Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

TOMMOROW..HAPPY NEWS FOR DISMISSED TRANSPORT EMPLYOEES “ವಜಾ”ಗೊಂಡ “ಸಾರಿಗೆ” ಕಾರ್ಮಿಕರಿಗೆ “ನಾಳೆ”ಯೇ ಗುಡ್ ನ್ಯೂಸ್..! ಸರ್ಕಾರ ನೀಡಲಿರುವ ಆ “ಶುಭ ಸುದ್ದಿ ಏನು..? ಇಷ್ಟ್ ದಿನ ಆಗದೇ ಇದ್ದುದ್ದು, ನಾಳೆ ಏನಾಗಲಿದೆ..!

ಬೆಂಗಳೂರು: ಕೆಲಸ ಕಳೆದುಕೊಂಡು ಅಕ್ಷರಶಃ ದಾರಿ ತಪ್ಪಿದ ಮಕ್ಕಳಂತಾಗಿದ್ದ ಸಾರಿಗೆ ಕಾರ್ಮಿಕರಿಗೆ ಇದು ಒಂದ್ರೀತಿ ಸಂತೋಷದ ಸುದ್ದಿನೇ ಸರಿ..ಮುಳುಗೋನಿಗೆ ಹುಲ್ಲು ಕಡ್ಡಿನೇ ಆಸರೆ ಎನ್ನುವಂತಾಗಿದ್ದ ಸಾರಿಗೆ ಕಾರ್ಮಿಕರ ಪಾಲಿಗೆ ಸರ್ಕಾರ ಆಪದ್ಬಾಂಧವನಂತಾಗಿದೆ.ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದ ಸರ್ಕಾರ ತನ್ನ ಷರತ್ತುಗಳಿಗೆ ಒಪ್ಪಿಕೊಂಡು ಸಹಿ ಹಾಕಿದ 100 ಕಾರ್ಮಿಕರಿಗೆ ಮರುನೇಮಕಾತಿಯ ಪತ್ರ ನೀಡುತ್ತಿದೆ.ಒಂದು ಹಂತದಲ್ಲಿ ಸಮಾಧಾನ ಹಾಗೂ ಸಂತೋಷದ ಈ ಕಾರ್ಯಕ್ಕೆ ನಾಳೆಯೇ ಶುಭಮುಹೂರ್ತ ಫಿಕ್ಸ್ ಆಗಿದೆಯಂತೆ.

ಯಾರದೋ ಮಾತು ಕೇಳಿ ಮುಷ್ಕರ ನಡೆಸಿ ಹಳ್ಳಕ್ಕೆ ಬಿದ್ದ ಸಾವಿರಾರು ಸಾರಿಗೆ ಕಾರ್ಮಿಕರ ಬದುಕುಗಳು ಕಳೆದ 10-11 ತಿಂಗ ಳಿಂದ ಅಕ್ಷರಶಃ ನರಕಸದೃಶವಾಗಿದೆ.ನ್ಯಾಯದ ಭರವಸೆ ಕೊಟ್ಟ ಮು(ಮೂರ್ಖ..?!)ಖಂಡರು ಕಾರ್ಮಿಕರು ತಮ್ಮ ಸಮಸ್ಯೆ ಹೇಳಿ ಕೊಂಡು ಗೋಳೋಯ್ದುಕೊಳ್ಳುತ್ತಾರೆಂದುಕೊಂಡು ನಾಟ್ ರೀಚಬಲ್ ಆದ್ರು.ಮನೆ-ಸಂಸಾರ-ಮಕ್ಕಳ ಶಿಕ್ಷಣದ ತಾಪತ್ರಯಕ್ಕೆ ಸಿಲುಕಿದ ಕಾರ್ಮಿಕರ ಕುಟುಂಬಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಯಾವ್ದೇ ಹಾಲತ್ ನಲ್ಲಿ ಕೆಲಸ ಸಿಕ್ಕರೆ ಸಾಕಪ್ಪ..ನಮ್ಮ ಪಾಡಿಗೆ ನಾವ್ ಇದ್ ಬಿಡ್ತೇವೆ.ಯಾವ ಮುಷ್ಕರನೂ ಬೇಡ..ಯಾವ್ ಮುಖಂಡನ ಸಹವಾಸವು ಬೇಡ ಎನ್ನುವ ಮಟ್ಟಕ್ಕೆ ಬಂದ್ ಬಿಟ್ಟಿದ್ರು ಕಾರ್ಮಿಕರು.

