AFTER 2 VACCINES WHAT ABOUT NEXT…? “ಮುಖ್ಯಮಂತ್ರಿ”ಗಳೇ ನೀವು ಕೊಟ್ಟಿರುವ 2 ಲಸಿಕೆಗಳೇ ರೋಗ ಪ್ರತಿರೋಧಕ ಶಕ್ತಿ ಕಳಕೊಂಡ್ರೆ ಹೇಗೆ..? ಆಲೋಚಿಸಿದ್ದೀರಾ..?

2 ಲಸಿಕೆ ಪಡೆದು 8-10 ತಿಂಗಳಾದ ನಾಗರಿಕರ ಸಮಸ್ಯೆ ಸಾಯಿದತ್ತಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಸಾಯಿದತ್ತಾ..?

0
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ

ಬೆಂಗಳೂರು:ಜನಸಾಮಾನ್ಯರೇ, ನೀವು ಕೊವಿಡ್ ಗೆ ಸಂಬಂಧಿಸಿದಂತೆ ಕೋವಿಶೀಲ್ಡ್..  ಕೊವ್ಯಾಕ್ಸಿನ್ ಎರಡೂ ಲಸಿಕೆಯನ್ನು ಪಡೆದಿದ್ದೀರಾ..? ಪಡೆದುಕೊಂಡು ಎಷ್ಟು ಅವಧಿಯಾಗಿದೆ.? ಎರಡೂ ಲಸಿಕೆಯನ್ನೂ ಪಡೆದುಕೊಂಡಾಕ್ಷಣ ನಾವು ಸೇಫ್ ಎಂದುಕೊಂಡ್ರಾ.? ಹೋಗಲಿ ಆ ಎರಡು ಲಸಿಕೆಗೆ ಇರುವ ರೋಗನಿರೋಧಕ ಶಕ್ತಿಗೆ ಇರುವ ಲೈಫ್ ಎಷ್ಟು ಅವಧಿ ಎಂದುಕೊಂಡ್ರಿ..? ಈ ಎಲ್ಲಾ ಪ್ರಶ್ನೆ ಕಾಡೊಕ್ಕೆ ಕಾರಣ ಆ ಒಂದು ಪತ್ರ…ಯೆಸ್..ಕೊವಿಡ್ ನ ಎರಡೂ ಲಸಿಕೆಗಳನ್ನು ಹಾಕಿಸಿಕೊಂಡ ಬಳಿಕವೂ ಪ್ರತಿಯೋರ್ವನನ್ನು  ತಾನೆಷ್ಟು ಸೇಫ್ ಎಂದು ಪ್ರಶ್ನಿಸಿಕೊಳ್ಳೊಕ್ಕೆ ಕಾರಣವಾಗಿದೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅವರು ಬರೆದಿರುವ ಪತ್ರ..

ನೀವು ಪುರುಸೊತ್ತಿದ್ದರೆ ಗೂಗಲ್ ಗೆ ಹೋಗಿ ಕೊವಾಕ್ಸಿನ್-ಕೋವಿಶೀಲ್ಡ್ ಲಸಿಕೆಯ ರೋಗನಿರೋಧಕ ಶಕ್ತಿ ಎಷ್ಟು ದಿನ ಎಂದು ಸರ್ಚ್ ಮಾಡಿ ನೋಡಿ..ಅದು ಎಷ್ಟು ಅಂಥಾ ತೋರಿಸುತ್ತೆ ಎನ್ನೋದನ್ನು ನೀವೇ ನೋಡಿ…ಇದು ಲಸಿಕೆ ಪಡೆದ ಎಂಥವರನ್ನೂ ಆತಂಕಕ್ಕೀಡುಮಾಡುತ್ತದೆ.ಏಕೆಂದರೆ ಲಸಿಕೆ ಪಡೆದವರಲ್ಲಿ ಲಸಿಕೆಯ ರೋಗನಿರೋಧಕ ಶಕ್ತಿ ಹೆಚ್ಚೆಂದರೆ 6 ತಿಂಗಳು ಅಷ್ಟೇ ಅಂತೆ..ಎರಡು ಲಸಿಕೆ ಪಡೆದು ಆರು ತಿಂಗಳು ಕಳೆದವರ ಕಥೆ ಏನಾಗಬೇಕು ನೀವೇ ಹೇಳಿ..ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ನಮ್ಮ ಘನ ಸರ್ಕಾರವೇ ನಿರ್ಲಕ್ಷ್ಯ ವಹಿಸಿರುವುದು ಯಾವ ನ್ಯಾಯ ಹೇಳಿ..

