Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

“HIJAAB” CONTROVERSY..HIGH COURT VIRTUAL SESSION GAINED EXTREME THRILLS.. ಕ್ಷಣ ಕ್ಷಣಕ್ಕೂ ರೋಚಕತೆ ಪಡೆಯುತ್ತಿದೆ.. ಹಿಜಾಬ್ ಕುರಿತ ಹೈ ಕೋರ್ಟ್ ವರ್ಚುವಲ್ ಕಲಾಪ….ನಾಳೆಯೂ ಮುಂದುವರೆಯುವ ಸಾಧ್ಯತೆ,,!?

ಬೆಂಗಳೂರು:ಹಿಜಾಬ್ ನಿರ್ಬಂಧ-ಅವಕಾಶಗಳ ಸುತ್ತ ಹೈಕೋರ್ಟ್ ನ ಏಕಸದಸ್ಯಪೀಠದಲ್ಲಿ ನಡೆಯುತ್ತಿರುವ ವಾದ-ಪ್ರತಿವಾದಗಳು ತೀವ್ರ  ರೋಚಕತೆ ಮೂಡಿಸಿವೆ.ಅನೇಕ ರಾಜ್ಯಗಳ ಕೋರ್ಟ್ ಗಳು ಹಿಜಾಬ್ ಧಾರಣೆ ಬಗ್ಗೆ ನೀಡಿರುವ ಅನೇಕ ತೀರ್ಪು-ಅಭಿಪ್ರಾಯಗಳು ಅರ್ಜಿ ವಿಚಾರಣೆ ವೇಳೆ ಉಲ್ಲೇಖವಾಗುತ್ತಿವೆ.

ಹಿಜಾಬ್ ಪರ ರೇಷ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬೆಳಗ್ಗೆಯಿಂದ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರನ್ನೊಳಗೊಂಡ ಏಕಸದಸ್ಯ ಪೀಠದ   ಮುಂದೆ  ರೇಷ್ಮಾ ಪರ ವಕೀಲರಾದ ದೇವದತ್ತ ಕಾಮತ್ ಹಿಜಾಬ್ ವಿಷಯದಲ್ಲಿ ಅನೇಕ ಕುತೂಹಲದ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಹಿಜಾಬ್ ವಿಷಯದಲ್ಲಿ ಅನೇಕ ರಾಜ್ಯಗಳ ಶಾಲೆಗಳು ತಮ್ಮದೇ ಧೋರಣೆ ತಳೆದ ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿನ ನ್ಯಾಯಾಲಯಗಳು ಕೊಟ್ಟ ತೀರ್ಪು ಹಾಗೂ ಅಭಿಪ್ರಾಯಗಳನ್ನು ಮಂಡಿಸಿರುವುದನ್ನು ವಾದಕ್ಕೆ ಪೂರಕವಾಗಿ ವಕೀಲರಾದ ದೇವದತ್ತ ಕಾಮತ್ ಅವರು ಬಳಸಿಕೊಂಡರು.

ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್
ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್

ಹಿಜಾಬ್ ವಿಷಯದಲ್ಲಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳಾ ಹೈ ಕೋರ್ಟ್ ಕೊಟ್ಟಂಥ ತೀರ್ಪುಗಳು, ಮದ್ರಾಸ್ ಹೈ ಕೋರ್ಟ್ ಕೊಟ್ಟ ತೀರ್ಪು,ಮುಂಬೈನ ಫಾತಿಮಾ ಪ್ರಕರಣದಲ್ಲಿ ಕೋರ್ಟ್ ಕೊಟ್ಟಂಥ ತೀರ್ಪು,ಕೇರಳಾದ ಬಿಜಾಯ್ ಇಮ್ಮಾನುವೇಲ್ ಪ್ರಕರಣದಲ್ಲಿ ಅಲ್ಲಿನ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕಾಮತ್ ಉಲ್ಲೇಖಿಸಿದರು.

