LOSS….LOSS…CRORES OF LOSS TO TRANSPORT.. ಲಾಸ್..ಲಾಸ್..ವೀಕೆಂಡ್ ಕರ್ಫ್ಯೂ ಎಫೆಕ್ಟ್ ಗೆ KSRTC-BMTC ಗೆ 16 ಕೋಟಿ ಲಾಸ್..!!??

ಸಾವಿರಾರು ಬಸ್ ಗಳ ಕಾರ್ಯಾಚರಣೆ ಹೊರತಾಗ್ಯೂ ಲಾಸ್-ಮತ್ತಷ್ಟು ಸಂಕಷ್ಟಕ್ಕೆ ಈಡಾದ ಸಾರಿಗೆ ನಿಗಮಗಳು

0

ಬೆಂಗಳೂರು: ಇದು ನಿರೀಕ್ಷಿತ ಕೂಡ…ವಿಕೇಂಡ್ ಕರ್ಫ್ಯೂ ವೇಳೆ ಲಾಸ್ ಆಗೋದು ಕನ್ಫರ್ಮ್ ಆಗಿತ್ತು.ಈಗ ಅದರ ಲೆಕ್ಕಾಚಾರ ಸಿಕ್ಕಿದ್ದು ಬಿಎಂಟಿಸಿ ಹಾಗು ಕೆಎಸ್ ಆರ್ ಟಿಸಿಗೆ ಕೋಟ್ಯಾಂತರ ನಷ್ಟ ಉಂಟಾಗಿದೆ.

ಕನ್ನಡ ಪ್ಲ್ಯಾಶ್ ನ್ಯೂಸ್ ಗೆ ಸಿಕ್ಕ ಮಾಹಿತಿಗಳ ಪ್ರಕಾರ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ನಿಗಮಗಳಿಗೆ ದಿನದ ಗಳಿಕೆಯಲ್ಲಿ ಭಾರೀ ಖೋತಾ ಉಂಟಾಗಿದೆ.ಬಿಎಂಟಿಸಿಗೆ ಎರಡು ದಿನಗಳಲ್ಲಿ 6 ಕೋಟಿ ಖೋತಾ ಆಗಿದೆ.ಇನ್ನು ಕೆಎಸ್ ಆರ್ ಟಿಸಿಗೆ 10 ಕೋಟಿ ಆದಾಯ ಕಡಿತವಾಗಿದೆ.

ಬಿಎಂಟಿಸಿಗೆ ದಿನನಿತ್ಯ 3 ಕೋಟಿ ಗಳಿಕೆಯಾಗುತ್ತಿದೆ.ಕೊರೊನಾ ಸಂಕಷ್ಟದಿಂದಾಗಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ.ಸರಾಸರಿ ಅಂಕಿಅಂಶಗಳನ್ನು ಲೆಕ್ಕ ಹಾಕಿ ಶನಿವಾರ ಹಾಗು ಭಾನುವಾರಗಳಂದು ಬಿಎಂಟಿಸಿಗೆ ಆಗುತ್ತಿದ್ದ ಗಳಿಕೆಯ ಖೋತಾವನ್ನು 6 ಕೋಟಿ ಎನ್ನಲಾಗಿದೆ. ಅಂದ್ಹಾಗೆ ಬಿಎಂಟಿಸಿ ಶನಿವಾರ 700 ಹಾಗೂ ಭಾನುವಾರ 1000 ಬಸ್ ಗಳು ಕಾರ್ಯಾಚರಣೆಯಾಗಿದ್ವು.

ಬಿಎಂಟಿಸಿಗಿಂತ ಹೆಚ್ಚು ನಷ್ಟವಾಗಿರುವುದು ಕೆಎಸ್ ಆರ್ ಟಿಸಿಗೆ ನಿತ್ಯ ಕೆಎಸ್ ಆರ್ ಟಿಸಿಗೆ 8 ಕೋಟಿ ಹಣ ಗಳಿಕೆಯನ್ನು ನಿರೀಕ್ಷಿಸಲಾಗುತ್ತದೆ.ಆದರೆ ವೀಕೆಂಡ್ ಕರ್ಫ್ಯೂ ಕಾರಣಕ್ಕೆ ಶನಿವಾರ 4 ಕೋಟಿ ನಷ್ಟವಾದ್ರೆ ಭಾನುವಾರ 6 ಕೋಟಿ ಗಳಿಕೆ ಇಲ್ಲವಾಗಿದೆ.ಇದರ ಮೊತ್ತವನ್ನು 10 ಕೋಟಿ ಎನ್ನಲಾಗಿದೆ.ಅಂದ್ಹಾಗೆ ಕೆಎಸ್ ಆರ್ ಟಿಸಿ ಶನಿವಾರ ಹಾಗು ಭಾನುವಾರ ತಲಾ 2,500 ಬಸ್ ಗಳ ಕಾರ್ಯಾಚರಣೆ ಮಾಡಿತ್ತೆನ್ನುವುದನ್ನು ನಿಗಮಗಳ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.

ಈ ಎರಡು  ನಿಗಮಗಳ ನಷ್ಟ 16 ಕೋಟಿ ಆಗಿರುವಾಗ ಉಳಿದ ಎರಡು ನಿಗಮಗಳಲ್ಲಿ ಕಾರ್ಯಾಚರಣೆ ಹೊರತಾಗ್ಯೂ ಮತ್ತಷ್ಟು ಕೋಟಿಗಳಷ್ಟು ಇಳಿಕೆ ಖೋತಾ ಆಗಿರೋ ಸಾಧ್ಯತೆಗಳಿವೆ ಎನ್ನಲಾಗಿದೆ.

Spread the love
Leave A Reply

Your email address will not be published.

Flash News