ದಿನೇ ದಿನೇ ಸುನಾಮಿಯಂತೆ ಅಪ್ಪಳಿಸಲಾರಂಭಿಸಿರುವ ಕೊರೊನಾ ಸೋಂಕಿನ ಪ್ರಕರಣಗಳು ಎಲ್ಲೋ ಒಂದೆಡೆ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ಅಪಾಯವಿಲ್ಲ..ಇದೊಂದು ಸಾಮಾನ್ಯ ಕೆಮ್ಮಿನ ಲಕ್ಷಣವುಳ್ಳ ಸಮಸ್ಯೆ..ಜೀವಕ್ಕಂತೂ ತೊಂದರೆಯೇ ಇಲ್ಲ ಎಂದು ಡಾ.ಅಂಜನಪ್ಪ ಅವರಂಥ ನುರಿತ ವೈದ್ಯರ ಮಾತುಗಳೂ ಆತಂಕದಲ್ಲಿರುವ ಜನರಿಗೆ ಸಮಾಧಾನ ತರುತ್ತಿಲ್ಲ..ಇದೆಲ್ಲದರ ನಡುವೆ ಆ ಒಂದು ಸಂಗತಿ ಪ್ರತಿಯೋರ್ವ ಭಾರತೀಯನನ್ನೂ ಆತಂಕಕ್ಕೆ ಅಷ್ಟೇ ಅಲ್ಲ,ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತಿದೆ.ಆದ್ರೆ ದುರಂತ ನೋಡಿ, ರಾಜ್ಯದ ಸಿಎಂ ಎನಿಸಿಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂಗತಿ ಗಂಭೀರ ಎನಿಸಿಯೇ ಇಲ್ಲ..ಇದು ವಿಷಾದನೀಯ ಅಷ್ಟೇ ಅಲ್ಲ ವಿಪರ್ಯಾಸ ಕೂಡ.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ರಾಜ್ಯ ಸರ್ಕಾರಕ್ಕೆ 21-10-2021 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರ
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ರಾಜ್ಯ ಸರ್ಕಾರಕ್ಕೆ 21-10-2021 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರ

ಲಸಿಕೆಯನ್ನು ಜನರಿಗೆ ಹಾಕಿಸೊಕ್ಕೆ ಶುರು ಮಾಡಿ ಹತ್ತಿರತ್ತಿರ ವರ್ಷವೇ ಕಳೆದೋಗುತ್ತಿದೆ. ಎರಡೂ ಲಸಿಕೆಯನ್ನೂ ಹಾಕಿಸಿದವರ ಪ್ರಮಾಣ ಶೇಕಡಾ 50ಕ್ಕಿಂತ ಹೆಚ್ಚಿದೆ.ಅದು ಸಮಾಧಾನಕರ ಸಂಗತಿ ಎನ್ನೋದು ಎಷ್ಟು ಸಮಾಧಾನದ ವಿಚಾರವೋ 6 ತಿಂಗಳಿಗಿಂತ ಹಿಂದೆಯೇ ಎರಡು ಲಸಿಕೆ ಹಾಕಿಸಿಕೊಂಡವರಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತಿದೆ..ಮುಂದ್ಹೇನು ಎನ್ನುವ ಪ್ರಶ್ನೆ ಕಾಡುತ್ತಿರುವುದು ಕೂಡ ಅಷ್ಟೇ ಗಂಭೀರವಾದ ಸಂಗತಿ.

ಇದು ಒಮ್ಮೆ ಆಲೋಚಿಸಿ ಸುಮ್ಮನಾಗುವ ಸಂಗತಿಯಲ್ಲ..ಲಸಿಕೆ ಕೊಡುವಾಗ ನಮ್ಮ ಸರ್ಕಾರಗಳು ಹಾಗೂ ಆರೋಗ್ಯ ಇಲಾಖೆ ಲಸಿಕೆಗಳಲ್ಲಿರುವ ರೋಗನಿರೋಧಕ ಶಕ್ತಿಯ ಅವಧಿ ಬಗ್ಗೆ ಸ್ಪಷ್ಟವಾಗಿ ಹೇಳಿಯೇ ಇಲ್ಲ..ಕೇಳಿದವರಿಗೆ 6 ತಿಂಗಳವರೆಗೂ ಭಯವಿಲ್ಲ..ಅಷ್ಟರೊಳಗೆ ಇನ್ನೊಂದು ಲಸಿಕೆ ಅನ್ವೇಷಣೆಯಾಗುತ್ತೆ..ಅದನ್ನು ನೀಡುತ್ತೇವೆ ಎಂದ್ಹೇಳಿ ಸಮಾಧಾನಪಡಿಸಿತ್ತು.ಆದರೆ  ಸರ್ಕಾರದ ಮಾತು ಕೇಳಿಕೊಂಡು 6 ತಿಂಗಳವರೆಗು ಸಮಾಧಾನದಿಂದಿದ್ದ ನಾಗರಿಕರಿಗೆ ಈಗ ಆತಂಕ ಶುರುವಾಗಿದೆ.ಲಸಿಕೆ ಹಾಕಿಸಿಕೊಂಡು 6 ತಿಂಗಳು ಕಳೆದೋಗಿದೆ.ಸರ್ಕಾರ-ಆರೋಗ್ಯ ಇಲಾಖೆ ಹೇಳಿದ್ದಂತ ಲಸಿಕೆಯ ರೋಗನಿರೋಧಕ ಶಕ್ತಿಯ ಅವಧಿಯೂ ಮೀರಿ ಹೋಗಿದೆ..ಮುಂcialದ್ಹೇನು..? ಕೊರೊನಾ ಅಪ್ಪಳಿಸಿದರೆ ಏನ್ ಮಾಡೋದು..ದೇಹದಲ್ಲಿ ರೋಗನಿರೋಧಕ ಶಕ್ತಿಯೇ ಇಲ್ಲದಿದ್ದ ಮೇಲೆ ಹೇಗೆ ಕೊರೊನಾ ವಿರುದ್ದ ಹೋರಾಡಬೇಕು..ನಮ್ಮನ್ನು ಕಾಪಾಡುವವರು ಯಾರು..? ಎಂದು ಜನ ಪ್ರಶ್ನಿಸೊಕ್ಕೆ ಆರಂಭಿಸುವ ಸನ್ನಿವೇಶ ನಿರ್ಮಾಣವಾಗಿದೆ.

