NEW YEAR BIG..BIG SHOCK TO 4200 DISMISSED TRANSPORT EMPLYOEES..?! ಹೊಸ ವರ್ಷದ “ಫಸ್ಟ್ ಡೇ” ನೇ 4200 ಸಾರಿಗೆ ಕಾರ್ಮಿಕರಿಗೆ “ಬಿಗ್..ಬಿಗ್..ಶಾಕ್”?!

ಜೀವನೋಪಾಯಕ್ಕಿದ್ದ ಕೆಲಸ ಹೋಯ್ತು..ಓಡಾಟಕ್ಕೆ ನೀಡಿದ್ದ “ಬಸ್ ಪಾಸ್” ನ್ನೂ ಕಸಿದುಕೊಂಡ್ರಲ್ಲೋ.. ಸಾರಿಗೆ ಕಾರ್ಮಿಕರ ಅಳಲು-ಆಕ್ರೋಶ

0

ಬೆಂಗಳೂರು:ಸರ್ಕಾರದ ವಕ್ರದೃಷ್ಟಿಗೆ ಸಿಲುಕಿ ಕೆಲಸ ಕಳೆದುಕೊಂಡ ಸಾರಿಗೆ ಕಾರ್ಮಿಕರಿಗೆ ಸಂಕಷ್ಟದ ಮೇಲೆ ಸಂಕಷ್ಟ.ಕೆಲಸ ಕಳೆದುಕೊಂಡು ಹತ್ತಿರತ್ತಿರ 8-9 ತಿಂಗಳಾಗ್ತಿದೆ.ಜೀವನ ನಿರ್ವಹಣೆಗೆ ಕೈಯಲ್ಲಿ ಹಣ ಇಲ್ಲವಾಗಿದೆ.ತಮ್ಮನ್ನೇ ನಂಬಿರುವ ಹೆಂಡತಿ-ಮಕ್ಕಳು ಬೀದಿಗೆ ಬೀಳುವಂತಾಗಿದೆ.ಇಂಥಾ ಕಷ್ಟಕರ ಸನ್ನಿವೇಶದಲ್ಲಿ ಮತ್ತೊಂದು ಸವಲತ್ತು ಕೈ ತಪ್ಪೋಗುವ ಆತಂಕ ನಿರ್ಮಾಣವಾಗಿದೆ.

ಸಾರಿಗೆ ಕಾರ್ಮಿಕರ ಪರಿಸ್ತಿತಿ ಯಾವ ಶತೃವಿಗೂ ಬೇಡದಂತಾಗಿದೆ.ಅವರ ಗೋಳನ್ನು ಕೇಳುವವರೇ ಇಲ್ಲವಾಗಿದೆ.ಕೆಲಸ ಹೋಯ್ತು..ಸಂಬಳ ಬರೋದು ನಿಂತೋಯ್ತು…ಸಮಾಜದಲ್ಲಿ ಸಿಗುತ್ತಿದ್ದ ಅಲ್ಪಸ್ವಲ್ಪ ಗೌರವವೂ ಸಿಗದಂಗಾಯ್ತು.ಜೀವನ ನಿರ್ವಹಣೆಯೇ ದುಸ್ತರವಾಗಿರುವ ಸನ್ನಿವೇಶದಲ್ಲಿ ಗಾಯದ ಮೇಲೆ ಬರೆ ಎಳೆಯುವಂತೆ ಸರ್ಕಾರ ಹಾಗೂ ನಾಲ್ಕು ನಿಗಮಗಳ ಆಡಳಿತ ವ್ಯವಸ್ಥೆ ಕೆಲಸ ಕಳೆದುಕೊಂಡಿರುವ ಸುಮಾರು 4,200 ಕ್ಕೂ ಹೆಚ್ಚು ಕಾರ್ಮಿಕರಿಗೆ ಅವರ ಓಡಾಟಕ್ಕೆ ಇದ್ದ ಪಾಸ್ ಸೌಲಭ್ಯವೂ ಕೈ ತಪ್ಪಿ ಹೋಗುವ ಸನ್ನಿವೇಶ ಎದುರಾಗಿದೆ.

