COMPETITION BETWEEN 2 RIVALERY CHANNELS..:?! “POWER” TV TOOK REVENGE OVER “BTV” : “BTV” ವಿರುದ್ಧದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ತಾ “POWER ” ಟಿವಿ..?!

BTV'S STAFF CAUGHT REDHAND:ಅಂದು ತನ್ನ ಬಗ್ಗೆ “ಅವಹೇಳನಕಾರಿ”ಸುದ್ದಿ ಬಿತ್ತರಿಸಿದ್ದ, ಬಿಟಿವಿ ವಿರುದ್ಧ “ಡೀಲಿಂಗ್.!” ಸುದ್ದಿ ಪ್ರಸಾರ ಮಾಡಿತಾ “ಪವರ್” ಟೀಂ..?!

0

ಬೆಂಗಳೂರು: ಮುಯ್ಯಿಗೆ ಮುಯ್ಯಿ ತೀರಿತಾ..?. ಬಿಟಿವಿ ಯಿಂದ ತನಗಾದ  ಅವಮಾನಕ್ಕೆ ಪ್ರತೀಕಾರ ತೀರಿಸಿ ಕೊಳ್ಳೊಕ್ಕೆ ಸಮಯಕ್ಕಾಗಿ ಕಾಯುತ್ತಿದ್ದ ಪವರ್ ಟಿವಿ ಆಡಳಿತ ಮಂಡಳಿಗೆ  ಕೊನೆಗೂ ಒಂದು  ಸಮಯ ಸಿಕ್ಕೇ ಬಿಟ್ಟಿತಾ..? ಗೊತ್ತಿಲ್ಲ,ಆದ್ರೆ ಬಿಟಿವಿ ಸಿಬ್ಬಂದಿ ಡೀಲ್ ಮಾಡುವ ವೇಳೆ ಸಿಕ್ಕಿಬಿದ್ದ ಎನ್ನುವ ವಿಷಯವನ್ನು ತುಂಬಾ ವೈಯುಕ್ತಿಕವಾಗಿ ತೆಗೆದುಕೊಂಡು ಪ್ರಸಾರ ಮಾಡಿದ ಆಪಾದನೆ ಪವರ್ ಟಿವಿ ವಿರುದ್ಧ ಕೇಳಿಬಂದಿದೆ.

ತೀರ್ಥಪ್ರಸಾದ್.
ತೀರ್ಥಪ್ರಸಾದ್.

ಇಂದು ಬೆಳಗ್ಗೆಯಿಂದ ಮಾದ್ಯಮ ಸ್ನೇಹಿತರಿರುವ ಸಾಕಷ್ಟು ವಾಟ್ಸಪ್ ಗ್ರೂಪ್ ಗಳಲ್ಲಿ ಬಿಟಿವಿ ಸಿಬ್ಬಂದಿ ಎನ್ನಲಾಗುತ್ತಿರುವ ತೀರ್ಥ ಪ್ರಸಾದ್ ಎನ್ನುವ ವ್ಯಕ್ತಿ  ಕ್ವಾರಿ ಅಕ್ರಮ ವಿಚಾರದಲ್ಲಿ 20 ಲಕ್ಷ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ. ಕಾರಿನಲ್ಲಿ ಕೂತು ಹಣದ ಕಂತೆಗಳನ್ನು ಎಣಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.ಇನ್ನು ಕೆಲವು ಗ್ರೂಪ್ ಗಳಲ್ಲಿ ವೀಡಿಯೋ ಕೂಡ ಹರಿದಾಡುತ್ತಿದೆ.ಡೀಲ್ ನಲ್ಲಿ ದೊರೆತ ಹಣ ಎನ್ನಲಾಗುತ್ತಿರುವ ಕಂತೆಗಳನ್ನು ಪಕ್ಕಕ್ಕಿಟ್ಟುಕೊಂಡು ಎಣಿಸುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ವೈರಲ್ ಮಾಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ.