ಈ ಎಲ್ಲಾ ಸಂಗತಿಗಳನ್ನು ಗಮನಿಸಿಯೇ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ರಾಜ್ಯ ಸರ್ಕಾರಕ್ಕೆ 21-10-2021 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಲಸಿಕೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು.ಕೊರೊನಾ ವೈರಸ್ ಪ್ರತಿರೋಧಕ ಶಕ್ತಿಯನ್ನು ಒಳಗೊಂಡ ಇಂಜೆಕ್ಷನ್ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.

ಏಳರಿಂದ ಹೆಚ್ಚೆಂದರೆ ಎಂಟು ತಿಂಗಳವರೆಗಷ್ಟೇ ಕೊವಿಡ್ ಲಸಿಕೆಯಲ್ಲಿ ರೋಗನಿರೋಧಕ ಶಕ್ತಿ ಇರುತ್ತೆ ಎಂದು ಹೇಳಿದ್ದ ಸರ್ಕಾರ ಲಸಿಕೆ ಪಡೆದು ಎಂಟು ತಿಂಗಳಿಗಿಂತ ಹೆಚ್ಚಾದವರ ವಿಷಯದಲ್ಲಿ ಏನ್ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದರು.ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೆ ಕ್ರಮ ಕೈಗೊಳ್ಳಿ..ಕೊರೊನಾ ಇನ್ನೆಷ್ಟು ಅಲೆಗಳ ರೂಪದಲ್ಲಿ ಅಪ್ಪಳಿಸಲಿದೆಯೋ..? ಎಷ್ಟು ಜನರಿಗೆ ಮಾರಕವಾಗಲಿದೆಯೋ..? ಎಂದು ಪ್ರಶ್ನಿಸಿದ್ದ ಅವರು, ಪ್ರತಿರೋಧಕ ಶಕ್ತಿಯನ್ನು ಕಳಕೊಂಡಿರುವವರ ಪ್ರಮಾಣ ಅದೆಷ್ಟೋ ಸಾವಿರಗಳಷ್ಟಿದೆ.ಅವರಲ್ಲಿ ಮತ್ತೆ ಸಾಕಷ್ಟು ಜನರಿಗೆ ಕೊರೊನಾ ವಕ್ಕರಿಸಿದೆ..ಇನ್ನಷ್ಟು ಜನರಿಗೂ ವಕ್ಕರಿಸಬಹುದು..ಆಗ ಸಂಭವಿಸಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ನಮ್ಮ ತೆರಿಗೆಯಲ್ಲಿ ಸರ್ಕಾರ ನಡೆಸುವ ಸರ್ಕಾರಗಳು ಜನರ ಬಗ್ಗೆ ಎಷ್ಟು ಸಂವೇದನಾರಹಿತವಾಗಿದೆ ಎನ್ನುವುದಕ್ಕೆ ಸಾಯಿದತ್ತಾ ಪತ್ರ ಬರೆದು ಹತ್ತಿರತ್ತಿರ ನಾಲ್ಕು ತಿಂಗಳೇ ಕಳೆಯುತ್ತಿದ್ದರೂ ಸಿಎಂ ಇವರ ಪತ್ರಕ್ಕೆ ಪ್ರತಿಕ್ರಿಯಿಸೋ ಮಾತು ಹಾಳಾಗಿ ಹೋಗಲಿ,ಈ ಬಗ್ಗೆ ಕ್ರಮ ಕೈಗೊಳ್ಳಲು ಏನೆಲ್ಲಾ ಮಾಡಬೇಕೋ ಅದರ ಬಗ್ಗೆ ಗಮನ ಹರಿಸಿ ಎಂದೂ ಹೇಳಿಲ್ಲ..ಸರ್ಕಾರದ ಬಳಿ ಈಗಲೂ ಇದಕ್ಕೆ ಸ್ಪಷ್ಟ ಉತ್ತರವಿಲ್ಲ..

