Breakinglock downScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಮಾಹಿತಿ/ತಂತ್ರಜ್ಞಾನರಾಜಕೀಯರಾಜ್ಯ-ರಾಜಧಾನಿ

“APPU” NAME FOR “POTTERY TOWN METRO” STATION .. “ಪಾಟರಿ ಟೌನ್” ಮೆಟ್ರೋಗೆ ಶೀಘ್ರವೇ “ಅಪ್ಪು”ಹೆಸರು….

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರನ್ನು ಬೆಂಗಳೂರಿನ ಐತಿಹಾಸಿಕ ಹಾಗೂ ಪುರಾತನ ಪ್ರಸಿದ್ಧ “ಪಾಟರಿ ಟೌನ್” ಮೆಟ್ರೋ ನಿಲ್ದಾಣಕ್ಕಿಡುವ ಪ್ರಸ್ತಾಪ ಪ್ರಧಾನಿ ನರೇಂದ್ರ ಮೋದಿ ಕಚೇರಿಯನ್ನು ತಲುಪಿದೆ.ರಾಜ್ಯ ಹಾಗೂ ಬಿಬಿಎಂಪಿ ಮಟ್ಟದಲ್ಲಿ ನಡೆಯುತ್ತಿದ್ದ ಈ ಹೋರಾಟವನ್ನು ಕೆಂದ್ರದ ಮಟ್ಟಕ್ಕೆ ಕೊಂಡೊಯ್ದಿರುವ ಬೆಂಗಳೂರಿನ ಯುವಕರ ಪಡೆಗೆ ಪ್ರಾರಂಭಿಕ ಗೆಲುವು ಸಿಕ್ಕಿದೆ.

ಬೆಂಗಳೂರಿನ ಐತಿಹಾಸಿಕ ಪಾಟರಿ ರಸ್ತೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ಮಾರ್ಗದ ನಿಲ್ದಾಣಕ್ಕೆ ಅಪ್ಪು ಹೆಸರನ್ನು ಇಡಬೇಕೆನ್ನುವ ಪ್ರಸ್ತಾಪವನ್ನು  ಕರ್ನಾಟಕ ಬಹುಜನ ಫೆಡರೇಷನ್  05-01-2022 ರಂದು ಪ್ರಧಾನ ನರೇಂದ್ರ ಮೋದಿ ಅವರ ಕಚೇರಿಗೆ ರವಾನಿಸಿತ್ತು.ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ಎನ್ನುವಂಥ ಸಾಧನೆ ಮಾಡಿದ ಅಪ್ಪು ಹೆಸರನ್ನು ಬೆಂಗಳೂರಿನ ಐರಿಹಾಸಿಕ ಮೆಟ್ರೋ ನಿಲ್ದಾಣಕ್ಕೆ ಇಟ್ಟರೆ ಅದು ಸ್ಮರಣೀಯವಾಗಿರುತ್ತೆ..ಹಾಗಾಗಿ ಮೆಟ್ರೋ ಹಾಗು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೆಶನ ನೀಡುವಂತೆಯೂ ಮನವಿ ಮಾಡಿಕೊಳ್ಳಲಾಗಿತ್ತು.

ಪ್ರಧಾನ ನರೇಂದ್ರ ಮೋದಿ ಅವರ ಕಚೇರಿ ಈ ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ   ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡದೆ.ಈಗಾಗಲೇ ಪತ್ರ ಸಿಎಂ ಅವರ ಕಚೇರಿಯನ್ನೂ ತಲುಪಿದೆ.ಅನೇಕ ಸಂಘಟನೆಗಳು ಹಾಗೂ ವ್ಯಕ್ತಿಗಳು ಈಗಾಗಲೇ ಪುನೀತ್ ಅವರ ಹೆಸರನ್ನು ರಸ್ತೆ-ಸರ್ಕಲ್ ಗಳಿಗೆ ನಾಮಕರಿಸುವ ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದೆಲ್ಲದರ ನಡುವೆ ಪ್ರಧಾನಿ ಅವರ ಕಚೇರಿಗೇನೆ ಪತ್ರ ಬರೆದು ಆ ಪ್ರಯತ್ನದಲ್ಲಿ ಒಂದಷ್ಟು ಯಶಸ್ವಿಯೂ ಆಗಿದ್ದಾರೆ ಸಂಘಟನೆಯ ಅಧ್ಯಕ್ಷ ಶಂಕರ್.

ಅಪ್ಪು ಹೆಸರನ್ನು ಪಾಟರಿ ಮೆಟ್ರೋ ಸ್ಟೇಷನ್ ಗೆ ಇಡುವ ವಿಷಯದಲ್ಲಿ ಮೊದಲಿಂದಲೂ ಹೋರಾಟ ನಡೆಸುತ್ತಾ ಬಂದಿರುವ ಶಂಕರ್ ಕೇವಲ ಪ್ರಧಾನಿ ಕಚೇರಿಗಷ್ಟೇ ತಮ್ಮ ಮನವಿ ಮಾಡಿಕೊಂಡಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ವಿ.ಸದಾನಂದ ಗೌಡ ಹಾಗೂ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಆಯಾ ಕಾಲಘಟ್ಟದಲ್ಲಿ ಮನವಿ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲ,ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಂಡು ಸಕಾರಾತ್ಮಕ ಸ್ಪಂದನೆ ಪಡೆದಿದ್ದಾರೆ.

ಅಂದ್ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ರಾಜ್ಯದ ಮುಖ್ಯಮಂತ್ರಿ ಅವರ ಕಚೇರಿಗೆ ಸಂದೇಶ ರವಾನೆಯಾಗಿರುವುದರಿಂದ ಪುನೀತ್ ಹೆಸರು ಪಾಟರಿ ಟೌನ್ ನ ಮೆಟ್ರೋ ಸ್ಟೇಷನ್ ಗೆ ನಾಮಕರಣವಾಗುವ ದಿನಗಳು ದೂರವಿಲ್ಲ ಎನಿಸುತ್ತದೆ.

Spread the love

Related Articles

Leave a Reply

Your email address will not be published.

Back to top button
Flash News