ಪವರ್ ಟಿವಿ ವ್ಯವಸ್ಥಾಪಕ ರಾಕೇಶ್ ಶೆಟ್ಟಿ
ಪವರ್ ಟಿವಿ ವ್ಯವಸ್ಥಾಪಕ ರಾಕೇಶ್ ಶೆಟ್ಟಿ

ಅಕ್ರಮ ಕಲ್ಲುಕ್ವಾರಿ ಅಕ್ರಮದ ವಿಚಾರದಲ್ಲಿ ಮಾಲೀಕನನ್ನು ಬ್ಲ್ಯಾಕ್ ಮೇಲ್ ಮಾಡಿ,ಸುದ್ದಿ ಪ್ರಸಾರದ ಬೆದರಿಕೆ ಒಡ್ಡಿದ್ದಕ್ಕೆ ಹೆದರಿ ಮಾಲೀಕ 20 ಲಕ್ಷ ಹಣ ನೀಡಿದ ಎನ್ನುವುದು ಪವರ್ ಟಿವಿಯಲ್ಲಿ ಪ್ರಸಾರವಾದ ಸುದ್ದಿಯ ಒಟ್ಟಾರೆ ಸಾರ.ಹಣ ಕೊಟ್ಟ ಮಾಲೀಕ ಬಿಟಿವಿಯ ಬಂಡವಾಳ ಬಯಲು ಮಾಡಲು ತಮ್ಮ ಕಡೆಯವರಿಂದಲೇ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಸಿದನೆನ್ನುವ ಮಾತುಗ ಳಿವೆ.ಅದನ್ನು ಯಾವ ನ್ಯೂಸ್ ಚಾನೆಲ್  ಗೆ ಕೊಡುವುದು..? ಒಂದೇ ವೃತ್ತಿಯಲ್ಲಿರುವವರು ಇದನ್ನು ಪ್ರಸಾರ ಮಾಡಲು ಧೈರ್ಯ ತೋರುತ್ತಾರಾ..? ಖಂಡಿತಾ ಇಲ್ಲ  ಎನ್ನುವ ಅನುಮಾನದಲ್ಲೇ ಇದ್ದಾಗ ಅವರಿಗೆ ತೋಚಿದ್ದು ಪವರ್ ಟಿವಿ ಅಂತೆ..ಹಾಗಾಗಿ ಅವರನ್ನುಸಂಪರ್ಕಿಸಿ ಸುದ್ದಿಯನ್ನು ಕೊಟ್ಟರಂತೆ..ಹಿಂದೆ ತನ್ನ ಬಗ್ಗೆ ಸುದ್ದಿ ಮಾಡಿ  ಅವಮಾನಿಸಿದ್ದಕ್ಕೆ ಕೊತ ಕೊತ ಕುದಿಯುತ್ತಿದ್ದ ಪವರ್ ಟಿವಿ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ಈ ವೀಡಿಯೋವನ್ನು ಪ್ರಸಾರ ಮಾಡಿ,ತಮ್ಮ ಪ್ರತಿನಿಧಿಯಿಂದ ಲೈವ್ ಮಾಡಿಸಿ ಪ್ರತೀಕಾರ ತೀರಿಸಿಕೊಳ್ಳುವ ಕೆಲಸ ಮಾಡಿದರೆನ್ನುವುದು ಒಟ್ಟಾರೆ  ಘಟನೆ ಹಿನ್ನಲೆಯಲ್ಲಿ ಕೇಳಿಬರುತ್ತಿರುವ ಮಾತುಗಳು.

20 ಲಕ್ಷ ಡೀಲ್..! ನಲ್ಲಿ ಸಿಕ್ಕಿಬಿದ್ದು ಹೆಣ್ಣೂರು ಪೊಲೀಸರಿಂದ ಅರೆಸ್ಟ್ ಆಗಿರುವ ತೀರ್ಥಪ್ರಸಾದ್.
20 ಲಕ್ಷ ಡೀಲ್..! ನಲ್ಲಿ ಸಿಕ್ಕಿಬಿದ್ದು ಹೆಣ್ಣೂರು ಪೊಲೀಸರಿಂದ ಅರೆಸ್ಟ್ ಆಗಿರುವ ತೀರ್ಥಪ್ರಸಾದ್.

