“SAMANVI” DIMINISHED THE LITTLE ANGEL…..: ಕರುನಾಡನ್ನೇ ಕಣ್ಣೀರಲ್ಲಿ ಮುಳುಗಿಸಿದ “ಸಮನ್ವಿ” ಎಂಥಾ ಅದ್ಭುತ “ಕಂದ”ಮ್ಮ ಗೊತ್ತಾ..? ಅಮ್ಮ ಅಮೃತಾನೇ ಹೇಳಿಕೊಂಡಿದ್ದ ಅನುಭವ ಕೇಳಿ ನೋಡಿ..

ನಮ್ಮ ಮನೆಗಳ ಅಂಗಳದಲ್ಲೇ ಆಡುತ್ತಿದ್ದ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಕರ್ನಾಟಕ -ಅಮ್ಮನಿಗೆ ತಾಯಿ.ಅಪ್ಪನಿಗೆ ಸ್ನೇಹಿತೆಯಾಗಿದ್ದ ಕಂದಮ್ಮ ಸಮನ್ವಿ.... ರಿಯಾಲಿಟಿ ಶೋನಿಂದ ಹೊರಬಿದ್ದಾಗಲೂ ಯಾಕಮ್ಮ ಎಂದು ಒಮ್ಮೆಯೂ ಪ್ರಶ್ನಿಸದೆ ಅಮ್ಮನ ಆರೈಕೆಯಲ್ಲಿ ತೊಡಗಿದ್ದಂತೆ ಕಂದಮ್ಮ

0
ಇನ್ನೆಲ್ಲಿ ಆ ನಗು…ಆ ತುಂಟಾಟ..ಮುಗ್ಧತೆ..ಎಲ್ಲವೂ ಬರೀ ನೆನಪು..
ಇನ್ನೆಲ್ಲಿ ಆ ನಗು…ಆ ತುಂಟಾಟ..ಮುಗ್ಧತೆ..ಎಲ್ಲವೂ ಬರೀ ನೆನಪು..
ಮರೆಯಾದೆಯಾ ಕಂದಮ್ಮ..
ಮರೆಯಾದೆಯಾ ಕಂದಮ್ಮ..

ಬೆಂಗಳೂರು:ಸಾವೇ ಹಾಗೆ…..ಅದೊಂದು ತಣ್ಣನೆಯ ಕ್ರೌರ್ಯ..ಸತ್ತೋರು ಪರಿಚಯದವರೋ.. ಅಪರಿಚಿತರೋ ಅಥವಾ ಶತೃಗಳೇ ಆಗಿರಲಿ, ಅವರ ಬಗ್ಗೆ ಒಂದು ಸಹಾನುಭೂತಿ ವ್ಯಕ್ತವಾಗೋದು ಸಹಜ. ಅದರಲ್ಲೂ ಕೆಲವರು ಆತ್ಮೀಯರು-ಆತ್ಮೀಯರೆಂಬ ಭಾವ ಮೂಡಿಸಿದವರು ನಮ್ಮಲ್ಲಿ ಅಗಲಿ ಹೋದರಂತೂ ಅದು ನೀಡುವ ಮಾನಸಿಕ ಯಾತನೆ,ಹೃದಯ ಹಿಂಡುವ ನೋವು ಅಸಹನೀಯ,ಅದೊಂದು ಅವ್ಯಕ್ತ ಹಿಂಸೆ..ಇಂಥಾ ಅನುಭವಗಳು ಆಗಾಗ ಆಗುತ್ತಲೇ ಇರುತ್ತವೆ..

ಪುನೀತ್ ರಾಜ್ ಕುಮಾರ್ ಸತ್ತಾಗ ಪ್ರತಿಯೋರ್ವರು ಬಿಕ್ಕಿದ್ದು,ಗೋಳಾಡಿದ್ದು,ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಗಳು ಗಟ್ಟಲೇ ಶೋಕತಪ್ತವಾಗಿದ್ದಕ್ಕೆ ಕಾರಣವಾಗಿದ್ದೂ ಅದೇ..ನಮ್ಮ ಕುಟುಂಬದಲ್ಲಿ ಹುಟ್ಟದಿದ್ದರೂ..ನಮ್ಮ ರಕ್ತಸಂಬಂಧಿಯಾಗದಿದ್ದರೂ ಪುನೀತ್ ಸತ್ತಾಗ ಬಹುತೇಕರಿಗೆ ಕಾಡಿದ್ದು ನಮ್ಮ ಮನೆಯಲ್ಲಿಯೇ ಯಾರೋ ಅಣ್ಣ-ತಮ್ಮ-ಮಗ-ಮೊಮ್ಮಗನೇ ಅಗಲಿದರೆನ್ನುವ ನೋವು..ಪುನೀತ್ ನಮ್ಮನ್ನಗಲಿ ಎರಡು ತಿಂಗಳುಗಳೇ ಕಳೆದಿದ್ದರೂ ಇವತ್ತಿಗೂ ಆ ಸೂತಕ ಕಳೆದಿಲ್ಲ..

