Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

IS IPS RAVI “D” CHENNANNANAVAR LOSING HIS PATIENCE WITH THE ALLEGATIONS…?! ಆಪಾದನೆ ಬಂದಾಕ್ಷಣ ಅದೇ ಸತ್ಯನಾ..? ನಿರಂತರ ಆಪಾದನೆಗಳಿಂದ ವಿಚಲಿತರಾಗುತ್ತಿದ್ದಾರಾ ರವಿ ಡಿ. ಚನ್ನಣ್ಣನವರ್.. ?!

 ಬೆಂಗಳೂರು:ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿರೋ ವ್ಯಕ್ತಿ ಈ  ಐಪಿಎಸ್ ರವಿ.ಡಿ.ಚನ್ನಣ್ಣನವರ್.ತನ್ನ  ವಿರುದ್ದ ಕೇಳಿಬಂದ ಆರೋಪಗಳು  ಅವರನ್ನು ವಿಚಲಿತಗೊಳಿಸಿರುವಂತಿದೆ.ಅದು ಸಹಜವು ಕೂಡ..ಆದರೆ ಆ ಆರೋಪಗಳು ಸತ್ಯಕ್ಕೆಷ್ಟು ಹತ್ತಿರ..ಅಥವಾ ಸತ್ಯಕ್ಕೆಷ್ಟು ದೂರ ಎನ್ನುವುದು ಜಗಜ್ಜಾಹೀರಾಗೊಕ್ಕೆ ತಾವೇ ಒಪ್ಪಿಕೊಂಡಿದ್ದರೆ ಕರ್ನಾಟಕದ ಜನರ ಮುಂದೆ ದೊಡ್ಡವರಾಗಿಬಿಡುತ್ತಿದ್ದರೇನೋ..ಆದರೆ ಅಂಥದ್ದ್ಯಾವುದೇ ಪ್ರಯತ್ನಕ್ಕೆ ಮುಂದಾಗದೆ ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ ಬೇರೆಯದೇ ದಾರಿ ಹಿಡಿಯುತ್ತಿರುವುದು ಅವರನ್ನು ಆದರ್ಶ-ಮಾದರಿಯನ್ನಾಗಿಸಿಕೊಂಡ ಸಾವಿರಾರು  ಅಭಿಮಾನಿಗಳನ್ನೇ ನಿರಾಶೆಗೊಳಿಸಿದೆ.

ರವಿ.ಡಿ ಚನ್ನಣ್ಣನವರ್..ಈ ರಾಜ್ಯ ಕಂಡ ಕೆಲವೇ ಕೆಲವು ಪ್ರಾಮಾಣಿಕ-ದಕ್ಷ ಅಧಿಕಾರಿಗಳಲ್ಲಿ ಒಬ್ಬರೆನ್ನುವುದರಲ್ಲಿ ಅನುಮಾನವಿಲ್ಲ..ಮಾನವೀಯ ಕಾಳಜಿ-ಕಳಕಳಿ-ಸಂವೇದನೆ ವಿಷಯಕ್ಕೆ ಬಂದರೆ ಪೊಲೀಸ್ ಇಲಾಖೆಯಲ್ಲಿ ಇಂಥವರೂ ಇರುತ್ತಾರಾ ಎಂದು ಜನ ಹುಬ್ಬೇರಿಸಿ ಪ್ರಶ್ನಿಸುವಂತೆ ಮಾತನಾಡೊಕ್ಕೆ ಕಾರಣವಾದಂಥ ಆಫೀಸರ್ ಎನ್ನುವುದೂ ಸತ್ಯ..ಮಾತಿಗೆ ನಿಂತರೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿಡುವ  ಒಂದು ಸಮ್ಮೋಹಕ ಶಕ್ತಿ ಇವರಲ್ಲಿತ್ತು.ಇದು ಸಂಸ್ಕಾರ-ಸಂಸ್ಕ್ರತಿಯ ಕೊಡುಗೆ ಎನ್ನುವುದನ್ನು ಒಪ್ಪಿಕೊಂಡವರು ಅದೆಷ್ಟೋ ಜನ.ತಾನು ಅನುಭವಿಸಿದ ಬಡತನ,ಸಾಧನೆಗೆ ಸಾಧನವಾದ ಅದೇ ಬಡತನದ ಬಗ್ಗೆ ಭಾವುಕರಾಗಿ ಮಾತನಾಡಿದ್ದರಿಂದಲೇ ಪ್ರೇರಣೆಗೊಂಡು ಅವರಂತೆ ದೊಡ್ಡ ಹುದ್ದೆಗಳಿಗೆ ಏರಿದವರೂ ನಮ್ಮ ನಡುವಿದ್ದಾರೆ..ಬಹುಷಃ ಅದೇ ಕಾರಣಕ್ಕೆ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಅವರಿಗಿದ್ದಾರೆ.ಇಂತದ್ದೊಂದು ಹವಾ ಸೃಷ್ಟಿಸಿದ ಪೊಲೀಸ್ ಅಧಿಕಾರಿ ಇತ್ತೀಚಿನ ವರ್ಷಗಳಲ್ಲಿ ಮತ್ತೊಬ್ಬರಿರಲಾರರು ಎನ್ನುವುದು ಕೂಡ ಬಹುತೇಕ ಸತ್ಯ.

