CONTROVERSIAL CIRCULAR BY KSRTC REGARDIND “LUGGEGE…?! “ನಿಮ್ ಲಗೇಜ್ ಗೆ ನೀವೇ ಜವಾಬ್ದಾರರಲ್ಲ..”ಪ್ರಯಾಣಿಕರ ಲಗೇಜ್” ಗೆ “ಕಂಡಕ್ಟರ್ಸ್ ಗಳೇ ಹೊಣೆ” ಯಂತೆ..? ಸಾರಿಗೆ ನಿಗಮಗಳಿಂದ ಮತ್ತೊಂದು “ವಿವಾದಾ”ತ್ಮಕ ಸುತ್ತೋಲೆ..?!

ಸಚಿವ ಶ್ರೀರಾಮುಲು ಅವ್ರೇ ದಯವಿಟ್ಟು ಗಮನಿಸಿ ಪ್ಲೀಸ್…ಕಂಡಕ್ಟರ್ಸ್ ಗಳಿಗೆ ಇನ್ಮುಂದೆ ಟಿಕೆಟ್ ಇಶ್ಯೂ ಮಾಡೋದಷ್ಟೇ ಅಲ್ಲ ಕೆಲಸ..,ರಾತ್ರಿಯೆಲ್ಲಾ ಲಗೇಜನ್ನೂ ಕಾಯಬೇಕು..?!

0

ಬೆಂಗಳೂರು:ಇದೊಂದ್ ಬಾಕಿ ಇತ್ತು..ನೋಡಿ..ನಮ್ಮ ಸಾರಿಗೆ ಕಾರ್ಮಿಕರು ಮಾಡೊಕ್ಕೆ..ಕೆಮ್ಮಿದರೂ ತಪ್ಪು..ಜೋರಾಗಿ ಮಾತನಾಡಿದ್ರೂ ತಪ್ಪು..ಅಧಿಕಾರಿಗಳ ಎದುರು ತಲೆ ಎತ್ತಿಕೊಂಡು ಅಡ್ಡಾಡಿದ್ರೂ ತಪ್ಪು..ಎನ್ನುವಂತೆ ಕೆಲಸ ಮಾಡುವ ಪ್ರತಿ ವೇಳೆಯಲ್ಲೂ ಪ್ರತಿಯೊಂದರಲ್ಲೂ ಕಾರ್ಮಿಕರ ತಪ್ಪು ಕಂಡುಹಿಡಿಯೋದೇ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಕ್ಯಾಮೆ ಎನ್ನುವಂತಾಗಿದೆ.ಈಗ ನೀಡಿರುವ ಜವಾಬ್ದಾರಿಗಳನ್ನೇ ನಿಭಾಯಿಸೊಕ್ಕೆ ಹೆಣಗಾಡುತ್ತಿರುವ ಸಾರಿಗೆ ಕಾರ್ಮಿಕರಿಗೆ ಮತ್ತೊಂದು ಹೊಸ ತಲೆಬೇನೆಯನ್ನು ಆಡಳಿತ ಮಂಡಳಿ ನೀಡಿದೆ..ಅದೇ ನಿಮ್ಮ ಲಗೇಜುಗಳಿಗೆ ನೀವೇ ಜವಾಬ್ದಾರರು ಎನ್ನುತ್ತಿದ್ದ ಸಾರಿಗೆ ನಿಗಮ ಇದೀಗ ಪ್ರಯಾಣಿಕರ ಲಗೇಜ್ ಗೂ ಕಂಡಕ್ಟರ್ಸ್ ಕಾರಣ ಎಂದ್ಹೇಳುತ್ತಿದೆ.ಇದು ಸಾರಿಗೆ ಕಾರ್ಮಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 06-01-2022 ಕ್ಕೆ ಕರ್ನಾಟಕ ರಾಜ್ಯ ರಸ್ತೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರ ಕಚೇರಿಯಿಂದ ಹೊರಟಿರುವ ಆದೇಶ ಈಗಾಗಲೇ ಅನೇಕ ಜವಾಬ್ದಾರಿಗಳಿಂದ ಹೈರಾಣವಾಗಿರುವ ಚಾಲಕರು/ನಿರ್ವಾಹಕರನ್ನು ಕೆಂಡಾಮಂಡಲಗೊಳಿಸಿದೆ.ಸುತ್ತೋಲೆಯಲ್ಲಿರುವ ನಾಲ್ಕು ಪ್ರಮುಖ ಅಂಶಗಳು ಕೆಳಕಂಡಂತಿವೆ.