ಬಿಎಂಟಿಸಿ ಕಾರ್ಮಿಕರಿಗೆ ಸಿಗುವ ಸವಲತ್ತುಗಳಲ್ಲಿ ಪಾಸ್ ಕೂಡ ಒಂದು.ವರ್ಷಕ್ಕೊಮ್ಮೆ ಅದು  ರಿನೀವಲ್ ಆಗುತ್ತದೆ.ಅದಕ್ಕಾಗಿ ಕಾರ್ಮಿಕರು ಅಲೆದಾಡುವ ಸನ್ನಿವೇಶ ಇರುತ್ತಿರಲಿಲ್ಲ.ಅದೊಂದು ರುಟೀನ್ ಪ್ರೋಸಸ್. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಈಗ ಪಾಸ್ ರಿನೀವಲ್ ಆಗುವ ಅವಕಾಶಗಳೇ ಇಲ್ಲವಾಗಿವೆ.ಏಕೆಂದರೆ ಅವರೀಗ ಸಂಸ್ಥೆಯ ಅಧೀಕೃತ ಕಾರ್ಮಿಕರಲ್ಲವಾಗಿರುವುದ ರಿಂದ ಅವರ ಪಾಸ್ ಗಳನ್ನು ಮುಂದಿನ ವರ್ಷಕ್ಕೆ ಬಳಕೆಗೆ ಅನ್ವಯವಾಗುವಂತೆ ಪರಿಷ್ಕರಿಸದಂತೆ ಮೇಲಾಧಿಕಾರಿಗಳು ಆದೇಶ ಹೊರಡಿಸಿದ್ದಾರಂತೆ.ಹಾಗಾಗಿ ಹೊಸ ವರ್ಷದ ಮೊದಲ ದಿನ ವಾದ ಇಂದಿನಿಂದಲೇ 4200 ಕ್ಕಿಂತ ಹೆಚ್ಚು ಸಾರಿಗೆ ಕಾರ್ಮಿಕರು ಬಸ್ ಪಾಸ್ ನಲ್ಲಿ ಪ್ರಯಾಣಿಸುವ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ.ಇದರಿಂದ ಕಾರ್ಮಿಕರು ತಮ್ಮ ಕೈಯಿಂದ ಹಣ ಕೊಟ್ಟು ಟಿಕೆಟ್ ಪಡೆದೋ,ಅಥವಾ ದಿನದ ಪಾಸ್ ಪಡೆದೋ ಸಂಚರಿಸುವಂಥ ಸ್ಥಿತಿ ನಿರ್ಮಾಣವಾಗಲಿದೆ.

ಕೆಎಸ್ ಆರ್ ಟಿಸಿ, ಬಿಎಂಟಿಸಿ,ವಾಯುನ್ಯ ಸಾರಿಗೆ,ಈಶಾನ್ಯ ಸಾರಿಗೆ ನಾಲ್ಕು ನಿಗಮಗಳಲ್ಲಿ 4200ಕ್ಕೂ ಹೆಚ್ಚು ಕಾರ್ಮಿಕರು ಇಂದು ಕೆಲಸ ಕಳೆದುಕೊಂಡು ಸರ್ಕಾರದ ಕೆಲಸದಭಿಕ್ಷೆಯ ನಿರೀಕ್ಷೆ ಯಲ್ಲಿದ್ದಾರೆ.ಅವರಿಗೆ ನೀಡಲಾಗುತ್ತಿದ್ದ ಪಾಸ್ ಮೂಲಕ ಇಡೀ ರಾಜ್ಯವನ್ನು ಸಂಚರಿಸಬಹುದಿತ್ತು.ಆದರೆ ಅವರಿಗೆ ಪಾಸ್ ಗಳ ಲಭ್ಯತೆ ಕೈ ತಪ್ಪಿ ಹೋಗುತ್ತಿರುವುದರಿಂದ ಹಣ ಕೊಟ್ಟೇ ಸಂಚರಿಸ ಬೇಕಾಗಿದೆ.ನಮ್ಮ ಬದುಕುಗಳನ್ನು ಬೀದಿಗೆ ತಂದ ಸರ್ಕಾರ ಈಗ ಪಾಸ್ ಗಳನ್ನೂ ಕಸಿದುಕೊಂಡು ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಅನೇಕ ಕಾರ್ಮಿಕರು ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ನೋವು ತೋಡಿಕೊಂಡಿದ್ದಾರೆ.

ಕೆಲಸ ಹೋದ ಮೇಲೆ ಪಾಸ್ ಗಳನ್ನು, ತಮ್ಮ ವೈಯುಕ್ತಿಕ ಕೆಲಸಗಳಿಗಿಂತ ಹೆಚ್ಚು ಬಳಸಿಕೊಳ್ಳುತ್ತಿದ್ದುದು ತಮ್ಮ ಕೆಲಸ ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಕಾನೂನಾತ್ಮಕ ಪ್ರಕ್ರಿಯೆಗಳಿಗೆ.ಆದರೆ ಈಗ ಪಾಸ್ ಗಳು ಅಮಾನ್ಯವಾಗುತ್ತಿರುವುದರಿಂದ  ಆ ಕೆಲಸಗಳನ್ನು ಫಾಲೋ ಅಪ್ ಮಾಡಲಿಕ್ಕೆ ಕಷ್ಟವಾಗಲಿದೆ.ಹಣ ಕೊಟ್ಟು ಅಡ್ಡಾಡಲಿಕ್ಕೆ ಜೇಬಲ್ಲ ಹಣವಿಲ್ಲ ಎನ್ನುವುದು ಅನೇಕ ಕಾರ್ಮಿಕರ ಒಡಲಾಳದ ಸಂಕಟ.ಬೆಂಗಳೂರಿನಲ್ಲಾದರೆ ದಿನದ ಪಾಸ್ ಪಡೆದು ಕೆಲಸ ಮಾಡಿಕೊಳ್ಳಬಹುದು..