ಅಪ್ಪ-ಅಮ್ಮನ ಜತೆ ಕಂದಮ್ಮ ಸಮನ್ವಿ
ಅಪ್ಪ-ಅಮ್ಮನ ಜತೆ ಕಂದಮ್ಮ ಸಮನ್ವಿ

ಇಷ್ಟೆಲ್ಲಾ ಹೇಳೊಕ್ಕೆ ಕಾರಣವಾಗಿದ್ದು ಪುಟಾಣಿ ಸಮನ್ವಿ ಅಕಾಲಿಕ ಅಗಲಿಕೆ.ಆ ಮಗುವಿನ ಸಾವು ಪ್ರತಿಯೋರ್ವರ ಮನೆ-ಮನಸಲ್ಲೂ ಭರಿಸಲಾರದ ನೋವು ಸೃಷ್ಟಿಸಿಬಿಟ್ಟಿದೆ.ನಮ್ಮ ಮನೆ ಅಂಗಳದ ಪ್ರಕಾಶಮಾನ ಬೆಳಕಲ್ಲಿ ನಲಿಯುತ್ತಿದ್ದ ಬೆಳದಿಂಗಳೇ ಮಾಯವಾದಂತ ಅನುಭವವಾಗುತ್ತಿದೆ. ರಿಯಾಲಿಟಿ ಶೋ ನಲ್ಲಿ ಆಕೆಯ ಮಾತು-ಆಟ-ಪ್ರೌಡಿಮೆ-ಮುಗ್ಧತೆ-ತೊದಲು ಮಾತು ಎಲ್ಲಾ ನೆನಪುಗಳು ಒಟ್ಟಾಗಿ ಹೃದಯ ಹಿಂಡುವಂತೆ ಮಾಡಿದೆ.ಬಾಳಿ ಬದುಕಬೇಕಾದ ಹೂವೊಂದು ಶಾಶ್ವತವಾಗಿ ಮುದುಡಿ ಹೋಗಿದೆ.ಮಗುವಿನ ಬೆಳವಣಿಗೆಯನ್ನು ನೋಡಿ ಆನಂದಿಸಬೇಕಿದ್ದ ತಂದೆ-ತಾಯಿ ಆಕೆಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುವ ದೃಶ್ಯ ಮನಕಲಕುತ್ತದೆ.ಜನ್ಮಪೂರ್ತಿ ಶೋಕಸಾಗರದಲ್ಲಿ ದಿನದೂಡುವಂತೆ ಮಾಡಿದ ಕ್ರೂರವಿಧಿಗೆ ಇಡೀ ಕರುನಾಡು ಹಿಡಿಶಾಪ ಹಾಕುತ್ತಿದೆ.

ಎಲ್ಲವೂ ಆಗಿದ್ದ ಅಮ್ಮನೊಂದಿಗೆ ಸಮನ್ವಿ
ಎಲ್ಲವೂ ಆಗಿದ್ದ ಅಮ್ಮನೊಂದಿಗೆ ಸಮನ್ವಿ

ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಒಂದು ಮಗು ಆಯ್ಕೆಯಾಗುವುದೆಂದರೆ ಅದು ಸಾಮಾನ್ಯ ವಿಷಯವಾಗಿರಲಿಲ್ಲ..ಅಮ್ಮ ಅಮೃತಾನಾಯ್ಡುಗೆ ಸಮಾಜದಲ್ಲೊಂದು “ಐಡೆಂಟಿಟಿ” ಇತ್ತೆನ್ನುವ ಕಾರಣ ಮಗಳಾದ ಸಮನ್ವಿ ಆಯ್ಕೆಗೆ ಕಾರಣ ಆಗಿರಲೇ ಇಲ್ಲ. ಆಕೆಯಲ್ಲಿದ್ದ  ಆ ಒಂದು ಅದ್ಭುತ ಟ್ಯಾಲೆಂಟ್ ರಿಯಾಲಿಟಿ ಶೋನ ವೇದಿಕೆಯಲ್ಲಿ ಕಾಣಿಸಿಕೊಳ್ಳೊಕ್ಕೆ ಸಹಕಾರಿಯಾಗಿತ್ತು.ಆಕೆ ತನ್ನ ಸಾಮರ್ಥ್ಯವನ್ನು ಕೂಡ ಅನೇಕ ಟಾಸ್ಕ್ ಗಳಲ್ಲಿ ಪ್ರೂವ್ ಮಾಡಿ ಕರುನಾಡಿನ ಕುಟುಂಬದ ಮುದ್ದಿನ ಕಣ್ಮಣಿಯಾಗಿದ್ದೂ ಸತ್ಯ.

