BreakingTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜ್ಯ-ರಾಜಧಾನಿಸಿನೆಮಾ ಹಂಗಾಮ

NALANDA SHOW OVER..?! “ನೇಪಥ್ಯ”ಕ್ಕೆ ಸರಿದ “ನಳಂದಾ” -ಶಾಶ್ವತವಾಗಿ ಆಟ ನಿಲ್ಲಿಸಿದ ಚಿತ್ರಮಂದಿರ-ನಳಂದ ಥಿಯೇಟರ್ ಇನ್ನು ಕೇವಲ ನೆನಪು ಮಾತ್ರ…

ಬೆಂಗಳೂರು: ಹಲವಾರು ದಶಕಗಳ ಕಾಲ ಚಿತ್ರರಸಿಕರನ್ನು ರಂಜಿಸಿದ್ದ ಬೆಂಗಳೂರಿನ  ಈ ಚಿತ್ರಮಂದಿರ ಶಾಶ್ವತವಾಗಿ ಆಟ ನಿಲ್ಲಿಸಿದೆ. ಕನ್ನಡದ ಹಲವು ಚಿತ್ರಗಳಿಗೆ ಮೇನ್ ಥಿಯೇಟರ್ ಆಗಿದ್ದ ಈ ಥಿಯೇಟರ್ ನಲ್ಲಿ ಇನ್ಮುಂದೆ ಯಾವುದೇ ಚಿತ್ರ ಪ್ರದರ್ಶನ ಇರೊಲ್ಲ.. ಚಿತ್ರಮಂದಿರವೊಂದು ಇತ್ತು ಎನ್ನುವ ಕುರುಹೂ ಇಲ್ಲದಂತೆ ಅಲ್ಲೊಂದು ಬೃಹತ್ ವಾಣಿಜ್ಯ ಸಂಕೀರ್ಣವೊಂದು ಕೆಲವೇ ದಿನಗಳಲ್ಲಿ ಎದ್ದುನಿಲ್ಲಲಿದೆ..ಇದು ಆ ಚಿತ್ರಮಂದಿರದಲ್ಲಿ ಅನೇಕ ಚಿತ್ರಗಳನ್ನು ನೋಡಿ ಹುಚ್ಚೆದ್ದು ಕುಣಿದಿದ್ದ ಚಿತ್ರ ರಸಿಕರಿಗೆ ನಿಜಕ್ಕೂ ಬೇಸರ ಹಾಗೂ ನಿರಾಶೆ ಮೂಡಿಸಿದೆ.

ನಳಂದಾ ಥಿಯೇಟರ್..ಇದು ಬೆಂಗಳೂರಿನ ಪ್ರತಿಷ್ಟಿತ ಹಾಗೂ ಮುಖ್ಯವಾದ ಥಿಯೇಟರ್ ಗಳಲ್ಲಿ ಒಂದಾಗಿತ್ತು.ಆದರೆ ಇನ್ಮುಂದೆ ಅಲ್ಲಿ ಚಿತ್ರ ಪ್ರದರ್ಶನವೂ ಇರೊಲ್ಲ..ಚಿತ್ರ ವೀಕ್ಷಣೆಗೆ ಯಾವೊಬ್ಬ  ಚಿತ್ರರಸಿಕನೂ ಬರೊಲ್ಲ..ಏಕೆಂದರೆ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಹಾಕ್ಕೊಳ್ತಿದೆ.ಅಷ್ಟೇ ಅಲ್ಲ,ಅದೇ ಸ್ಥಳದಲ್ಲಿ ವಾಣಿಜ್ಯ ಕಟ್ಟಡವೊಂದು ನಿರ್ಮಾಣವಾಗಲಿದೆಯಂತೆ.

ಆರಂಭದ ದಿನಗಳಲ್ಲಿ ಕನ್ನಡದ ಅನೇಕ ಹೆಸರಾಂತ ಸೂಪರ್ ಹಿಟ್ ಚಿತ್ರಗಳನ್ನು ಪ್ರದರ್ಶಿಸಿದ್ದ ನಳಂದಾ ಥಿಯೇಟರ್ ಕನ್ನಡದ ದಿಗ್ಗಜ ನಟರುಗಳ ಚಿತ್ರಗಳ ಪ್ರದರ್ಶನಕ್ಕೆ ಮುಖ್ಯ ಥಿಯೇಟರ್ ಆಗಿದ್ದೂ ಅಷ್ಟೇ ಸತ್ಯ.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂಥ ನಟರಿಂದ ಹಿಡಿದು ಈ ತಲೆ ಮಾರಿನ ದರ್ಶನ್, ಯಶ್,ಸುದೀಪ್ ಅವರು ನಟಿಸಿದ ಅನೇಕ ಚಿತ್ರಗಳೂ ಇಲ್ಲಿ ಪ್ರದರ್ಶನವಾದ ಇತಿಹಾಸವಿದೆ.ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾದರೂ ಇಲ್ಲಿ ಬಿಡುಗಡೆಯಾಗಿ ಚಿತ್ರರಸಿಕರನ್ನು ರಂಜಿಸಿದ ದೊಡ್ಡ ಇತಿಹಾಸವೇ ಇದಕ್ಕಿದೆ.

