Top News

IPL-2022 AUCTION-BUMPER FOR SHREYAS,SHAMI,DCOCK-DISSOPOINTMENT FOR STAR PLAYERS: ಐಪಿಎಲ್-2022 ಹರಾಜು: ಶ್ರೇಯಸ್ ಅಯ್ಯರ್ ದಾಖಲೆಯ ಮೊತ್ತಕ್ಕೆ ಕೆಕೆಆರ್ ಪಾಲು:12.25 ಕೋಟಿಗೆ ಸೋಲ್ಡ್-10.75 ಕೋಟಿ ರೂಗೆ ಹರ್ಷಲ್ ಪಟೇಲ್ ಆರ್‌ಸಿಬಿ ತೆಕ್ಕೆಗೆ:9.25 ಕೋಟಿಗೆ ಕಗಿಸೋ ಪಂಜಾಬ್ ಕಿಂಗ್ಲ್ ತೆಕ್ಕೆಗೆ ರಬಾಡ-

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ  ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಆಟಗಾರರ ಹರಾಜು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿಗೆ ಸುಮಾರು 1,214 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಒಟ್ಟು 590 ಆಟಗಾರರ ಹೆಸರನ್ನು ಬಿಸಿಸಿಐ (BCCI) ಶಾರ್ಟ್‌ಲಿಸ್ಟ್‌ ಮಾಡಿದೆ.

ಈ ಬಾರಿಯ ಹರಾಜಿನಲ್ಲಿ ಒಟ್ಟು 10 ಐಪಿಎಲ್ ಫ್ರಾಂಚೈಸಿಗಳು ಪಾಲ್ಗೊಂಡಿರುವುದರಿಂದ ಆಟಗಾರರ ಖರೀದಿಗೆ ಪೈಪೋಟಿ ಏರ್ಪಟ್ಟಿದೆ. 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಫ್ರಾಂಚೈಸಿಗಳು ಹೆಣೆದಿದ್ದ ರಣತಂತ್ರವನ್ನು ಅಪ್ಲೈ ಮಾಡುತ್ತಿದೆ.ಅಂದ್ಹಾಗೆ ಐಪಿಎಲ್-2002 ಆಕ್ಷನ್ ನಲ್ಲಿ ಈವರೆಗು ಲಭ್ಯವಿರುವ ಮಾಹಿತಿಯನ್ನು ಕೆಳಕಂಡಂತೆ ನೀಡುತ್ತಿದ್ದೇವೆ.

*2 ಕೋಟಿ ಮೊತ್ತಕ್ಕೆ ರಾಬಿನ್ ಉತ್ತಪ್ಪ ಚೆನ್ನೈ ಪಾಲು*2 ಕೋಟಿ ಮೊತ್ತಕ್ಕೆ ಗುಜರಾತ್ ಪಾಲಾದ ಜೇಸನ್ ರಾಯ್

*4.40 ಕೋಟಿ ಮೊತ್ತಕ್ಕೆ ಡ್ವೇನ್ ಬ್ರಾವೋ ಸಿಎಸ್‌ಕೆ ಪಾಲು

*4.60 ಕೋಟಿ ಮೊತ್ತಕ್ಕೆ ಲಕ್ನೋ ಸೂಪರ್‌ಜೈಂಟ್ಸ್‌ ಪಾಲಾದ ಮನೀಶ್ ಪಾಂಡೆ

*5 ಕೋಟಿಗೆ ರವಿಚಂದ್ರನ್ ಅಶ್ವಿನ್ ಖರೀದಿಸಿದ ರಾಜಸ್ಥಾನ್ ರಾಯಲ್ಸ್

*5.75 ಕೋಟಿ ಮೊತ್ತಕ್ಕೆ ಲಕ್ನೋ ಪಾಲಾದ ದೀಪಕ್ ಹೂಡಾ

*6.25 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಡೇವಿಡ್ ವಾರ್ನರ್

*6.25 ಕೋಟಿಗೆ ಶಮಿ ಖರೀದಿಸಿದ ಗುಜರಾತ್ ಟೈಟಾನ್ಸ್

*6.75 ಕೋಟಿ ಮೊತ್ತಕ್ಕೆ ಡಿ ಕಾಕ್ ಖರೀದಿಸಿದ ಲಕ್ನೋ

*7 ಕೋಟಿ ರೂಪಾಯಿಗೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್ ಮನ್ ಫಾಫ್ ಡು ಪ್ಲೆಸಿಸ್  –  ಆರ್ ಸಿಬಿ,

*7.25 ಕೋಟಿ ರುಪಾಯಿ ನೀಡಿ ಪ್ಯಾಟ್ ಕಮಿನ್ಸ್ ಸೆಳೆದುಕೊಂಡ ಕೆಕೆಆರ್

*7.75 ಕೋಟಿ ಮೊತ್ತಕ್ಕೆ ಕನ್ನಡಿಗ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ಪಾಲು