ಈ ನಡುವೆಯೇ ಮಲೇಷ್ಯಾ ಕೋರ್ಟ್ ಹಿಜಾಬ್ ವಿಷಯದಲ್ಲಿ ಅದರ ಪರವಾಗಿ ನೀಡಿದ ತೀರ್ಪನ್ನು ಕಾಮತ್ ಉಲ್ಲೇಖಿಸಿದರು.ಶಾಲೆಯ ಆವರಣ ಪ್ರವೇಶಿಸುವವರೆಗೂ ಇಲ್ಲದ ಹಿಜಾಬ್ ಗೊಂದಲವನ್ನು ಶಾಲೆಯ ಕೊಠಡಿ ಪ್ರವೇಶಿಸುತ್ತಿದ್ದಂತೆ ಏಕೆ ಎತ್ತಿ ಹಿಡಿಯಲಾಗುತ್ತಿದೆ.ಹಿಜಾಬ್ ಧರಿಸಿ ಮಾರುಕಟ್ಟೆಗೆ ಹೋದಾಗ ಅದು ಸುದ್ದಿಯಾಗುವುದಿಲ್ಲ..ಅನೇಕ ಕಡೆ ಅಡ್ಡಾಡಿದ್ರೂ ವಿವಾದವಾಗುವುದಿಲ್ಲ..ಆದ್ರೆ ಅದನ್ನೇ ಮಕ್ಕಳು ಧರಿಸಿ ಶಾಲೆ ಪ್ರವೇಶಿಸಿದಾಗ ದೊಡ್ಡ ಕೋಲಾಹಲವನ್ನೇ ಸೃಷ್ಟಿಸುವುದು ಎಷ್ಟರ ಮಟ್ಟಿಸೆ ಸರಿ.. ಸ್ವಾತಂತ್ರ್ಯವನ್ನು ಧರ್ಮದ ವಿಷಯವನ್ನು ಎಳೆದು ತರುವ ಮೂಲಕ ಏಕೆ ಹರಣ ಮಾಡುವ, ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ವಾದದಲ್ಲಿ ಕಾಮತ್ ತಿಳಿಸಿದರು.

ರೇಷ್ಮಾ ಪರ ವಕೀಲ ದೇವದತ್ತ ಕಾಮತ್
ರೇಷ್ಮಾ ಪರ ವಕೀಲ ದೇವದತ್ತ ಕಾಮತ್
ಸರ್ಕಾರದ  ಅಭಿಯೋಜಕ ಪ್ರಭುಲಿಂಗ ನಾವದಗಿ
ಸರ್ಕಾರದ  ಅಭಿಯೋಜಕ ಪ್ರಭುಲಿಂಗ ನಾವದಗಿ

ನಮ್ಮ ದೇಶ ಜಾತ್ಯಾತೀತ ದೇಶ,ಬೇರೆ ಧರ್ಮಗಳನ್ನು ಅದರ ವಿಚಾರ ಧಾರೆಗಳನ್ನು ಗೌರವಿಸುವುದು ಜಾತ್ಯಾತೀತತೆಯ ಭಾಗ,ಅದನ್ನು ನಮ್ಮ ಆಡಳಿತ ಪರಿಪಾಲಿಸಬೇಕು.ಕೆಲವು ದೇಶಗಳಲ್ಲಿ ಋಣಾತ್ಮಕವಾದ ಧೋರಣೆಗಳಿರಬಹುದು.ಆದ್ರೆ ನಮ್ಮ ನೆಲದಲ್ಲಿ ಅದಾಗಬಾರದು ಎಂದು ಕಾಮತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಜಾಬ್ ವಿಷಯದಲ್ಲಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಸಾಧ್ಯವಿಲ್ಲ..ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆ-ಕಾಲೇಜ್ ನೊಳಗೆ ಬಿಟ್ಟುಕೊಂಡಿಲ್ಲ.ಇನ್ನೊಂದಷ್ಟು ಕಡೆ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ.ಇದೆಲ್ಲಾ ಏನ್ ನಡೀತಿದೆ. ನಾಮ- ಕ್ರಾಸ್- ಹಿಜಾಬ್ ಎಲ್ಲವೂ ಜಾತ್ಯಾತೀತತೆಯ ಪ್ರತೀಕ.ಅದನ್ನೇಕೆ ಒಡೆದು ಹಾಳುವ ಕೆಲಸವನ್ನೇಕೆ ಮಾಡಬೇಕು ಎಂದು ಕಾಮತ್ ವಾದದ ನಡುವೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕು ಮುನ್ನ ಸರ್ಕಾರದ  ಅಭಿಯೋಜಕ ಪ್ರಭುಲಿಂಗ ನಾವದಗಿ ಹಿಜಾಬ್ ವಿಷಯದಲ್ಲಿ ಸರ್ಕಾರದ ಧೋರಣೆ-ನಿಲುವನ್ನು ಸಮರ್ಥಿಸಿಕೊಂಡರು.ವಾದದ ನಡುವೆ ಕಾಮತ್ ಜತೆಗೆ ವಾಕ್ಸಮರವೇ ನಡೆದೋಯ್ತು.ದೇವದತ್ತ ಕಾಮತ್ ಅವರು ನ್ಯಾಯಾಧೀಶರ ಮುಂದೆ ತಮ್ಮದೇ ಆದ ರೀತಿಯಲ್ಲಿ ವಾದ ಮಂಡಿಸಲಾರಂಭಿಸಿದ್ದಾರೆ.ಇದಾದ ತರುವಾಯ ನಾವದಗಿ ಸರ್ಕಾರದ ಪರ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿದ್ದು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ನ್ಯಾಯಾಲಯದ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.ಇಂದಿನ ಕಾನೂನಾತ್ಮಕ ಬೆಳವಣಿಗೆ ಗಮನಿಸಿದಾಗ ಹಿಜಾಬ್ ಪರ ಕೋರ್ಟ್ ತೀರ್ಪು ಇಂದೇ ಹೊರ ಬೀಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News