SHOCKING NEWS..?! HEART ATTACK TO AJITH HANUMAKKANAVAR…HOSPITALISED… ಸುವರ್ಣ ನ್ಯೂಸ್ ಚಾನೆಲ್ ನ ಸ್ಟಾರ್ ಆಂಕರ್ ಅಜಿತ್ ಹನುಮಕ್ಕನವರ್ ಗೆ ಹೃದಯಾಘಾತ..!?

ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು-ಮೂರು ಸ್ಟಂಟ್ ಅಳವಡಿಕೆ-ವಿಶ್ರಾಂತಿಗೆ ವೈದ್ಯರ ಸಲಹೆ..

0
ತಮ್ಮ ಆರೋಗ್ಯದಲ್ಲಾಗಿರುವ ವ್ಯತ್ಯಾಸಗಳ ಬಗ್ಗೆ ತಮ್ಮದೆ ಫೇಸ್ ಬುಕ್ ಪೇಜ್ ನಲ್ಲಿ ಅಜಿತ್ ಹನುಮಕ್ಕನವರ್ ಹಾಕ್ಕೊಂಡಿದ್ದ ಸ್ಟೇಟಸ್( ಕೃಪೆ-ಅಜಿತ್ ಹನುಮಕ್ಕನವರ್ ಫೇಸ್ ಬುಕ್ ಪೇಜ್)
ತಮ್ಮ ಆರೋಗ್ಯದಲ್ಲಾಗಿರುವ ವ್ಯತ್ಯಾಸಗಳ ಬಗ್ಗೆ ತಮ್ಮದೆ ಫೇಸ್ ಬುಕ್ ಪೇಜ್ ನಲ್ಲಿ ಅಜಿತ್ ಹನುಮಕ್ಕನವರ್ ಹಾಕ್ಕೊಂಡಿದ್ದ ಸ್ಟೇಟಸ್( ಕೃಪೆ-ಅಜಿತ್ ಹನುಮಕ್ಕನವರ್ ಫೇಸ್ ಬುಕ್ ಪೇಜ್)

ಬೆಂಗಳೂರು: ಕನ್ನಡದ ಸುದ್ದಿ ವಾಹಿನಿಯ ಖ್ಯಾತ ಸುದ್ದಿ ನಿರೂಪಕ,ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಗೆ ಹೃದಯಾಘಾತವಾಗಿರುವ ಸುದ್ದಿ ಹೊರಬಿದ್ದಿದೆ.ತಮ್ಮ ಮನೆಯಿಂದ ಕಾರಿನಲ್ಲಿ ಪ್ರಯಾಣಿಸುವಾಗ ಹನುಮಕ್ಕನವರ್ ಗೆ ಹೃದಯಾಘಾತವಾಗಿದೆ.ಈ ಸಂದರ್ಭದಲ್ಲಿ ಅವರೇ ಕಾರು ಡ್ರೈವ್ ಮಾಡಿಕೊಂಡು ಸದಾಶಿವನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

ಸಮಯಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿತು ಎಂದು ವೈದ್ಯರು ಹೇಳಿದ್ದು ಅಜಿತ್ ಗೆ ಮೂರು ಸ್ಟಂಟ್ ಗಳನ್ನು ಅಳವಡಿಸಿದ್ದಾರೆ ಎನ್ನಲಾಗ್ತಿದೆ.ಸ್ವಲ್ಪ ಹೊತ್ತು ಐಸಿಯುನಲ್ಲಿದ್ದ ಅವರನ್ನು ನಂತರ ವಾರ್ಡ್ ಗೆ ಶಿಫ್ಟ್ ಮಾಡಲಾಯಿತು.ತೀವ್ರ ಕಾರ್ಯ ಒತ್ತಡ ಹಾಗೂ ದಣಿವರಿಯದ ಕೆಲಸವೇ ಅಜಿತ್ ಅವರ ಹೃದಯಾಘಾತಕ್ಕೆ ಕಾರಣ ಎನ್ನಲಾಗಿದೆ.

ಸಧ್ಯ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜಿತ್ ಅವರಿಗೆ ವೈದ್ಯರು ಒಂದಷ್ಟು ದಿನ ವಿಶ್ರಾಂತಿ ಪಡೆಯೊಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಜಿತ್ ಹನುಮಕ್ಕನವರ್ ಅವರಿಗೆ ಹೃದಯಾಘಾತವವಾಗಿರುವ ಸುದ್ದಿ ತಿಳಿದು ಪತ್ರಿಕೋದ್ಯಮದ ಸಾಕಷ್ಟು ಹಿರಿ-ಕಿರಿಯ ಪತ್ರಕರ್ತರು ಹಾಗೂ ಪತ್ರಿಕಾ ಸಿಬ್ಬಂದಿ ಆಸ್ಪತ್ರೆಗೆ ದೌಡಾಯಿಸಿದರೂ ಕೊವಿಡ್ ಕಾರಣಕ್ಕೆ ಸಾಕಷ್ಟು ಜನರಿಗೆ ಅವಕಾಶ ನಿರಾಕರಿಸಲಾಗಿದೆ.

ಕೊವಿಡ್ ಕಾಲದಲ್ಲಿ ಇದ್ದಕ್ಕಿದ್ದಂತೆ ಸಾಕಷ್ಟು ದೇಹತೂಕವನ್ನು ಇಳಿಸಿಕೊಂಡು ಅಜಿತ್ ಸುದ್ದಿಯಲ್ಲಿದ್ದರು.ಆಗ ಒಂದಷ್ಟು ದಿನ ಅವರು ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ ಕೂಡ.ಕೆಲವರು ಕೊವಿಡ್ ಗೆ ತುತ್ತಾಗಿದ್ದರಿಂದ ಈ ರೀತಿ ಆಗಿತ್ತಾ ಎಂದು ಪ್ರಶ್ನಿಸಿದ್ದರು.ಆದರೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಾವು ಮೊದಲಿದ್ದ ಹಾಗೂ ನಂತರದ ಫೋಟೋಗಳನ್ನು ಹಾಕಿ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು.

ಹಿರಿಯ ಪತ್ರಕರ್ತ ಅಜಿತ್ ಅವರ ಶೀಘ್ರ ಚೇತರಿಕೆಗೆ ಪತ್ರಕರ್ತರು,ಅಭಿಮಾನಿಗಳು ಹಾಗೂ ಹಿತೈಷಿಗಳು ಹಾರೈಸಿದ್ದಾರೆ.ಅಜಿತ್ ಬೇಗ ಗುಣಮುಖರಾಗಿ ತೆರೆ ಮೇಲೆ ಕಾಣಿಸಿಕೊಳ್ಳುವಂತಾಗಲಿ ಎನ್ನೋದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ ಹಾಗೂ ಹಾರೈಕೆ ಕೂಡ.

Spread the love
Leave A Reply

Your email address will not be published.

Flash News