1-ರಾತ್ರಿ ಪ್ರಯಾಣದ ವೇಳೆಯಲ್ಲಿ ನಿರ್ವಾಹಕರು ತಾವು ಕರ್ತವ್ಯ ನಿರ್ವಹಿಸುವ ಬಸ್ ಗಳಲ್ಲಿ ಪ್ರಯಾಣಿಕರ ಲಗೇಜ್ ಬಗ್ಗೆ ಕಾಳಜಿ ವಹಿಸಬೇಕು.

2-ರಾತ್ರಿ ವೇಳೆಯಲ್ಲಿ ಪ್ರಯಾಣಿಕರಿಗೆ ಅವರ ಬೆಲೆಬಾಳುವ ವಸ್ತುಗಳ ಬಗ್ಗೆ ಮೈಮರೆಯದಂತೆ ಎಚ್ಚರ ವಹಿಸುವಂತೆ ಆಗಾಗ ಅನೌನ್ಸ್ ಮಾಡುತ್ತಿರಬೇಕು.

3-ನಿರ್ವಾಹಕರು ಟಿಕೆಟ್ ಕೊಟ್ಟಾಕ್ಷಣ ತಮ್ಮ ಜವಾಬ್ದಾರಿ ಮುಗಿಯಿತೆಂದುಕೊಂಡು ವಿಶ್ರಾಂತಿಗೆ ಜಾರುವುದರಿಂದ ಲಗೇಜ್ ಮೇಲೆ ಕಾಳಜಿ ವಹಿಸದಂತಾಗುತ್ತದೆ.ಹಾಗಾಗಿ ವಿಶ್ರಾಂತಿಗೆ ವಿರಾಮ ಕೊಟ್ಟು ಎಚ್ಚರದಿಂದ ಕೆಲಸ ನಿರ್ವಹಿಸಬೇಕು.

4-ನಿರ್ದಿಷ್ಟ ನಿಲ್ದಾಣಗಳಿಗಿಂತ ಮುನ್ನವೇ ಬಸ್ ಗಳಿಂದ ಇಳಿದು ಹೋಗುವ ಪ್ರಯಾಣಿಕರು ಕೊಂಡೊಯ್ಯುವ ಲಗೇಜ್ ಗಳ ಬಗ್ಗೆಯೂ ಗಮನ ಇರಿಸಬೇಕು..

ಹೀಗೆ ನಾಲ್ಕು ಅಂಶಗಳೂ ಇನ್ಮುಂದೆ ಲಗೇಜ್ ಗಳಿಗೆ ಪ್ರಯಾಣಿಕರಲ್ಲ ಹೊಣೆ,ಕಂಡಕ್ಟರ್ಸ್ ಗಳು ಎನ್ನುವುದನ್ನು ಸಾರಿ ಹೇಳುತ್ತಿದೆ.ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನೋದು ಸಾರಿಗೆ ಕಾರ್ಮಿಕರ ಪ್ರಶ್ನೆ.

ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರ ಲ್ಯಾಪ್ ಟಾಪ್,ವೈಯುಕ್ತಿಕ ಬ್ಯಾಗ್,ಕಿಟ್ ..ಈ ರೀತಿ ಅಮೂಲ್ಯವಾದ ವಸ್ತುಗಳು ಕಾಣೆಯಾಗುತ್ತಿರುವ ಹಿನ್ನಲೆಯಲ್ಲಿ ಇಂತದ್ದೊಂದು ನಿರ್ದಾರ ಕೈಗೊಳ್ಳುತ್ತಿರುವುದಾಗಿಯೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಪ್ರಯಾಣಿಕರು ವಸ್ತುಗಳನ್ನು ಕಳೆದುಕೊಂಡರೆ ಅದರಲ್ಲಿ ನಿರ್ವಾಹಕರ ತಪ್ಪೇನಿದೆ.ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದಿದ್ದರೆ ಅದನ್ನು ಬೇಕಾದರೆ ಪ್ರಶ್ನಿಸಲಿ,ಅದನ್ನು ಬಿಟ್ಟು ಪ್ರಯಾಣಿಕರ ಲಗೇಜ್ ಗಳನ್ನೇ ಕಾಯುತ್ತಾ ಕೂರಲಿಕ್ಕೆ ಆಗುತ್ತಾ..? ನಮ್ಮನ್ನು ನಿರಂತರವಾಗಿ ಶೋಷಿಸುತ್ತಾ ಬಂದಿರುವ ಆಡಳಿತ ವರ್ಗದ ಮತ್ತೊಂದು ಕ್ರೌರ್ಯವೇ ಈ ಲಗೇಜ್ ಹೊಣೆಗಾರಿಕೆ ಎನ್ನೋದು ನೊಂದ ಕಂಡಕ್ಟರ್ಸ್ ಗಳ ಆಕ್ರೋಶ.

