರೆಸಿದ್ರು.ಅದು ಈ ಬಾರಿಯ ಕರ್ನಾಟಕ ಬಂದ್ ಕರೆಯವರೆಗೂ ಮುಂದುವರೆದುಕೊಂಡು ಬಂತು.ಆದರೆ ಈ ಬಾರಿ ವಾಟಾಳ್ ಮಾಡಿಕೊಂಡ ಯಡವಟ್ಟುಗಳು ಒಂದೆರೆಡಲ್ಲ..ಮರಾಠಿಗರಿಂದ ಕನ್ನಡ ಹೋರಾಟಗಾರ ಶಿವಕುಮಾರ ನಾಯ್ಕನ ಮೇಲೆ ಹಲ್ಲೆಯಾದರೂ ಅದನ್ನು ಖಂಡಿಸಲಿಲ್ಲ..ಬದಲಿಗೆ ತನ್ನ ಅಳಲು ತೋಡಿಕೊಳ್ಳೊಕ್ಕೆ ಬಂದವನನ್ನೇ ಅವಮಾನ ಮಾಡಿ,ಹಲ್ಲೆಗೊಳಪಡಿಸಲಾಯಿತು..ಅಂದೇ ವಾಟಾಳ್ ಬಗ್ಗೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಯ್ತು.

ಅದರ ಬೆನ್ನಲ್ಲೇ ಕರವೇ ನಾರಾಯಣ ಗೌಡ ಬೆಂಬಲಿಸೊಲ್ಲ ಎಂದಿದ್ದು, ಬೆಳಗಾಂ ವ್ಯಾಪ್ತಿಯ ಕನ್ನಡ ಪರ ಸಂಘಟನೆಗಳು ವಾಟಾಳ್ ಧೋರಣೆ ಖಂಡಿಸಿದಾಗ ಹೋರಾಟದ ರೂವಾರಿ ಚಂದರಗಿಯನ್ನೇ ಅವನ್ಯಾರು ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದು,ಆ ಅವಮಾನವನ್ನು ಸ್ಥಳೀಯವಾಗಿ ಪ್ರಶ್ನಿಸಿದ ಕನ್ನಡ ಪರ ಹೋರಾಟಗಾರರನ್ನು ವಾಚಾಮಗೋಚರವಾಗಿ ಬೈಯ್ದು ಅವಮಾನ ಮಾಡಿದ್ದೆಲ್ಲಾ ವಾಟಾಳ್ ಗೆ ಮುಳುವಾಯ್ತು.ನಿನ್ನೆಯ ಹೊತ್ತಿಗಾಗಲೇ ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಬೆಂಬಲ ವಾಪಸ್ ಪಡೆದಿದ್ದವು.ಅದರ ನಡುವೆ ಇವತ್ತು ಕರವೇ ನಾರಾಯಣಗೌಡ ನೇತೃತ್ವದಲ್ಲಿ ನಡೆದ ಹೋರಾಟದ ಬಗ್ಗೆ ಕನ್ನಡಪರ ಹೋರಾಟಗಾರರ ನಂಬಿಕೆ ಬಲವಾಗಿ ವಾಟಾಳ್ ಡಮ್ಮಿ ಎನಿಸಲಾರಂಭಿಸಿದ್ದು ಸತ್ಯ.

ಯಾವಾಗ ಕನ್ನಡಪರ ಸಂಘಟನೆಗಳ ಬೆಂಬಲ ಕಡಿಮೆಯಾಗುತ್ತಾ ಹೋಯ್ತೋ..ಆಗ ಬಂದ್ ನಡೆಸಿದರೆ ತಮಗೆ ಯಾವ್ ಪ್ರಮಾಣದ ಅವಮಾನವಾಗಬಹುದೆನ್ನುವುದನ್ನು ಲೆಕ್ಕ ಹಾಕಿಯೇ ಸಿಎಂ ಜತೆಗೆ ಮಾತುಕತೆ ಫಲಪ್ರದ ಎನ್ನುವ ನೆವದಲ್ಲಿ ಕರ್ನಾಟಕ ಬಂದ್ ನ್ನು ಮುಂದೂಡುತ್ತಿರುವುದಾಗಿ ಹೇಳಿಕೆ ಕೊಟ್ಟರು ವಾಟಾಳ್..