ಕಾರ್ಮಿಕರ ಸಂಕಷ್ಟ ನೋಡಲಿಕ್ಕಾಗದೆ ಸಚಿವ ಶ್ರಿರಾಮುಲು ಕೆಲಸ ಕಳೆದುಕೊಂಡವರಿಗೆ ನೌಕರಿಯ ಭರವಸೆ ಕೊಟ್ಟಿದ್ದರು.ಆದ್ರೆ ಆ ನಂತರದಲ್ಲಿ ಅಧಿಕಾರಿಗಳು ಇದಕ್ಕಾಗಿ ಸಿದ್ದಪಡಿಸಿದ ಕಂಡೀಷನ್ಸ್ ಮಾತ್ರ ಕಾರ್ಮಿಕರನ್ನು ಕೆಂಡಾಮಂಡಲವಾಗಿಸಿದ್ದು ಸತ್ಯ..ಆದ್ರೆ ಕೆಲಸವನ್ನಷ್ಟೆ ಮಾಡಿಕೊಂಡು ತಾವಾಯ್ತು..ತಮ್ಮ ಕುಟುಂಬಗಳಾಯ್ತು ಎಂದುಕೊಂಡಿರುವವರಿಗೆ ಯಾವ್ ಕಂಡೀಷನ್ಸ್ ಆದ್ರೇನು..ನಮಗೆ ಜೀವನ ನಡೆಸೊಕ್ಕೆ ಸಂಸಾರ ಸಾಗಿಸೊಕ್ಕೆ ಕೆಲಸ ಸಿಕ್ಕರಷ್ಟೇ ಸಾಕು ಎಂದು ಆಲೋಚಿಸುವ ಸಾವಿರಾರು ಕಾರ್ಮಿಕರು ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡು ಈಗಾಗಲೇ ಮುಚ್ಚಳಿಕೆ ಕೂಡ ಬರೆದುಕೊಟ್ಟಿದ್ದಾರಂತೆ.ಅಂಥವರ  ಪೈಕಿ ಆಯ್ದ 100 ಕಾರ್ಮಿಕರಿಗೆ ನಾಳೆ ಸಾರಿಗೆ ಸಚಿವ ಶ್ರೀರಾಮಲು ಮರು ನೇಮಕಾತಿ ಪತ್ರಗಳನ್ನು ವಿತರಿಸಿ ಅವರ ಮೊಗದಲ್ಲಿ ನಗು ಸೃಷ್ಟಿಸಲಿದ್ದಾರೆ..ಮನೆಗಳಲ್ಲಿ ಸಂತೋಷ ಮೂಡಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಎಂಟಿಸಿ ಆಡಳಿತ ವರ್ಗವೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ನೀಡಿದೆ.

ಅಂದ್ಹಾಗೆ ನಾಳೆಯೇ 100 ಕಾರ್ಮಿಕರಿಗೆ ಮರುನಿಯೋಜನೆಯ ಪತ್ರವನ್ನು ಸಚಿವರು ನೀಡಲಿದ್ದಾರೆ ಎನ್ನಲಾಗುತ್ತಿದೆ.ಕೆಲವೇ ದಿನಗಳಲ್ಲಿ ಕೆಲಸದ ನಿರೀಕ್ಷೆಯಲ್ಲಿ ಚಾತಕ ಪಕ್ಷಿಗಳಂತಾಗಿರುವ ಎಲ್ಲಾ ಕಾರ್ಮಿಕರಿಗೂ ಕೆಲಸ ನೀಡಿ ಅವರ ಬದುಕುಗಳನ್ನು ಹಸನುಗೊಳಿಸುವ ಮಾತು ಕೂಡ ಕೇಳಿಬರುತ್ತಿದೆ.