ಆದರೆ…ಆದರೆ..ಇತ್ತೀಚೆಗೆ ಕೇಳಿಬರಲಾರಂಭಿಸಿದ ಕೆಲವು ಕಹಿ ಸತ್ಯಗಳು ರವಿ.ಡಿ.ಚನ್ನಣ್ಣನವರ್ ಬಗ್ಗೆ  ತಾವಂದುಕೊಂಡಿದ್ದೇ ಅಂತಿಮ ಸತ್ಯವಲ್ಲ ಎನ್ನುವ ಬೇಸರದ ಭಾವನೆ ಮೂಡಿಸಿರುವುದು ಸುಳ್ಳಲ್ಲ.ನಾವಂದುಕೊಂಡಿದ್ದ ರವಿ.ಡಿ.ಚನ್ನಣ್ಣನವರ್ ಹೀಗಾ..? ಅವರು ಹೀಗೆಲ್ಲನಾ..ಇದೆಲ್ಲಾ ಸತ್ಯನಾ..?ನಾವು ನಂಬಿದ್ದು ಸುಳ್ಳಾ..? ಆ ವ್ಯಕ್ತಿ ಹಾಗೆಲ್ಲಾನಾ..? ಎನ್ನುವುದರಿಂದ ಹಿಡಿದು ಎಲ್ಲಾ ಹೀಗೇ ಆಗೋದ್ರೆ ಯಾರನ್ನು ನಂಬೋದಪ್ಪಾ.? ಎನ್ನುವವರೆಗೂ ಜನ ಪರಸ್ಪರ ಮಾತನಾಡಿಕೊಳ್ಳೊಕ್ಕೆ ಶುರುಮಾಡಿದ್ದಾರೆನ್ನುವ ಮಾತುಗಳಿವೆ.ಆಪಾದನೆ ಬಂದಾಕ್ಷಣ ಅದೇ ಸತ್ಯವಲ್ಲ..ತನಿಖೆ ಪೂರ್ಣಗೊಂಡು ಸತ್ಯಾಸತ್ಯತೆ ಹೊರಬರಲಿ ಎನ್ನುವ ಮನಸ್ಥಿತಿಯ ಜನರನ್ನು ಬಿಟ್ಟರೆ ಸಾಕಷ್ಟು ಫ್ಯಾನ್ಸ್ ಗಳ ಮನಸಲ್ಲಿ ಈಗಲೂ ಗೊಂದಲ ಮನೆ ಮಾಡಿದೆ.

