POLICE “CRUEL”ITY ON COMPLAINTEE..?! “ನ್ಯಾಯ” ಕೇಳಲು ಠಾಣೆಗೆ ಹೋದ “ದೂರು”ದಾರರ ಮೇಲೆಯೇ “ಪೊಲೀಸ್” ದೌರ್ಜನ್ಯ..?! ಹೆಣ್ಣೂರು ಠಾಣೆ ಇನ್ಸ್ ಪೆಕ್ಟರ್ ವಸಂತಕುಮಾರ್ ವಿರುದ್ಧ ಗಂಭೀರ ಆರೋಪ..!?
ಕಮಲ್ ಪಂತ್ ಮರ್ಯಾದೆ ಹರಾಜಾಕುತ್ತಿರುವ ಭ್ರಷ್ಟ ಪೊಲೀಸ್ ಕಾಸಿಗೆ ಹರಾಜಾಗುತ್ತಿದೆ ಪೊಲೀಸ್ ಇಲಾಖೆಯ ಘನತೆ-ಪ್ರತಿಷ್ಟೆ:ಪೊಲೀಸ್ರೇ ದರ್ಪ ಬಿಡಿ..ನೀಯತ್ತಿಂದ ಕೆಲಸ ಮಾಡಿ...
ಬೆಂಗಳೂರು:ಮನೆ ಯಜಮಾನ ಸರಿಯಿದ್ದಿದ್ದರೆ ಮನೆ ಮಂದಿ ದಾರಿ ತಪ್ಪೊಲ್ಲ ಎನ್ನುವ ಗಾಧೆ ಮಾತು, ಪೊಲೀಸ್ ಕಮಿಷನರ್ ಕಮಲಪಂತ್ ಅವರ ಧೋರಣೆಗೆ ಅನ್ವಯವಾಗುವಂತೆ ಕಾಣುತ್ತಿದೆ.ಮೂಲತಃ ಸಾಫ್ಟ್ ನೇಚರ್ ಅಧಿಕಾರಿಯಾಗಿರುವ ಪಂತ್ ಸಾಹೇಬರ ಒಳ್ಳೇತನ-ಮೌನವನ್ನೇ ಕೆಲವರು ಅವರ ದೌರ್ಬಲ್ಯ ಎಂದುಕೊಂಡಂತೆ ಕಾಣುತ್ತಿದೆ.ಹಾಗಾಗಿನೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪೊಲೀಸ್ ಅಧಿಕಾರಿ-ಸಿಬ್ಬಂದಿಯಿಂದ ಇಲಾಖೆ ಮಾನಮರ್ಯಾದೆ ಕಳೆದುಕೊಳ್ಳುವಂಥ ದುಸ್ಥಿತಿಗೆ ತಲುಪಿದೆ.
ಪೊಲೀಸ್ ಕಮಿಷನರ್ ಕಮಲ್ ಪಂತ್ ಸಾಹೇಬರು ತಮ್ಮ ಮೌನಧಾರಣೆ ಬಿಡದಿದ್ದರೆ ಇಲಾಖೆಯ ಮಾನ-ಮರ್ಯಾದೆಯನ್ನು ಕೆಲವು ಭ್ರಷ್ಟರು-ಕಳಂಕಿತರು ಕಾಸಿಗೆನ್ನುವಂತೆ ಹರಾಜಾಕುವುದರಲ್ಲಿ ಅನುಮಾನವೇ ಇಲ್ಲ..ಸಾಕಷ್ಟು ಅಧಿಕಾರಿಗಳಿಂದ ಇಲಾಖೆ ಸಾರ್ವಜನಿಕವಾಗಿ ತಲೆ ತಗ್ಗಿಸುವಂತಾಗಿದೆ.ಕಾನೂನು ಸುವ್ಯವಸ್ಥೆಯನ್ನು ನೀವೇನ್ ಕಾಯ್ತೀರಿ..ಮೊದಲು ನಿಮ್ ಇಲಾಖೆಯಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ ಎಂದು ಜನರೇ ಬುದ್ದಿ ಹೇಳುವಂತಾಗಿದೆ.