ಇದೆಂಥಾ ಆದೇಶವೋ..ಗೊತ್ತಾಗುತ್ತಿಲ್ಲ..ನಿಯಮಗಳನ್ನು ರೂಪಿಸುವ ಅಧಿಕಾರಿಗಳಿಗೆ ಸ್ವಲ್ಪನಾದದ್ರೂ  ತಲೆ ಬೇಡ್ವಾ..ಹೋಗ್ಲಿ ನಾಚಿಕೆ ಮಾನ ಮರ್ಯಾದೆ ಇಲ್ವಾ..ಅದೆಲ್ಲ ಬಿಡ್ರಿ ಒಂದು ಕಾಮನ್ ಸೆನ್ಸ್ ಕೂಡ ಬೇಡ್ವಾ..ನಾವು ಮಲಗಿರುವ ಪ್ರಯಾಣಿಕರ ಲಗೇಜ್ ಗಳನ್ನು ಆಗಾಗ ಹೋಗಿ ಚೆಕ್ ಮಾಡುದ್ರೆ ಪ್ರಯಾಣಿಕರೇ ಕೆರೆದಲ್ಲಿ ಹೊಡೆಯೊಲ್ವೇ..ಅವರಿಂದ ಕೆಟ್ಟ ಕೊಳಕಾ ಬೈಗುಳ ತಿನ್ನೋದಿಲ್ವೇ..ಅಲ್ಲದೇ ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಖಾಸಗಿ ಸ್ವಾತಂತ್ರ್ಯಕ್ಕೆ ನಾವು ಧಕ್ಕೆ ಮಾಡಿದಂತಾಗುವುದಿಲ್ಲವೇ..ಒಂದ್ವೇಳೆ ಹಾಗೇನಾದ್ರೂ ಹೋಗಿ ಚೆಕ್ ಮಾಡಲಾರಂಭಿಸಿದ್ರೆ ನಮ್ ಲಗೇಜ್ ಗಳನ್ನು ಇವ್ರೇ ಕದಿಯೊಕ್ಕೆ ಬಂದಿದ್ದಾರೆ ಎಂದು ಪುಕಾರು ಎಬ್ಬಿಸುವುದಿಲ್ವೇ.. ನಿಯಮ ರೂಪಿಸುವವರಿಗೆ ಈ ಎಲ್ಲಾ ಕಾಮನ್ ಸೆನ್ಸ್ ಗೊತ್ತಾಗಲಿಲ್ವೇ ಎಂದು ಸಾರಿಗೆ ಕಾರ್ಮಿಕರು ಪ್ರಶ್ನಿಸಿದ್ದಾರೆ.

