WITHIN JANUARY.9,GOOD NEWS FOR “JOB”LESS TRANSPORT EMPLYOEES: ಜನವರಿ 9 ರೊಳಗೆ ವಜಾಗೊಂಡ ಸಾರಿಗೆ ಕಾರ್ಮಿಕರಿಗೆ ನೌಕರಿ: ಗುಡ್ ನ್ಯೂಸ್ ನ ಭರವಸೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು

ನೆವ ಹೇಳೋದನ್ನು ಬಿಟ್ಟು ಸರಿಯಾಗಿ ಕೆಲಸ ಮಾಡಿ: ಎಂಡಿಗಳಿಗೆ ಶ್ರೀರಾಮುಲು ಖಡಕ್ ವಾರ್ನಿಂಗ್..

0

ಬೆಂಗಳೂರು: ಇನ್ನು ಕೆಲವೇ ದಿನ..ಕೆಲವೇ ಕೆಲವು ದಿನ..ಕೆಲಸ ಕಳೆದುಕೊಂಡು ನೌಕರಿಗೆ ಚಾತಕಪಕ್ಷಿಗಳಂತಾಗಿದ್ದ  ಸಾರಿಗೆ ಕಾರ್ಮಿಕರಿಗೆ ಸರ್ಕಾರ ಗುಡ್ ನ್ಯೂಸ್ ಕೊಡಲಿದೆ..ಇದನ್ನು ಸಾರಿಗೆ ಕಾರ್ಮಿಕರ ಸಮಾಧಾನಕ್ಕೆ ಹೇಳುತ್ತಿಲ್ಲ..ಇವತ್ತು ಆ ಪರಿ ಇತ್ತು ಸಾರಿಗೆ ಸಚಿವ ಶ್ರೀರಾಮಲು ಅಬ್ಬರಿಸಿದ ಪರಿ…ಕೆಲಸ ಕಳೆದುಕೊಂಡ ಎಲ್ಲಾ ಸಾರಿಗೆ ಕಾರ್ಮಿಕರು ಇನ್ನು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರುನಿಯೋಜನೆಗೊಳ್ಳುವಂತಾಗಬೇಕು..ಖುಷಿ ಖುಷಿಯಿಂದ ಜೀವನ ಕಳೆಯುವುದನ್ನು ನೋಡುವಂತಾಗಬೇಕೆಂದು ಸಾರಿಗೆ ಸಚಿವ ಶ್ರೀರಾಮಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೌದು..ಒಂದಲ್ಲಾ ಎರಡಲ್ಲಾ ಬರೋಬ್ಬರಿ 8-9 ತಿಂಗಳಿಂ ದ ಕೆಲಸ ಕಳೆದುಕೊಂಡು ಅಕ್ಷರಶಹ ಅತಂತ್ರವಾಗಿರುವ ಸಾರಿಗೆ ಕಾರ್ಮಿಕರಿಗೆ ನಿಜಕ್ಕೂ ಒಳ್ಳೇ ದಿನಗಳು ಕಾಯಲಾರಂಭಿಸಿವೆ.ಇಷ್ಟು ತಿಂಗಳು ಕಾಯುತ್ತಿದ್ದ  ಆ ದಿವ್ಯಗಳಿಗೆ ಕಣ್ಣ ಮುಂದಿದೆ. ಕಾರ್ಮಿಕರ ಪಾಲಿಗೆ ವಿಲನ್ ಗಳಂತಾಗಿದ್ದ ಸಾರಿಗೆ ನಿಗಮಗಳ ಅಧಿಕಾರಿಗಳ ಅಮಾನವೀಯತೆ ಹಾಗೂ ಆಟಾಟೋಪಕ್ಕೆ ಸಚಿವ ಶ್ರೀರಾಮುಲು ಅವ್ರೇ ಬ್ರೇಕ್ ಹಾಕಿದ್ದಾರೆ.ನೆವ ಅಥವಾ ಸಬೂಬು ಹೇಳೋದನ್ನು ಬಿಟ್ಟು ಕೆಲಸ ಮಾಡಿ,ಕೆಲಸ ಕಳೆದುಕೊಂಡವರು ಹೆಚ್ಚೆಂದರೆ  ಇನ್ನೊಂದು ವಾರದಲ್ಲಿ ಕೆಲಸದಲ್ಲಿರುವುದನ್ನು ನಾನು ನೋಡಬೇಕು ಅಷ್ಟೇ ಎಂದು ಸೂಚಿಸಿದ್ದಾರೆ.