ಮಾದ್ಯಮ ಸ್ನೇಹಿತರ ಮಾಹಿತಿ ಪ್ರಕಾರ ತೀರ್ಥಪ್ರಸಾದ್ ಬಿಟಿವಿಯಲ್ಲಿ ವೀಡಿಯೋ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರಂತೆ.ಆರ್ಥಿಕವಾಗಿ ಸಬಲವಾಗಿರುವ ಆತನೇಕೆ ಇಷ್ಟೊಂದು ಹಣಕ್ಕೆ ದುಂಬಾಲು ಬೀಳುತ್ತಾನೆ..ಅಥವಾ ಆ ಹಣ  ಡೀಲಿಂಗ್ ದಲ್ಲವಾ..? ಆತ ಬಂಡಲ್ ಗಳನ್ನು ಇಟ್ಟುಕೊಂಡು ಎಣಿಸುತ್ತಿದ್ದ ಹಣ ಈ ಡೀಲಿಂಗ್ ಗೆ ಸಂಬಂಧಿಸಿದ್ದೇ ಅಲ್ಲವಾ..? ಎನ್ನುವ ಅನುಮಾನಗ ಳು, ಘಟನೆ ವೇಳೆ ಡೀಲಿಂಗ್ ಬಗ್ಗೆಯಾಗಲಿ,ಅದರಿಂದ ಪಡೆದುಕೊಂಡರೆನ್ನಲಾದ 20 ಲಕ್ಷದ ಬಗ್ಗೆಯಾಗಲಿ ಯಾವುದೇ ಸಂಭಾಷಣೆ ಇಲ್ಲದಿರುವುದರಿಂದ ಸಹಜವಾಗೇ ಕಾಡುತ್ತವೆ.

ಬಿಟಿವಿ ಸಿಬ್ಬಂದಿ  ಡೀಲಿಂಗ್ ವಿಚಾರದಲ್ಲಿ 20 ಲಕ್ಷ ಹಣ ಪಡೆದನೆನ್ನುವ ಆರೋಪದಲ್ಲಿ ಎಷ್ಟು ಸತ್ಯಾಂಶವಿದೆಯೊ ಗೊತ್ತಿಲ್ಲ..ಇದರ ಸತ್ಯಾಸತ್ಯತೆ  ಬಗ್ಗೆ ಅವರವರದೇ ಆದ ವ್ಯಾಖ್ಯಾನ-ವಿಶ್ಲೇಷಣೆ ಹೇಳಲಾಗುತ್ತಿದೆಯೇ  ಹೊರತು,ಅದರ ನೈಜತೆ ಪೊಲೀಸ್ ತನಿಖೆಯಲ್ಲೇ ಗೊತ್ತಾಗಬೇಕು.ಆದರೆ ಬೇರೆ ಯಾವುದೇ ಚಾನೆಲ್ ಗಳಿಗೆ ಮುಖ್ಯವೇ ಅನಿಸದ ಈ ವಿಷಯ ಕೇವಲ್ ಪವರ್ ಟಿವಿಗೆ ಮೋಸ್ಟ್ ಎಕ್ಸ್ ಕ್ಲ್ಯೂಸಿವ್ ಎಂದೆನಿಸೊಕ್ಕೆ,ದಿನವಿಡೀ ಚಚ್ಚಿ ಕೆಡವಲು ಅಸ್ತ್ರವಾಗಿದ್ದೇಕೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಪವರ್ ಟಿವಿಯ ಈ ಅತಿಯಾದ ಆಸಕ್ತಿಗೆ ಕಾರಣ ಎಂಡಿ ರಾಕೇಶ್ ಶೆಟ್ಟಿಗೆ ಮಾಡಿದ ಅವಮಾನ.ಮಾಜಿ ಮುಖ್ಯಮಂತ್ರಿ ಪುತ್ರನೊಬ್ಬನ ವಿಚಾರದಲ್ಲಿ ಸುದ್ದಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಕೆಲ ದಿನ ಚಾನೆಲ್ ಮುಚ್ಚಿದ ವೇಳೆ ಅದನ್ನು ಬಿಟಿವಿ ಪ್ರಸಾರ ಮಾಡಿ ಎಂಡಿ ರಾಕೇಶ್ ಶೆಟ್ಟಿ ಅವರನ್ನು ಅವಮಾನಿಸಲಾಯಿತೆನ್ನುವುದು ಆಡಳಿತ ಮಂಡಳಿಗಿದ್ದ ಸಿಟ್ಟು.