ಮೂರು ಪ್ರಮುಖ ಷರತ್ತುಗಳಿಗೆ ಸಹಿ ಹಾಕಿ ಕೆಲಸಕ್ಕೆ ಮರುನಿಯೊಜನೆಗೊಳ್ಳುತ್ತಿರುವ ಮೊದಲ ಹಂತದ ಕಾರ್ಮಿಕರು ಟ್ರೈನಿಸ್ ಹಾಗು ಸೇವಾ ಖಾಯಮಾತಿ ಆಗದೇ ಇರುವ ಕಾರ್ಮಿಕರಾಗಿದ್ದಾರೆ ಎನ್ನಲಾಗುತ್ತಿದೆ.ಆ ಗ್ರೇಡ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆಯಂತೆ..ಈ ಹಂತದ ಮರುನಿಯೋಜನೆ ಕಂಪ್ಲೀಟ್ ಆದ್ಮೇಲೆ ಪರ್ಮನೆಂಟ್ ಕಾರ್ಮಿಕರ ಮರುನೇಮಿಕಾತಿ ಆರಂಭವಾಗಲಿದೆಯಂತೆ..ಹೀಗೆ ವಜಾಗೊಂಡಿರುವ ಸರಿಸುಮಾರು 2ವರೆ ಸಾವಿರಕ್ಕು ಹೆಚ್ಚು ಸಾರಿಗೆ ಕಾರ್ಮಿಕರು ಕೆಲವೇ ದಿನಗಳಲ್ಲಿ ಉದ್ಯೋಗಭಾಗ್ಯ ಪಡೆದುಕೊಳ್ಳಲಿದ್ದಾರೆನ್ನುವ ವಿಶ್ವಾಸವನ್ನು ಸಾರಿಗೆ ಕಾರ್ಮಿಕರಿಗೆ ಬಿಎಂಟಿಸಿ ಅಧಿಕಾರಿಗಳು ನೀಡಿದ್ದಾರೆ.

ಆದರೆ ಈ ಮರುನಿಯೋಜನೆ ಪ್ರಕ್ರಿಯೆಗೆ  ಸಾಕಷ್ಟು ಅಸಮಾಧಾನ ಕೇಳಿಬಂದಿದೆ.ಕೆಲಸದ ಅವಶ್ಯತೆಯನ್ನೇ ಎಮೋಷನಲ್ ಸಂಗತಿಯಾಗಿಟ್ಟುಕೊಂಡು ಮೂರು ಷರತ್ತುಗಳಿಗೆ ಸಹಿ ಹಾಕಿಸಿಕೊಂಡು ಕಾರ್ಮಿಕರಿಗೆ ಕೆಲಸ ನೀಡುತ್ತಿದೆ.ಆದರೆ ಕಂಡೀಷನ್ಸ್ ಗೆ ಸಹಿ ಹಾಕುವುದೆಂದರೆ ಅದು ನಮ್ಮ ಹಳ್ಳವನ್ನು ನಾವೇ ತೋಡಿಕೊಂಡಂತೆ..ನಮ್ಮ ಎಲ್ಲಾ ಸ್ವಾತಂತ್ರ್ಯವನ್ನು ಹಗ್ಗ ಕೊಟ್ಟು ಹರಣ ಮಾಡಿಸಿಕೊಂಡಂರತೆ.ಭವಿಷ್ಯದಲ್ಲಿ ಏನೇ ಸಮಸ್ಯೆಯಾದ್ರೂ ಅದನ್ನು ಪ್ರಶ್ನಿಸುವ ಹಕ್ಕು-ಸ್ವಾತಂತ್ರ್ಯವೇ ನಮಗಿರೊಲ್ಲ..ಇದನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ..ಕಾನೂನು ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಹೋರಾಟಕ್ಕೆ ತಡವಾಗಿಯಾದ್ರೂ ಪರ್ವಾಗಿಲ್ಲ,ನ್ಯಾಯ ಸಿಕ್ಕೇ ಸಿಗುತ್ತೆ..ಇದನ್ನೇಕೆ ಕಾರ್ಮಕರು ಅರ್ಥ ಮಾಡಿಕೊಳ್ಳುತ್ತಿಲ್ಲವೋ ಎಂದು ಸಾರಿಗೆ ಕಾರ್ಮಿಕರ ಸಂಘ-ಯೂನಿಯನ್ ಗಳು ಬೇಸರ ವ್ಯಕ್ತಪಡಿಸಿವೆ.

ಇದೆಲ್ಲಾ ಸರಿ..ಆದ್ರೆ ಕೆಲಸವಿಲ್ಲದೆ ..ಜೀವನಕ್ಕೆ ಭದ್ರತೆ ಇಲ್ಲದೆ..ಯಾರದೇ ಸಹಾಯ-ಆಸರೆಯಿಲ್ಲದೆ ಅಕ್ಷರಶಃ ಅತಂತ್ರವಾಗಿರುವ ಸಾರಿಗೆ ಕಾರ್ಮಿಕರಿಗೆ ಈ ಅನಿವಾರ್ಯವಾದ ಮಾರ್ಗ ಬಿಟ್ಟರೆ..ಬೇರೆ ಆಯ್ಕೆಯಾದ್ರೂ ಏನಿದೆ ಹೇಳಿ..? ಇದನ್ನು ಕೂಡ ಒಪ್ಪಿಕೊಳ್ಳಬೇಕಲ್ವಾ,?!

Spread the love

Related Articles

Leave a Reply

Your email address will not be published.

Back to top button
Flash News