ಮಕ್ಕಳು  ಆ ವಯಸ್ಸಿನಲ್ಲಿ ಏನೇ ಮಾಡಿದರೂ ಚೆನ್ನ ಎನ್ನುವಂತೆ ಸಮನ್ವಿ ಪ್ರತಿಭೆ ಕೂಡ ಎಲ್ಲರನ್ನೂ ಆಕರ್ಷಿಸಿತ್ತು.ಸಾಕಷ್ಟು ಟಾಸ್ಕ್ ಗಳಲ್ಲಿ ಗೆಲುವು ಸಾಧಿಸಿದಾಗಲೆಲ್ಲಾ ಅಮ್ಮ ಸಂಭ್ರಮಿಸುತ್ತಿದ್ದ ರೀತಿ,ಅಮ್ಮನ ಬಗ್ಗೆ ಆಕೆ ಹೇಳುತ್ತಿದ್ದ ಮಾತುಗಳೆಲ್ಲಾ ಈಗ ನೆನಪಾದ್ರೆ ನಿಜಕ್ಕೂ ಸಂಕಟವಾಗುತ್ತೆ.

ಅಮೃತಾ ದಂಪತಿಗೆ ಸಮನ್ವಿ ಒಬ್ಬಳೇ ಮಗಳು.ಮೊದಲ ಮಗು ಅಕಾಲಿಕವಾಗಿ ಸಾವನ್ನಪ್ಪಿದಾದ ಪೋಷಕರಿಗೆ ಆ  ನೋವನ್ನು ಮರೆಸಿದ ಮಗು ಅದು.ಮಗಳನ್ನು ಮುದ್ದಾಗಿ ಬೆಳೆಸಿದ್ದ ಅಮೃತಾ ತನ್ನ ದಿನದ ಹೆಚ್ಚಿನ ಸಮಯವನ್ನು ಆಕೆಗಾಗಿಯೇ ಮೀಸಲಿಟ್ಟಿದ್ದರು.ಇದೆಲ್ಲದರ ನಡುವೆ ಮತ್ತೊಂದು ಸಂಭ್ರಮ ಮನೆ ಮಾಡಿತ್ತು.ಅದೇ ಅಮೃತಾ ಗರ್ಭಿಣಿಯಾಗಿದ್ದ ಸಂಗತಿ.ಇದು ನಗು-ಸಂತೋಷ-ಸಂಭ್ರಮವನ್ನು ಇಮ್ಮಡಿ ಮಾಡಿತ್ತು.ಸಮನ್ವಿ ಕೂಡ ಅಮ್ಮ ಮನೆಯಲ್ಲಿ ಹೆಚ್ಚು ದಣಿಯದಂತೆ-ಆಯಾಸಗೊಳ್ಳದಂತೆ ನೆರವಾಗುತ್ತಿದ್ದಳಂತೆ.ಆ ಪುಟ್ಟ ವಯಸ್ಸಲ್ಲೂ ಅಮ್ಮನಿಗೆ ಸಹಕಾರಿಯಾಗುತ್ತಿದ್ದಳಂತೆ.ಅಮ್ಮನ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಮಾತನಾಡಿಸಿ ಸಂಭ್ರಮಿಸುತ್ತಿದ್ದಳಂತೆ.ಅಮ್ಮನಿಗೆ ಯಾವುದೆ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿದ್ದಳಂತೆ ಎನ್ನುವುದನ್ನು ಸ್ವತಃ ಅಮೃತಾ ಅವರೇ ಹೇಳಿಕೊಂಡಿದ್ದುಂಟು.