ಅದರಿಂದ ಕೊತ ಕೊತ ಕುದಿಯಲಾರಂಭಿಸಿದ್ದ ರಾಕೇಶ್ ಶೆಟ್ಟಿ ಅಂಡ್ ಟೀಂ ಬಿಟಿವಿ ಬಂಡವಾಳ ಬಯಲು ಮಾಡೊಕ್ಕೆ ಸಮಯಕ್ಕಾಗಿ ಹೊಂಚಾ ಕುತ್ತಿತ್ತು.ಆ ಸಂದರ್ಭ ಇಂದು ಸೃಷ್ಟಿಯಾಗಿದೆ ಅಷ್ಟೇ..ಅಂದು ಬಿಟಿವಿ ಅವರು ಪವರ್ ಟಿವಿ ಎಂಡಿ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡದಿದ್ದರೆ ಬಹುಷಃ ಇಂದು ಬಿಟಿವಿ  ಸಿಬ್ಬಂದಿ ತೀರ್ಥಪ್ರಸಾದ್ ವಿರುದ್ಧ ಪವರ್ ಟಿವಿ ಸುದ್ದಿ ಪ್ರಸಾರ ಮಾಡುತ್ತಿ ರಲಿಲ್ಲವೇನೋ ಎನ್ನುವುದು  ಸತ್ಯ..

ಇನ್ನು ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಬಿಟಿವಿ ಸಹದ್ಯೋಗಿಗಳು, ತೀರ್ಥಪ್ರಸಾದ್ ಬಿಟಿವಿ ಉದ್ಯೋಗಿಯಲ್ಲ,ಆತ ಡೀಲ್ ನಲ್ಲಿ ಸಿಕ್ಕಿಬಿದ್ದಿರುವ ಆತನ ವೈಯುಕ್ತಿಕ ವಿಚಾರ.ಇದರೊಂದಿಗೆ ಬಿಟಿವಿ ಸಂಬಂಧವನ್ನು ಥಳಕು ಹಾಕೋದು ಸರಿಯಲ್ಲ.2021 ರ ಸೆಪ್ಟೆಂಬರ್ ನಲ್ಲೇ ಆತ ಸಂಸ್ಥೆಯನ್ನು ತೊರೆದಿದ್ದಾನೆ.ಇದು ಆತನ ವೈಯುಕ್ತಿಕ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.ಹಾಗಾದರೆ ಚಾನೆಲ್ ಹೆಸರನ್ನು ಮಿಸ್ಯೂಸ್ ಮಾಡಿಕೊಂಡಿರುವುದರ ವಿರುದ್ಧ ತೀರ್ಥಪ್ರಸಾದ್ ವಿರುದ್ಧವೇ ಆಡಳಿತ ಮಂಡಳಿ ದೂರನ್ನು ದಾಖಲಿಸಬೇಕೆನ್ನುವುದು ಮಾದ್ಯಮ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ.

ಪವರ್ ಟಿವಿ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಸುವರ್ಣ ಟಿವಿ ಕೂಡ ಬಿಟಿವಿ ಸಿಬ್ಬಂದಿ ತೀರ್ಥಪ್ರಸಾದ್ ನ “ಡೀಲಿಂಗ್” ಸುದ್ದಿಯನ್ನು ಪ್ರಸಾರ ಮಾಡಿದೆ.ಸಮಾಜದ ಅಕ್ರಮಗಳನ್ನು, ಎಷ್ಟೋ ಭ್ರಷ್ಟರ ಲಂಚಬಾಕತನವನ್ನು ಎಳೆ ಎಳೆಯಾಗಿ ಪ್ರಸಾರ ಮಾಡುವ ನ್ಯೂಸ್ ಚಾನೆಲ್ ಗಳೇ  ಇಂಥದ್ದೊಂದು ಅಕ್ರಮದಲ್ಲಿ ಸಿಕ್ಕಿಬಿದ್ದಾಗ “ವೃತ್ತಿಬಾಂಧವ”ರೆಂಬ ಸಾಫ್ಟ್ ಕಾರ್ನರ್ ನಲ್ಲಿ ಸುದ್ದಿ ಪ್ರಸಾರ ಮಾಡದಿರುವುದು ವೃತ್ತಿಪರತೆನಾ…? ಪವರ್ ಟಿವಿ,ಸುವರ್ಣ ಟಿವಿ ತೋರಿದ ವೃತ್ತಿಪರತೆಯನ್ನು ಇತರೆ ನ್ಯೂಸ್ ಚಾನೆಲ್ ಗಳು ಪ್ರದರ್ಶಿಸದೆ ಹೋದದ್ದು ಎಷ್ಟು ಸರಿ ಎನ್ನುವುದು ಸಾರ್ವಜನಿಕವಾಗಿ ಸೃಷ್ಟಿಯಾಗಿರುವ ಪ್ರಶ್ನೆ.

Spread the love
Leave A Reply

Your email address will not be published.

Flash News