ಸರ್ಕಾರದ ವಿರುದ್ದ ಯಾವತ್ತೂ ಮಂಡಿಯೂರದಿದ್ದ ವಾಟಾಳ್ ಇಂದು ಅಕ್ಷರಶಃ ತಲೆ ತಗ್ಗಿಸಿದ್ದು ಕನ್ನಡಪರ ಸಂಘಟನೆಗಳ ದೃಷ್ಟಿಯಲ್ಲಿ ಮತ್ತಷ್ಟು ಕೆಳಕ್ಕಿಳಿಯುವಂತೆ ಮಾಡಿದೆ. ಸರ್ಕಾರ ನಮ್ಮನ್ನು ಮನವೊಲಿಸಿತು ಎಂದ್ಹೇಳಿದ್ದು ಅಪ್ಪಟ ಸುಳ್ಳು..ಬಂದ್ ನಡೆಸಿದರೆ ಬೆರಳೆಣಿಕೆ ಜನರಷ್ಟೇ ಜತೆಗಿರುತ್ತಾರೆ..ಇದರಿಂದ ಅಪಮಾನವಾಗುತ್ತದೆನ್ನುವ ಕಾರಣದಿಂದ ಅತೀ ಜಾಣ್ಮೆಯಿಂದ ಬಂದ್ ಮುಂದೂಡಿಕೆಯ ನಿರ್ಣಯ ಕೈಗೊಂಡಿದ್ದಾರೆ..

ಆದರೆ ಬಂದ್ ಮುಂದೂಡಿಕೆಯಿಂದ ವಾಟಾಳ್ ಗೆ ಭಾರೀ ಅಪಮಾನದ ಜತೆಗೆ ಮುಖಭಂಗವಾಗಿದೆ. ಕನ್ನಡಪರ ಸಂಘಟನೆಗಳ ಮುಂದೆ ತಲೆ ಎತ್ತಿ ನಡೆಯದಂತ ಮುಜುಗರವಾಗಿದೆ.ಇನ್ಮುಂದೆ ಬಂದ್-ಹೋರಾಟಗಳಿಗೆ ಕರೆ ಕೊಟ್ಟರೆ ಅವರ ಜತೆ ನಿಲ್ಲುವುದಕ್ಕೆ ಕನ್ನಡ ಪರ ಸಂಘಟನೆಗಳು ಹಿಂದೆಮುಂದೆ ನೋಡುವಂತಾಗಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ವಾಟಾಳ್ ಯುಗಾಂತ್ಯಕ್ಕೆ ಮುನ್ನುಡಿ ಬರೆಯುವ ಕಾಲ ಸನ್ನಿಹಿತವಾಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಈ ಅಪಮಾನ-ಮುಖಭಂಗ ಸೋಲಿನಿಂದ ವಾಟಾಳ್ ಇನ್ನಾದರೂ ಪಾಠ ಕಲಿಯಬೇಕಿದೆ..ಇಲ್ಲವಾದಲ್ಲಿ ವಾಟಾಳ್ ಎನ್ನೋ ಹೋರಾಟಗಾರ ನೇಪಥ್ಯಕ್ಕೆ ಸರಿದೋಗಬಹುದು..ಇತಿಹಾಸವೇ ಮತ್ತೆ ವಾಟಾಳ್ ಅವರನ್ನು ನೆನಪಿಸಿಕೊಳ್ಳದಷ್ಟು ನಿಷ್ಟೂರವಾಗಬಹುದು..

Spread the love
Leave A Reply

Your email address will not be published.

Flash News