ಆಪಾದನೆ ಬಂದಾಕ್ಷಣ ಅದೇ ಅಂತಿಮ ಸತ್ಯವಲ್ಲ ಎನ್ನುವುದು ಇಲಾಖೆಯಲ್ಲಿರುವ ರವಿ.ಡಿ.ಚನ್ನಣ್ಣನವರ್ ಅವರಿಗೆ ಬಿಡಿಸೇಳಬೇಕಿಲ್ಲ.ಸಾಕಷ್ಟು ವೇದಿಕೆಗಳಲ್ಲಿ ಅವರೇ ಆ ಬಗ್ಗೆ ವೇದಾಂತ ನುಡಿದಿರುವುದುಂಟು.ತನ್ನ ಸೇವಾವಧಿಯಲ್ಲೇ ಅದೆಷ್ಟೋ ಆರೋಪಕ್ಕೆ ಸಿಲುಕಿದವರಿಗೆ ಈ ಮಾತನ್ನು ಅದೆಷ್ಟೋ ಬಾರಿ ಹೇಳಿರಬಹುದೇನೋ..?ಆದರೆ ಅದೇ ಆಪಾದನೆ ತನ್ನ ವಿಷಯದಲ್ಲಾದಾಗ ಅದನ್ನು ತಮ್ಮದೇ ಬದುಕಿಗೆ ಅಳವಡಿಸಿಕೊಳ್ಳೊಲ್ಲ ಅಂದ್ರೇನು..? ಎಂದು ಅಭಿಮಾನಿಗಳು ಪ್ರಶ್ನಿಸಲಾರಂಭಿಸಿದ್ದಾರೆ.

ಅವರ ಬಗ್ಗೆ 55 ಲಕ್ಷ ಲಂಚ…78 ಎಕರೆ ಭೂ ಕಬಳಿಕೆ ಆಪಾದನೆಗಿಂತ ಇನ್ನೋ ಗಂಭೀರವಾದ ಆಪಾದನೆಗಳೇ ಬರಬಹುದು..ಅದನ್ನು ಸ್ಥಿತಪ್ರಜ್ಞರಾಗಿ ಫೇಸ್ ಮಾಡಬೇಕೇ ಹೊರತು,ಮುಜುಗರ-ಅವಮಾನವಾಗುತ್ತಿದೆ ಎಂದು ಬೇರೆ ಮಾರ್ಗಗಳಲ್ಲಿ ಅದನ್ನು ಟ್ಯಾಕಲ್ ಮಾಡೊಕ್ಕೆ..ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗುವುದು ಖಂಡಿತಾ ಸರಿಯಲ್ಲ..ಅಭಿಮಾನಿಗಳಾಗಿ ನಮಗೆ ಇನ್ನೂ ರವಿ.ಡಿ.ಚನ್ನಣ್ಣನವರ್ ಬಗ್ಗೆ ನಂಬಿಕೆ ಇದೆ..ಆ ನಂಬಿಕೆ ಸ್ವತಃ ಅವರಿಗೇ ಏಕಿಲ್ಲ..ತನಿಖೆಗೆ ಸಿದ್ಧವಿರುವುದಾಗಿ ಹೇಳಿ.ಅದನ್ನು ಫೇಸ್ ಮಾಡೋದಾಗಿ ಹೇಳಲಿ..ತನಿಖೆಯಲ್ಲೇ ಅವರ ಸತ್ಯಸಂಧತೆಯ ಅಗ್ನಿಪರೀಕ್ಷೆಯ ಫಲಿತಾಂಶ ದೊರೆಯುತ್ತದೆಯಲ್ವಾ ಎಂದು ಅಭಿಮಾನಿಗಳು ಪರಸ್ಪರ ಚರ್ಚೆ ಮಾಡಿಕೊಳ್ಳಲಾರಂಭಿಸಿದ್ದಾರೆ.