ರಿಯಾಲಿಟಿ ಶೋನ ಜಡ್ಜ್ ಆಗಿರೋ ತಾರಾ ಹೇಳುವಂತೆ ಏಳು ವಾರಗಳವರೆಗೂ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ಇದ್ದು ಅನೇಕ ಟಾಸ್ಕ್ ಗಳನ್ನು ಗೆದ್ದಿದ್ದ ಸಮನ್ವಿ ಕಳೆದ ವಾರವಷ್ಟೇ ಎಲಿಮಿನೇಟ್ ಆಗಿದ್ದರು.ಅದು ಕೂಡ ಅಮ್ಮ ಅಮೃತಾ ಪ್ರಗ್ನೆಂಟ್ ಎನ್ನುವ ಕಾರಣಕ್ಕೆ.ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದರೂ ಅಮ್ಮನ ಕಾರಣಕ್ಕೆ  ಅನಿವಾರ್ಯವಾಗಿ ಹೊರ ಬಂದಾಗಲೂ ಯಾಕಮ್ಮ ಎಂದು ಒಂದೇ ಒಂದು ಮಾತನ್ನು ಕೇಳಲಿಲ್ಲವಂತೆ ಆ ಕೂಸು…ನಮ್ಮಮ್ಮ ನನಗೆ ಸದಾ ಸೂಪರ್ ಸ್ಟಾರ್ ಎಂದು ಹೇಳುತ್ತಲೇ ಮಾರನೇ ದಿನದಿಂದ ಎಂದಿನಂತೆ ಆಟಪಾಠಗಳಲ್ಲಿ ತೊಡಗಿಕೊಂಡಿದ್ದಳಂತೆ.

ಅಮ್ಮ ಅಮೃತಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾಗಲೂ ಫೋನ್ ಮಾಡಿ ತೊಂದರೆ ನೀಡದೆ ಮನೆಯಲ್ಲಿ ಮಾಡಿಟ್ಟ ಆಹಾರವನ್ನು ಸೇವಿಸಿ ಸುಮ್ಮನಿರುತ್ತಿತ್ತದ್ದಳಂತೆ.ಶೂಟಿಂಗ್ ನಿಂದ ಸುಸ್ತಾಗಿ ಬಂದ್ರೆ ಅಮ್ಮನ ಸ್ಥಾನದಲ್ಲಿ ನಿಂತು ವಿಚಾರಿಸಿ ದಣಿವಾರಿಸುತ್ತಿ ದ್ದಳಂತೆ.ತನಗೆ ಏನೇ ಸಮಸ್ಯೆಯಾದ್ರೂ ಅದನ್ನು ಮರುಪ್ರಶ್ನಿಸದೆ ಸಹಿಸಿಕೊಳ್ಳುತ್ತಿದ್ದ  ಮಗಳ ಅಗಲಿಕೆ ಅಮೃತಾ  ಪಾಲಿಗೆ ಎಂಥಾ ನೋವನ್ನು ನೀಡಿರಬಹುದೆನ್ನುವುದನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯವಾಗೊಲ್ಲ.ತನ್ನ ತೋಳುಗಳಲ್ಲಿ ಆಡಿ ಬೆಳೆಸಬೇಕಿದ್ದ ಕಂದಮ್ಮನ ಶರೀರಕ್ಕೆ ಅದೇ ಕೈಗಳಿಂದ ಕೊನೇ ವಿದಾಯ ಹೇಳಬೇಕಾಗಿ ಬಂದಿರುವಂಥ ಹೃದಯ ಹಿಂಡೋ ಸನ್ನಿವೇಶ ಯಾವೊಬ್ಬ ತಾಯಿಗೂ ಬಾರದಿರಲಿ..

ಅಂಥಾ ಮಗು..ಅಂಥಾ ಅತ್ಯದ್ಭುತ ಮಗುವನ್ನು ಅಪಘಾತದ ರೂಪದಲ್ಲಿ ವಯಸ್ಸಲ್ಲದ ವಯಸ್ಸಲ್ಲಿ ಕ್ರೂರವಿಧಿ ಕೊಂಡೊಯ್ದಿದ್ದು ಯಾವ ನ್ಯಾಯ..?  ಪುತ್ರ ಶೋಕ ನಿರಂತರ ಎನ್ನುವ ಮಾತಿನಂತೆ ಹೆತ್ತ ಅಪ್ಪಮ್ಮನಿಗೆ ಶಾಶ್ವತವಾಗಿ ನೋವನ್ನು ನೀಡಿ ಹೋಗಿಬಿಟ್ಟಿದ್ದಾಳೆ.ಗರ್ಭಿಣಿಯಾಗಿರುವ ಅಮೃತಾ ಹೊಟ್ಟೆಯಲ್ಲಿ ಅದೇ ಸಮನ್ವಿ ಮಗುವಾಗಿ ಜನ್ಮ ತಳೆಯಲಿ.. ಇಬ್ಬರು ಮಕ್ಕಳ ಅಗಲಿಕೆ ನೀಡಿರುವ ನೋವನ್ನು ಭರಿಸುವಂತ ಮಗುವಾಗಿ ಬೆಳೆಯಲಿ ಎಂದು ಕಣ್ಣೀರಿಡುತ್ತಿರುವ ಕರುನಾಡು ದೇವರಲ್ಲಿ ಪ್ರಾರ್ಥಿಸಲಾರಂಭಿಸಿದೆ.

Spread the love
Leave A Reply

Your email address will not be published.

Flash News