ಇಂದು ನಾಲ್ಕು ನಿಗಮಗಳ ಎಂಡಿಗಳನ್ನು ಕರೆಸಿದ್ದ ಸಚಿವ ಶ್ರೀರಾಮುಲು ಈವರೆಗೆ ವಜಾಗೊಂಡಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಏನೇನ್ ಮಾಡಿದ್ದೀರಿ..ಮಾದ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ತೀವ್ರ ಮುಜುಗರವಾಗಿದೆ ಎಂದು ಕೇಳಿದ್ರೆ ಅಧಿಕಾರಿಗಳು ತಾಂತ್ರಿಕ ಹಾಗೂ ಆಡಳಿತಾತ್ಮಕ ನೆವಗಳನ್ನು ಒಡ್ಡಿ ಇನ್ನೊಂದಷ್ಟು ದಿನ ವಜಾ ವ್ಯವಸ್ಥೆ ಮುಂದುವರೆಸುವು ದು ಸೂಕ್ತ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರಂತೆ.

ಇದರಿಂದ ಕೆಂಡಾಮಂಡಲವಾದ ಸಚಿವರು, ಸುಮ್ಮನೆ ನೆವ ಹೇಳೋದನ್ನು ಬಿಟ್ಟು ಕೆಲಸ ಮಾಡೋದ್ರ ಕಡೆಗೆ ಗಮನ ಕೊಡಿ, ಕೆಲಸ ಕಳೆದುಕೊಂಡು 9 ತಿಂಗಳಿಂದ ಕಾರ್ಮಿಕರು ಅನುಭವಿಸುತ್ತಿ ರುವ ಬವಣೆಗಳ ಅಂದಾಜು ನಿಮಗೆ ಇದೆಯೇನ್ರಿ..ಆದಷ್ಟು ಬೇಗ..ಕೆಲಸ ಕಳೆದುಕೊಂಡ ಎಲ್ಲಾ ಸಾರಿಗೆ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವಂತಾಗಬೇಕು ಎಂದು ಸಚಿವ ಶ್ರೀರಾಮು ಲು ಎಚ್ಚರಿಕೆ ನೀಡಿದರಂತೆ..

ಸಾರಿಗೆ ಕಾರ್ಮಿಕರಿಗೆ ಷರತ್ತು ಹಾಕಿ ಸಾರಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳೊಕ್ಕೆ ಅಡ್ಡಗಾಲು ಹಾಕಿರುವ ಸಾರಿಗೆಯ ನಾಲ್ಕು ನಿಗಮಗಳ ಎಂಡಿಗಳಿಗೆ ಸಾರಿಗೆ ಸಚಿವ ಶ್ರೀರಾಮುಲು ಖಡಕ್ ವಾರ್ನಿಂಗ್ ನೀಡಿದ್ದಾರಲ್ಲದೇ ಲೋಕ್ ಅದಾಲತ್ ನಲ್ಲಿ ಶೀಘ್ರವೇ ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ರಂತೆ.ಷರತ್ತುಗಳನ್ನು ಒಳಗೊಂಡು ಕೆಲಸಕ್ಕೆ ನಿಯೋಜಿಸಿಕೊಳ್ಳುವ ವಿಚಾರದಲ್ಲೂ ಸರಿಯಾಗಿ ಕೆಲಸ ಮಾಡಿ..ಬೇಷರತ್ತಾಗಿ ಎಲ್ಲರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಅವರು ವಾರ್ನ್ ಮಾಡಿದ್ದಾರೆ.

ಇದೇ ವೇಳೆ ಭಾರತೀಯ ಮಜ್ದೂರ್ ಸಂಘದ ಸಾರಿಗೆ ಸಂಘಟನೆ ಕಾರ್ಯಕರ್ತರು ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದಾರೆ.ಈ ವೇಳೆ ಜನವರಿ 9 ರೊಳಗೆ ಗುಡ್ ನ್ಯೂಸ ಕೊಡುತ್ತೇನೆ..ಬೇಷರತ್ತಾಗಿ ಎಲ್ಲರನ್ನೂ ನಿಯೋಜಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಯಬಿಟ್ಟಿದ್ದಾರೆ.

Spread the love
Leave A Reply

Your email address will not be published.

Flash News