ಈ ಮಾತು ಹೇಳೊಕ್ಕೆ ಕಾರಣ,ಹೆಣ್ಣೂರು ಠಾಣೆ ಇನ್ಸ್ ಪೆಕ್ಟರ್ ವಿರುದ್ಧ ಕೇಳಿಬಂದಿರುವ ಆಪಾದನೆ. ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಗಲಾಟೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಂಪ್ಲೆಂಟ್ ಕೊಡೊಕ್ಕೆ ಹೋದವರ ಪರ ನಿಲ್ಲದೆ ಆರೋಪಿತರ ಪರ ವಕಾಲತ್ತು ವಹಿಸಿದ್ದಷ್ಟೇ ಅಲ್ಲ,ದೂರು ಕೊಟ್ಟವರನ್ನೇ ಶೋಷಣೆಗೆ ಈಡುಮಾಡಿದರೆನ್ನುವ ಆರೋಪಕ್ಕೆ ಗುರಿಯಾಗಿದ್ದಾರೆ.
ವಿವಾದಾತ್ಮಕ ಪ್ರಾಪರ್ಟಿ ವಿಚಾರವಾಗಿ ನಿವೃತ್ತ ಯೋಧ ದಿ. ಚಿನ್ನ ಸ್ವಾಮಿಯವರ ಸೈಟ್ ಗೆ ಅಕ್ರಮವಾಗಿ ಪ್ರವೇಶಿಸಿ ಕಾಂಪೌಂಡ್ ಧ್ವಂಸ ಮಾಡಿದ ಬಗ್ಗೆ ಚಿನ್ನಸ್ವಾಮಿ ಅವರ ಸಂಬಂಧಿಗಳಾದ ವಾಣಿ ಮತ್ತು ವರ್ಲಮತಿ ಎನ್ನುವವರು ಕೃಷ್ಣ ಆನಂದ, ಸರಿತಾ ಬಾಯಿ, ಪುಷ್ಪ ಅನ್ನುವವರ ವಿರುದ್ಧ ಠಾಣೆಗೆ ದೂರು ಕೊಡಲು ಹೋಗಿದ್ದರಂತೆ.
ಆ ವೇಳೆ ,ಇದನ್ನು ಸಿವಿಲ್ ಡಿಸ್ಪ್ಯೂಟ್ ಎಂದು ಕಥೆ ಕಟ್ಟಿದ ಇನ್ಸ್ ಪೆಕ್ಟರ್ ವಸಂತ ಕುಮಾರ್ ದೂರಿನ ಸತ್ಯಾಸತ್ಯತೆ ಪರಿಶೀಲಿಸುವ ಕೆಲಸಕ್ಕೂ ಕೈ ಹಾಕಿಲ್ಲ. ಆಪಾದಿತರ ಪರ ನಿಂತಂತೆ ಮಾತನಾಡಿದ್ದಾರೆ.ಇದನ್ನು ಪ್ರಶ್ನಿಸಿದ ತಮ್ಮನ್ನು ಅವಾಚ್ಯವಾಗಿ ನಿಂದಿಸಿ ಅಂದರ್ ಮಾಡುವುದಾಗಿ ವಸಂತಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ವಾಣಿ ಮತ್ತು ವರ್ಲಮತಿ ಆಪಾದಿಸಿದ್ದಾರೆ.
ಬಿಬಿಎಂಪಿ ಎಇಇ ಈ ಬಗ್ಗೆ ಹೇಳಿದರೂ ವಸಂತಕುಮಾರ್ ದೂರನ್ನು ಪಡೆದು ಎಫ್ ಐ ಆರ್ ದಾಖಲಿಸಿಯೇ ಇಲ್ಲ.ಆಪಾದಿತರಿಂದ ಚೆನ್ನಾಗಿ ಹಣ ತಿಂದು ಪ್ರಕರಣ ಮುಚ್ಚಾಕಲು ಯತ್ನಿಸಿದ್ದಾರೆ. ಪ್ರಾಪರ್ಟಿ ವಿಚಾರವಾಗಿ ಕೋರ್ಟ್ ನಿಂದ ಸ್ಟೇ ಅಗಿದ್ರೂ ಅಕ್ರಮ ಪ್ರವೇಶಕ್ಕೆ ಇನ್ಸ್ ಪೆಕ್ಟರ್ ಸಾಥ್ ಕೊಟ್ಟಿದ್ದಾರೆ ಎಂದು ಆಪಾದಿಸಲಾಗಿದೆ.
ಇನ್ಸ್ ಪೆಕ್ಟರ್ ವಸಂತಕುಮಾರ್ ಅವರ ಲಂಚಗುಳಿತನ ಹಾಗೂ ನಿರ್ಲಕ್ಷ್ಯದ ಬಗ್ಗೆ ವಲರ್ಮತಿ, ವಾಣಿ. ಅವರು ಸೋಮವಾರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.