ಆದರೆ ದೂರದ ಊರುಗಳಲ್ಲಿರುವ ಕಾರ್ಮಿಕರು ಬೆಂಗಳೂರಿಗೆ ಕಾನೂನಾ ತ್ಮಕ ಕೆಲಸಗಳಿಗೆ ಬರಬೇಕೆಂದರೆ ಸಾವಿರಾರು ರೂ ಖರ್ಚು ಮಾಡಿಕೊಂಡು ಬರುವಂತಾಗುತ್ತದೆ.ತಿನ್ನೊಕ್ಕೆ..ಸಂಸಾರ ಸಾಕೊಕ್ಕೆ ನಮ್ಮ ಬಳಿ ಹಣ ಇಲ್ಲ..ಹೀಗಿರುವಾಗ ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳೊಕ್ಕೆ ಹಣ ಎಲ್ಲಿಂದ ತರೋದು..ಸರ್ಕಾರದವರು ನಮ್ಮನ್ನು ಎಂಥಾ ಸ್ಥಿತಿಗೆ ತಂದ್ ಬಿಟ್ರಲ್ಲ ಎಂದು ಉತ್ತರ ಕರ್ನಾಟಕ ಮೂಲದ ಅನೇಕ ಕಾರ್ಮಿಕರು ಸಂಕಟ ತೋಡಿಕೊಂಡಿದ್ದಾರೆ.

ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಪಾಸ್ ಗೊಂದಲದ ಬಗ್ಗೆ ಪ್ರಶ್ನಿಸಿದಾಗ, ಮೇಲಾಧಿಕಾರಿಗಳು ಕೆಲಸ ಕಳೆದುಕೊಂಡಿರುವ ಯಾವುದೇ ಸಾರಿಗೆ ಕಾರ್ಮಿಕರ ಬಸ್ ಪಾಸ್ ಗಳನ್ನು ರಿನೀವಲ್ ಮಾಡಬೇಡಿ ಎಂದು ಕಟ್ಟಪ್ಪಣೆ ಮಾಡಿದ್ದಾರೆ.ಅವರ ಕಣ್ ತಪ್ಪಿಸಿ ನಾವ್ ಮಾಡೊಕ್ಕಾ ಗುತ್ತಾ..ಹಾಗೊಮ್ಮೆ ಮಾಡಿದ್ರೆ ನಮ್ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದ್ರು.ತನ್ನದೇ ಕಾರ್ಮಿಕರನ್ನು ಆಡಳಿತ ವರ್ಗ ಎಷ್ಟು ಅಮಾನವೀಯವಾಗಿ ನಡೆಸಿಕೊಳ್ಳೊಕ್ಕೊ ಶುರು ಮಾಡಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ   ನಿದರ್ಶನ ಬೇಕಿಲ್ಲವೇನೋ..

ತಮ್ಮ ಓಡಾಟಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಬಸ್ ಪಾಸ್ ಗಳನ್ನು ಕಸಿದುಕೊಂಡು ಸಂಕಷ್ಟಕ್ಕೆ ಈಡುಮಾಡಿರುವ ಸರ್ಕಾರ ಹಾಗೂ ನಿಗಮಗಳ ಮುಖ್ಯಸ್ಥರ ಧೋರಣೆಗೆ ಕಾರ್ಮಿಕರು ಹಿಡಿಶಾಪ ಹಾಕಲಾರಂಭಿಸಿದ್ದಾರೆ.ನಮ್ಮನ್ನು ಒಂದು ಕುಟುಂಬದ ಸದಸ್ಯರೆಂದು ಹೇಳುವ ಸರ್ಕಾರ ಹಾಗೂ ಸಾರಿಗೆ ಸಚಿವರೇ ತಮಗಾಗುತ್ತಿರುವ ಅನ್ಯಾಯ ನೋಡಿಕೊಂಡು ಸುಮ್ಮನಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ..

ಜೀವನೋಪಾಯಕ್ಕೆ ಇದ್ದ ಒಂದೆ ಒಂದು ಆಧಾರವಾದ ಕೆಲಸವನ್ನು ಕಸಿದುಕೊಂಡು ಕಾರ್ಮಿಕರ ಬದುಕನ್ನು ಮೂರಾಮಟ್ಟೆ ಮಾಡಿದ್ದ ಸರ್ಕಾರ ಇದೀಗ ಅವರ ಸಂಚಾರ ವ್ಯವಸ್ಥೆಗಿದ್ದ ಬಸ್ ಪಾಸ್ ನ್ನು ಕಸಿದುಕೊಂಡು ಬರ್ಬಾದ್ ಸ್ಥಿತಿಗೆ ತಂದಿರುವುದು ನಿಜಕ್ಕೂ ಖಂಡನಾರ್ಹ.

Spread the love
Leave A Reply

Your email address will not be published.

Flash News