BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

IS THIS PUNISHMENT TO IPS RAVI D CHENNANNANAVAR..!? ……”ಭ್ರಷ್ಟಾಚಾರ”ದ ಆರೋಪಕ್ಕೆ ದಂಡ ತೆತ್ತರೇ “ಖಡಕ್..!” IPS ರವಿ ಚನ್ನಣ್ಣನವರ್..?!

ಬೆಂಗಳೂರು:ಲಂಚದ ಆರೋಪ..ಭೂ  ಕಬಳಿಕೆ..ಅಕ್ರಮ ಆಸ್ತಿ ಸಂಪಾದನೆಯಂಥ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಖಡಕ್ ಅಧಿಕಾರಿ..ಸಿಂಗಂ ಎಂದೆಲ್ಲಾ ಕರೆಸಿಕೊಂಡಿದ್ದ ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ “ಖಡಕ್” ಸಂದೇಶವನ್ನೇ ರವಾನಿಸಿದೆ.

ಸಿಐಡಿಯಂಥ ಮಹತ್ವದ ವಿಭಾಗದಲ್ಲಿ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ರವಿ.ಡಿ ಚನ್ನಣ್ಣನವರ್ ಅವರನ್ನು ರಾಜ್ಯ ಸರ್ಕಾರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಇದು ರವಿ. ಡಿ ಚನ್ನಣ್ಣನವರ್ ಗೆ ಆದ ಮಹಾ ಮುಖಭಂಗ ಎಂದೇ ಹೇಳಲಾಗುತ್ತಿದೆ.

ರವಿ. ಡಿ ಚನ್ನಣ್ಣನವರ್ ಅವರನ್ನು ಸರ್ಕಾರ ಇತ್ತೀಚೆಗೆ ಅವರ ವಿರುದ್ದ ಕೇಳಿಬಂದ ದೂರುಗಳ ಹಿನ್ನಲೆಯಲ್ಲಿ ಸಿಐಡಿಯಿಂದ ತತ್ ಕ್ಷಣಕ್ಕೆ ತೆಗೆದು  ವಾಲ್ಮೀಕಿ  ಸಮುದಾಯದ ನಿಗಮ ಮಂಡಳಿಗೆ ವರ್ಗಾವಣೆ ಮಾಡಿದೆ.ಇದು ರವಿ ಡಿ ಚನ್ನಣ್ಣನವರ್ ಅವರಂಥ ಐಪಿಎಸ್ ಆದ ಮಹಾ ಮುಖಭಂಗ ಅಷ್ಟೇ ಅಲ್ಲ ಎಚ್ಚರಿಕೆ ಕರೆ ಗಂಟೆಯೂ ಎನ್ನಲಾಗುತ್ತಿದೆ.

ಈ ಎಂಡಿ ಪೋಸ್ಟ್ ನಿಯೋಜನೆ ಮೂಲಕ ರವಿ ಡಿ ಚನ್ನಣ್ಣನವರ್ ನ್ನು ಸರ್ಕಾರ ನೇಪಥ್ಯಕ್ಕೆ ಸರಿಸಿದಂತಾಗಿದೆ.ಸಿಐಡಿ ಯಿಂದ ಬೆಂಗಳೂರಿನ ಆಯಕಟ್ಟಿನ ಹುದ್ದೆಗೆ ವರ್ಗಾವಣೆ ಪಡೆಯಲು ಲಾಭಿ ನಡೆಸುತ್ತಿದ್ದರೆನ್ನಲಾದ ರವಿ ಡಿ,ಚನ್ನಣ್ಣನವರ್ ಅವರ ಪ್ರಯತ್ನಕ್ಕೂ ತಣ್ಣೀರೆರಚಿದಂತಾಗಿದೆ.ಈ ವರ್ಗಾವಣೆಯಿಂದಾಗಿ ಖಡಕ್ ಅಧಿಕಾರಿ..ಸಿಂಗಂ ಖ್ಯಾತಿಯ ಚೆನ್ನಣ್ಣನವರ್ ಮುಜುಗರಕ್ಕೆ ಸಿಲುಕಿದಂತಾಗಿದೆ ಎಂದೇ ಒಟ್ಟಾರೆ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News