ತನ್ನ ಕುರಿತಾದ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ ತಂದಿರುವುದು, ರವಿ.ಡಿ.ಚನ್ನಣ್ಣನವರ್ ಅವರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದಂತ ಎಲ್ಲಾ ಮಾದ್ಯಮಗಳಿಗೆ ಸಿಟ್ಟು-ಬೇಸರ-ಆಕ್ರೋಶ-ಅಸಮಾಧಾನ ಮೂಡಿಸಿದೆಯಂತೆ.ಚನ್ನಣ್ಣನವರ್ ಬಗ್ಗೆ ನಮಗಿದ್ದ ಒಳ್ಳೆಯ ಅಭಿಪ್ರಾಯಕ್ಕೆ ಅವರೇ ಕಲ್ಲು ಹಾಕ್ಕೊಂಡಿದ್ದಾರೆ.ತನಿಖೆ ನಡೆಯಲಿ..ಅದಕ್ಕೆ ಸಂಪೂರ್ಣ ಬೆಂಬಲ-ಸಹಕಾರ ಇದೆ ಎನ್ನುವುದನ್ನು ಬಿಟ್ಟು ಮಾದ್ಯಮಗಳ ಮೇಲೆ ನಿಯಂತ್ರಣ ಸಾಧಿಸೊಕ್ಕೆ ಮುಂದಾಗುವಂತದ್ದು ಎಷ್ಟು ಸರಿ..ಅವರ ಪ್ರಾಮಾಣಿಕತೆ-ದಕ್ಷತೆ-ಸಾಚಾತನದ ಬಗ್ಗೆ ಈಗ ಅಪನಂಬಿಕೆ ಪಡುವಂತಾಗಿದೆ ಎಂದು ಅನೇಕ ಮಾದ್ಯಮ ಸ್ನೇಹಿತರು ಕನ್ನಡ ಫ್ಲ್ಯಾಶ್ ನ್ಯೂಸ್ ಜೊತೆ ರವಿ.ಚೆನ್ನಣ್ಣನವರ್ ಅವರ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಎಚ್.ಡಿ ಕೋಟೆಯ ಗ್ರಾಮದಲ್ಲಿ ಎಸ್ ಸಿಎಸ್ ಟಿ ಲ್ಯಾಂಡ್ ಒತ್ತುವರಿ ಮಾಡಿ ತೋಟ ನಿರ್ಮಿಸಿದ್ದಾರೆ ಎಂದು ರೈತ ಮುಖಂಡ ಎಂಡಿ ಕುಮಾರಸ್ವಾಮಿ ಎನ್ನುವವರು  ಬೆಂಗಳೂರಿನ ವಕೀಲ ಜಗದೀಶ್ ಎನ್ನುವವರ ಗಮನಕ್ಕೆ ತಂದರೆ ತನಿಖೆ ನಡೆಯಲಿ ಎಂದಿದ್ದರೆ  ರವಿ.ಚೆನ್ನಣ್ಣನವರ್ ಬಗೆಗಿನ ಅಭಿಮಾನ ಹೆಚ್ಚುತ್ತಿತ್ತೇನೋ..