ಪ್ರಯಾಣಿಕರ ಹಿತ ಕಾಯೊಕ್ಕೆ ನೀಡುವಷ್ಟು ಆಧ್ಯತೆಯನ್ನು ನಿಯಮಗಳನ್ನು ರೂಪಿಸುವ ಮಂದಿ ನಮ್  ಸಿಬ್ಬಂದಿಗೆ ಇದರಿಂದ ಆಗಬಹುದಾದ ಕಿರಿಕಿರಿ..ಶೋಷಣೆ-ಮುಜುಗರದ ಬಗ್ಗೆ ಕೊಂಚನಾದ್ರೂ ಯೋಚಿಸ ಲಿಲ್ಲವಲ್ಲ ಎನ್ನುವ ಸಾರಿಗೆ ಕಾರ್ಮಿಕರ ಯೂನಿಯನ್ಸ್ ಗಳು ಇದೆಲ್ಲಾ ಆಗೋದಲ್ಲ.. ಹೋಗೋದಲ್ಲ.. ಇಂಥದ್ದೇನಾದ್ರೂ ರೂಲ್ಸ್ ಇಂಪ್ಲಿಮೆಂಟ್ ಮಾಡಿದ್ರೆ  ಅಮಾಯಕ ನಿರ್ವಾಹಕರ ಮೇಲೆ ವಿನಾಕಾರಣ ಮತ್ತಷ್ಟು ಸುಳ್ಳು ಕೇಸ್ ಗಳು ಲಾಡ್ಜ್ ಆಗೋದಂತೂ ಗ್ಯಾರಂಟಿ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಸುಧಾರಣೆ ಮಾಡೊಕ್ಕೆ ಸಾಕಷ್ಟು ವಿಷಯಗಳಿವೆ.,ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿರುವ ನಮ್ಮ ಆಡಳಿತ ಮಂಡಳಿ ಯಾರೋ ತಲೆ ಮಾಸಿದವರು ಕೊಡುವ ಐಡ್ಯಾಗಳನ್ನೇ ಅದರ ಸಾಧಕಬಾಧಕ ಗಮನಿಸದೆ ಇಂಪ್ಲಿಮೆಂಟ್ ಮಾಡೊಕ್ಕೆ ಹೊರಟಿದೆ.ಇದರಿಂದ ಪ್ರಯಾಣಿಕರಿಗೆ ಎಷ್ಟರ ,ಮಟ್ಟಿಗೆ ಅನುಕೂಲವಾಗುತ್ತೋ ಗೊತ್ತಿಲ್ಲ,ಆದ್ರೆ ಚಾಲಕರಿಗೆ ಸಾಕಷ್ಟು ತೊಂದರೆಯಾಗೋದು ಗ್ಯಾರಂಟಿ ಎನ್ನುವುದುಹೆಸರು ಹೇಳಲಿಚ್ಚಿಸದ ಅಧಿಕಾರಿಗಳ ಆಕ್ರೋಶ.

ಈ ಬಗ್ಗೆ ಸ್ಪಷ್ಟೀಕರಣ ಕೇಳೊಕ್ಕೆ ಕೆಎಸ್ ಆರ್ ಟಿಸಿ ನಿಗಮಗಳಿಗೆ ಕರೆ ಮಾಡಿದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ..ಏನೇ ಆಗಲಿ, ಈಗಾಗಲೇ  ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ಸಾರಿಗೆ ನಿಗಮಗಳ ಕಾರ್ಮಿಕರ ಪಾಲಿಗೆ, “ಪ್ರಯಾಣಿಕರ ಲಗೇಜ್ ಗೆ ನಿರ್ವಾಹಕರೇ ಹೊಣೆ” ಎಂಬ ಫರ್ಮಾನ್ ಹೊರಡಿಸಿರುವುದು ಮರಣಶಾಸನವಾಗುವುದಂತೂ ಗ್ಯಾರಂಟಿ.

2690 ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ..ಅವರ ಕುಟುಂಬಗಳ ಸ್ಥಿತಿ ಏನಾಗಿದೆ..ಅವರ ಮುಂದಿನ ಪಾಡೇನು.,? ಅವರುಗಳ ಮರುನಿಯೋಜನೆಗೆ ಏನ್ ಮಾಡಬೇಕೆನ್ನುವುದರ ಬಗ್ಗೆತಲೆ ಕೆಡಿಸಿಕೊಳ್ಳಬೇಕಿರುವ ಆಡಳಿತ ಮಂಡಳಿ ತಲೆ ಬುಡವಿಲ್ಲದ ಸುತ್ತೋಲೆಗಳನ್ನು ಜಾರಿಗೊಳಿಸುವುದು ಎಷ್ಟು ಸೂಕ್ತ..ತಮ್ಮ ಮನೆಯ  ಸದಸ್ಯರನ್ನೇ  ಅನುಮಾನದ ದೃಷ್ಟಿಯಲ್ಲಿ ಕಾಣುವ,ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತದ್ದು ಯಾವ ನ್ಯಾಯ.? ಎನ್ನುವ ಪ್ರಶ್ನೆ ಸುತ್ತೋಲೆಯ ಸಾಧಕ ಬಾಧಕಗಳ ಬಗ್ಗೆ ಆಲೋಚಿಸಿದಾಗ ಸುಳಿಯೋದು ಸಹಜ..

Spread the love
Leave A Reply

Your email address will not be published.

Flash News