ಬೆಂಗಳೂರು: ಪೊಲೀಸ್ರು ಸುಮ್ಮನಿದ್ದಾರೆಂದ್ರೆ ಅವರು ನಿರ್ಲಕ್ಷ್ಯ ವಹಿಸಿದ್ದಾರೆಂದಲ್ಲ..ಬೇಟೆಗೆ ಸಜ್ಜಾಗುತ್ತಿದ್ದಾರೆಂದೇ ಅದಕ್ಕೆ ಅರ್ಥ ಕಲ್ಪಿಸಬೇಕಾಗುತ್ತದೆ.ಹೊಸ ವರ್ಷದ ಆರಂಭದಲ್ಲೇ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತ ಕೆಲಸಗಳನ್ನು ಪೊಲೀಸ್ರು ಮಾಡುತ್ತಿದ್ದಾರೆನ್ನುವುದೇ ಸಮಾಧಾನದ ಸಂಗತಿ..
ಹೌದು..ಸೈಲೆಂಟಾಗಿದ್ದ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ.ಪಾಕೆಟ್ ನೊಳಗಿದ್ದ ರಿವಾಲ್ವರ್ ಗಳು ಮತ್ತೆ ಸುದ್ದಿ ಮಾಡಿವೆ. ಕೊಲೆ,ದರೋಡೆ,ಕಿಡ್ನಾಪ್,ಮನೆಗಳ್ಳತನ ಹೀಗೆ 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಮೋಸ್ಟ್ ವಾಂಟೆಂಡ್ ಆಗಿದ್ದ ಖತರ್ನಾಕ್ ರೌಡಿ ಶೀಟರ್ ನರಸಿಂಹ@ನರಸಿಮ್ಮ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

30ಕ್ಕು ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ರೌಡಿ ಶೀಟರ್ ನರಸಿಂಹ ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ ಮಾಡುವ ಕೆಲಸದಲ್ಲಿ ನಿರತವಾಗಿದ್ದ.ಈತನನ್ನು ಪೊಲೀಸರು ಹುಡುಕುತ್ತಿದ್ದಾಗ ಆರೋಪಿ ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ ಇರುವ ಮಾಹಿತಿ ಸಿಕ್ಕಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಗಿರಿನಗರ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ರೆಡ್ಡಿ ತಮ್ಮ ತಂಡದೊಂದಿಗೆ ನರಸಿಂಹನ ಬೆನ್ನು ಹತ್ತಿದ್ದಾರೆ.ಅಪಾಯವನ್ನು ಅರಿತ ಖತರ್ನಾಕ್ ರೌಡಿ ತನ್ನ ಬಳಿ ಇದ್ದ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಇದೇ ವೇಳೆ ಕಾನ್ಸ್ ಟೇಬಲ್ ಮೋಹನ್ ಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ.ವಾರ್ನ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಆದರೂ ಓಡಲಾರಂಭಿಸಿದಾಗ ಆತನ ಬಲಗಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ.
ಗಾಯಾಳುವಾಗಿರುವ ಪಿಸಿ ಮೋಹನ್ ಹಾಗೂ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನರಸಿಂಹನ ಬಂಧನದಿಂದ ಹೊಸಕರೆ ಹಳ್ಳಿ ಸುತ್ತಮುತ್ತಲ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಪೊಲೀಸರ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.