ಈ ಬಗ್ಗೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಬಳಿಯೂ ಇದರ ಉತ್ತರವಿಲ್ಲ..ನಮಗೆ ಐಸಿಎಂಆರ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯೇ ಅಂತಿಮ ಹಾಗೂ ನಿರ್ಣಾಯಕ.ಲಸಿಕೆಯ ಪ್ರತಿರೋಧಕ ಶಕ್ತಿಯ ಅವಧಿ ಬಗ್ಗೆ ಈವರೆಗೂ ಅವರೆಡರಿಂದಲೂ ನಮಗೆ ನಿರ್ದೇಶನ ಸಿಕ್ಕಿಲ್ಲ..ಹಾಗಾಗಿ ಇಂತಿಷ್ಟೇ ಅವಧಿ ಎನ್ನಲಿಕ್ಕಾಗೊಲ್ಲ ಎಂದ್ಹೇಳುವ ಮೂಲಕ ಜನರನ್ನು ಮತ್ತಷ್ಟು ಗೊಂದಲ ಹಾಗೂ ಆತಂಕ್ಕೀಡು ಮಾಡಿದ್ದಾರೆ.

ಕೊವಾಕ್ಸಿನ್-ಕೊವಿಶೀಲ್ಡ್ ಎನ್ನುವಂತ ಲಸಿಕೆ ಎರಡನ್ನೂ ಪಡೆದವರಿಗೆ ಸಧ್ಯಕ್ಕೆ ಪರ್ಯಾಯವಾಗಿರುವುದು ಬೂಸ್ಟರ್ ಡೋಸ್ ಮಾತ್ರ..ಆದ್ರೆ ಅದು ಇನ್ನು ಸಾರ್ವಜನಿಕವಾಗಿ ಲೋಕಾರ್ಪಣೆಯಾಗಿಲ್ಲ..ಹೀಗಿರುವಾಗ ಎರಡು ಲಸಿಕೆ ಪಡೆದು..ಅದರ ಅವಧಿ 6-8 ತಿಂಗಳು ಕಳೆದವರ ಮನಸ್ಥಿತಿ ಹೇಗಿರಬೇಕು..ಸರ್ಕಾರವಾಗಲಿ,ಆರೋಗ್ಯ ಇಲಾಖೆಯಾಗಲಿ,ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಘನತವೆತ್ತ ಮುಖ್ಯಮಂತ್ರಿಗಳಾಗಲಿ ಇದರ ಬಗ್ಗೆ ಆಲೋಚಿಸಿದ್ದಾರಾ..? ಖಂಡಿತಾ ಇಲ್ಲ..ಜನಸಾಮಾನ್ಯರು ಇದಕ್ಕೆ ತುತ್ತಾಗಿ ಜೀವ ಕಳೆದುಕೊಂಡ್ರೂ ಸರ್ಕಾರಗಳು ತಲೆ ಕೆಡಿಸಿಕೊಳ್ಳದ ಸ್ಥಿತಿ ನೋಡಿದ್ದೇವೆ..ಬಹುಷಃ ರಾಜಕಾರಣಿಗಳಿಗೆ ಅಂತದ್ದೊಂದು ಸಮಸ್ಯೆಯಾಗಿ ಅವರಾಗಲಿ,ಅವರ ಕುಟುಂಬದವರಾಗಲಿ ಇಂಥಾ ಸ್ತಿತಿಗೆ ಬಲಿಯಾದಲ್ಲಿ ಮಾತ್ರ ಸಾಯಿದತ್ತಾ ಅವರು ಕೇಳುತ್ತಿರುವ ಪ್ರಶ್ನೆಯ ಗಂಭೀರತೆ ಹಾಗು ಸೂಕ್ಷ್ಮ ಅರ್ಥವಾಗಬಹುದು ಎನಿಸುತ್ತೆ..ಎಂಥಾ ಸರ್ಕಾರವೋ..ಅದೆಂಥಾ ವ್ಯವಸ್ಥೆಯಲ್ಲಿ ನಾವಿದ್ದೇವೋ..ಕೆಲವೊಮ್ಮೆ ಅರ್ಥವಾಗೋದೆ ಇಲ್ಲ..

Spread the love
Leave A Reply

Your email address will not be published.

Flash News