ಆದರೆ ಆ ಸುದ್ದಿ ಪ್ರಸಾರ ಮಾಡಿದ ಮೈಸೂರಿನ ಮಾದ್ಯಮಕ್ಕೆ ತನ್ನನ್ನು ಚನ್ನಣ್ಣನವರ್ ಅಭಿಮಾನಿ ಎಂದು ಘೋಷಿಸಿಕೊಂಡ ವ್ಯಕ್ತಿ ಬೆದರಿಕೆ ಒಡ್ಡಿದಂತದ್ದು..ಸ್ಥಳಕ್ಕೆ ಭೇಟಿ ಕೊಟ್ಟ ವಕೀಲ ಜಗದೀಶ್ ಅಂಡ್ ಟೀಮ್ ಜತೆ ರವಿ.ಡಿ.ಚೆನ್ನಣ್ಣನವರ್ ಅವರ ಅಭಿಮಾನಿಗಳೆಂದು ಕರೆದುಕೊಂಡವರು ದೌರ್ಜನ್ಯ ಎಸಗಿದ್ದಾರೆನ್ನುವುದು ಚನ್ನಣ್ಣನವರ್ ಬಗೆಗಿನ ಗೌರವ ಸಾರ್ವಜನಿಕವಾಗಿ ಕಡಿಮೆ ಮಾಡಿರುವುದು ಸತ್ಯ.ತಮ್ಮ ಅಭಿಮಾನಿಗಳನ್ನು ಚನ್ನಣ್ಣನವರ್ ಅವರೇ  ಈ ರೀತಿ ಮಾಡೊಕ್ಕೆ ಪ್ರಚೋದಿಸಿದ್ದರೂ ತಪ್ಪು…ಇಷ್ಡೆಲ್ಲಾ ಆಗುತ್ತಿದ್ದಾಗ್ಯೂ ಹೀಗೆಲ್ಲಾ ಮಾಡಬೇಡಿ..ಕಾನೂನಿದೆ..ಅದು ಎಲ್ಲಾ ನೋಡಿಕೊಳ್ಳುತ್ತದೆ ಬಿಡಿ..ನೀವು ಸಮಾಧಾನವಾಗಿರಿ ಎಂದು ಉದ್ರಿಕ್ತ ಅಭಿಮಾನಿಗಳನ್ನು ಸಮಾಧಾನಪಡಿಸದೆ ಸುಮ್ಮನಿದ್ದರೂ ತಪ್ಪೆ.? ಅಲ್ವಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ರವಿ ಡಿ.ಚೆನ್ನಣ್ಣನವರ್ ಬಗ್ಗೆ  ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಅಪಾರವಾದ ಗೌರವವಿದೆ.ಅವರ ಸಾಧನೆ-ಸಾತ್ವಿಕತೆ ಬಗ್ಗೆ ಸಾಕಷ್ಟು ವರದಿಗಳನ್ನೂ ಮಾಡಿರೋ ಹೆಮ್ಮೆ ನಮಗಿದೆ.ಹಾಗೆಂದು ಅವರ ಬಗ್ಗೆ  ಆಪಾದನೆ ಕೇಳಿಬಂದಾಗ  “ಖಡಕ್ ಅಧಿಕಾರಿ,ಕರ್ನಾಟಕದ ಸಿಂಗಂ (INFACT ಈ ರೀತಿಯ ಪದಗಳ ಬಳಕೆ ಬಗ್ಗೆ ಸಾರ್ವಜನಿಕವಾಗಿಯೂ ಆಕ್ಷೇಪವಿದೆ)ಎಂದುಕೊಂಡು ಸುಮ್ಮನಿರೊಕ್ಕೆ ಸಾಧ್ಯವೂ ಇಲ್ಲ.ಅದು ಪತ್ರಿಕೋದ್ಯಮದ ನೈತಿಕತೆನು ಅಲ್ಲ..ಸೈದ್ದಾಂತಿಕತೆಯಂತೂ ಅಲ್ಲವೇ ಅಲ್ಲ.. ರವಿ ಡಿ ಚನ್ನಣ್ಣನವರ್ ಬಗ್ಗೆ ಕೇಳಿಬಂದಿರುವ ಸಧ್ಯದ ಆಪಾದನೆಗಳ ಬಗ್ಗೆನೂ ಕನ್ನಡ ಪ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲಲಿದೆ..ಅವರು ನಿಜವಾಗ್ಯೂ ಪ್ರಾಮಾಣಿಕ-ಸತ್ಯಸಂಧರಾಗಿದ್ದರೆ ಈ ಸತ್ವಪರೀಕ್ಷೆಯಲ್ಲಿ ಗೆದ್ದುಬರಲಿ ಎಂದೂ ಹಾರೈಸುತ್ತೇವೆ..ಅಲ್ಲಿವರೆಗೆ ಚನ್ನಣ್ಣನವರ್ ಅವರು ತಾಳ್ಮೆ-ಸಂಯಮ ಕಾಯ್ದುಕೊಳ್ಳುವುದರ ಜತೆಗೆ ತನ್ನ ಅಭಿಮಾನಿಗಳಿಗೂ ಬುದ್ದಿ ಹೇಳುವ ಕೆಲಸ ಮಾಡಲಿ ಎಂದು ಆಶಿಸುತ್ತೇವೆ.. ಅಂತಿಮವಾಗಿ ಇದೆಲ್ಲದರಲ್ಲಿ ಬಯಲಾಗೊ ಅಸಲಿಯತ್ತನ್ನೂ ಪ್ರಕಟಿಸುತ್ತೇವೆ..ಇದು ಸತ್ಯ..ಸತ್ಯ..ಇದೇ ಸತ್ಯ…

Spread the love

Related Articles

Leave a Reply

Your email address will not be published.

Back to top button
Flash News