ಆದರೆ ಲಾಭದಾಯಕವಾಗಿಯೇ ನಡೆಯುತ್ತಿದ್ದ ಥಿಯೇಟರ್ ಕೊರೊನಾ ವಕ್ಕರಿಸಿದಾಗಿನಿಂದ ನಷ್ಟಕ್ಕೆ ಸಿಲುಕ್ತು.ಮೈಸೂರು ರಸ್ತೆಯ ವ್ಯಾಪ್ತಿಯಲ್ಲಿ ಅನೇಕ ಮಲ್ಟಿಪ್ಲೆಕ್ಸ್ ಗಳು ತಲೆ ಎತ್ತಿದ್ದೂ ಥಿಯೇಟರ್ ನಷ್ಟದಿಂದ ಬಳಲಲು ಕಾರಣವಾಯಿತು.ಮೊದಲ ಹಾಗೂ ಎರಡನೇ ಅಲೆಯಲ್ಲಂತೂ ತೀವ್ರ ನಷ್ಟಕ್ಕೆ ಸಿಲುಕಿದ ಥಿಯೇಟರ್ ಮೂರನೇ ಅಲೆ ವೇಳೆಯಲ್ಲಂತೂ  ಆರ್ಥಿಕವಾಗಿ ಚೇತರಿಸಿಕೊಳ್ಳಲಿಕ್ಕಾಗದಷ್ಟು ಸಂಕಷ್ಟಕ್ಕೆ ಸಿಲುಕ್ತು.ಪರಿಣಾಮವಾಗಿ ಮಾಲೀಕರು ಥಿಯೇಟರ್ ಶಾಶ್ವತವಾಗಿ ಮುಚ್ಚಿ ಆ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸೋದು ಸೂಕ್ತ ಎನ್ನುವ ನಿರ್ದಾರಕ್ಕೆ ಬಂದರು.

ಹಾಗೊಂದು ನಿರ್ಧಾರ ಮಾಡಿದ ಕೆಲವೇ ದಿನಗಳಲ್ಲಿ ಥಿಯೇಟರ್ ನ್ನು ಒಡೆದಾಕುವ ಕೆಲಸವೂ ಶುರುವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಜೆಸಿಬಿಗಳು ಥಿಯೇಟರ್ ನ ಕುರುಹುಗಳೊಂದಿಗೆ ಅದರ ಇತಿಹಾಸವನ್ನೂ ನೇಪಥ್ಯಕ್ಕೆ ಸರಿಸುವಂತ ಕೆಲಸವನ್ನು ಮಾಡುತ್ತಿವೆ.ಎಲ್ಲಾ ಮುಗಿದ ಮೇಲೆ ಕೆಲವೇ ದಿನಗಳಲ್ಲಿ ಅಲ್ಲಿ ವಾಣಿಜ್ಯ ಚಟುವಟಿಕೆಗಳು ಬೇರೆಯದೇ ರೀತಿಯಲ್ಲಿ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಮೈಸೂರು ರಸ್ತೆಗೆ ಶೋಭಾಯಮಾನವಾಗಿದ್ದ ನಳಂದಾ ಥಿಯೇಟರ್ ನ್ನು ಶಾಶ್ವತವಾಗಿ ಒಡೆದಾಕುತ್ತಿರುವುದು ಥಿಯೇಟರ್ ನಲ್ಲಿ ಅನೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದ ಸಾವಿರಾರು ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿರುವುದಂತೂ ಸತ್ಯ..ಕೊರೊನಾ ಕಾರಣಕ್ಕೆ ಈಗಾಗಲೇ ಅನೇಕ ಥಿಯೇಟರ್ ಗಳು ಶಾಶ್ಚತವಾಗಿ ಬಾಗಿಲು ಹಾಕ್ಕೊಂಡಿದ್ದು ನಳಂದಾ ಥಿಯೇಟರ್ ಗಳ ಸಾಲಿಗೆ ಇನ್ನೆಷ್ಟು ಬಸ್ ಗಳು ಸೇರಿ ಹೋಗಲಿವೆಯೋ ಗೊತ್ತಾಗ್ತಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News