*8 ಕೋಟಿ ಮೊತ್ತಕ್ಕೆ ರಾಣಾ ಖರೀದಿಸಿದ ಕೆಕೆಆರ್‌

*8 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾದ ಟ್ರೆಂಟ್‌ ಬೌಲ್ಟ್‌

*8.25 ಕೋಟಿಗೆ ಶಿಖರ್ ಧವನ್ ಖರೀದಿಸಿದ ಪಂಜಾಬ್ ಕಿಂಗ್ಸ್

*8.50 ಕೋಟಿ ಮೊತ್ತಕ್ಕೆ ಶಿಮ್ರೋನ್ ಹೆಟ್ಮೇಯರ್ ಖರೀದಿಸಿದ ರಾಜಸ್ಥಾನ್ ರಾಯಲ್ಸ್

*8.75 ಕೋಟಿ ಮೊತ್ತಕ್ಕೆ ಲಕ್ನೋ ಪರ ಆಡಲಿದ್ದಾರೆ ಜೇಸನ್ ಹೋಲ್ಟರ್

*9.25 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾದ ರಬಾಡ

*10.75 ಕೋಟಿ ರೂಪಾಯಿ ಮೊತ್ತಕ್ಕೆ ಹರ್ಷಲ್ ಪಟೇಲ್ ಆರ್‌ಸಿಬಿ ತೆಕ್ಕೆಗೆ

*12.25 ಕೋಟಿ ಮೊತ್ತಕ್ಕೆ ಕೆಕೆಆರ್‌ ಪಾಲಾದ ಅಯ್ಯರ್

ದುರಂತ ಎಂದ್ರೆ ಕಳೆದ ಬಾರಿಯ ಐಪಿಎಲ್ ಸರಣಿಗಳಲ್ಲಿ ಮಿಂಚಿದ್ದ ಬಾಂಗ್ಲಾದೇಶದ ಶಕೀಬ್-ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ,ಡೇವಿಡ್ ಮಿಲ್ಲರ್,ಭಾರತದ ಸುರೇಶ್ ರೈನಾ Unsold ಆಗಿದ್ದಾರೆ.

ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ

* ಚೆನ್ನೈ ಸೂಪರ್‌ ಕಿಂಗ್ಸ್‌: 48.21 ಕೋಟಿ ರುಪಾಯಿ

* ಡೆಲ್ಲಿ ಕ್ಯಾಪಿಟಲ್ಸ್: 47.5 21 ಕೋಟಿ ರುಪಾಯಿ
* ಕೋಲ್ಕತಾ ನೈಟ್ ರೈಡರ್ಸ್‌: 48.21 ಕೋಟಿ ರುಪಾಯಿ

* ಲಖನೌ ಸೂಪರ್ ಜೈಂಟ್ಸ್: 59.22 ಕೋಟಿ ರುಪಾಯಿ

* ಮುಂಬೈ ಇಂಡಿಯನ್ಸ್: 48 21 ಕೋಟಿ ರುಪಾಯಿ

* ಪಂಜಾಬ್‌ ಕಿಂಗ್ಸ್‌: 72.23 ಕೋಟಿ ರುಪಾಯಿ

* ರಾಜಸ್ಥಾನ ರಾಯಲ್ಸ್‌: 62.22 ಕೋಟಿ ರುಪಾಯಿ

* ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 57.22 ಕೋಟಿ ರುಪಾಯಿ

* ಸನ್‌ರೈಸ​ರ್ಸ್‌ ಹೈದರಾಬಾದ್: 68.22 ಕೋಟಿ ರುಪಾಯಿ

* ಗುಜರಾತ್ ಟೈಟಾನ್ಸ್‌: 52.22 ಕೋಟಿ ರುಪಾಯಿ

ಐಪಿಎಲ್ ಆಕ್ಷನ್-2002ರ ಹೈಲೈಟ್ಸ್ ಇಂತಿದೆ:

*ಅಂಡರ್ 19  ವಿಶ್ವಕಪ್ ತಂಡದ ಆಟಗಾರರು ಸೇರಿ 600 ಆಟಗಾರರು ಹರಾಜಿನಲ್ಲಿ ಭಾಗಿ

* ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು 33 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ.

* ಮೆಗಾ ಹರಾಜಿನಲ್ಲಿ 10 ಫ್ರಾಂಚೈಸಿಗಳು ಗರಿಷ್ಠ 217 ಆಟಗಾರರನ್ನು ಖರೀದಿಸಬಹುದು.

* ಆಟಗಾರರ  ಖರೀದಿಗೆ ಫ್ರಾಂಚೈಸಿಗಳಿಗೆ ಗರಿಷ್ಠ 90 ಕೋಟಿ ರುಪಾಯಿ ಖರ್ಚು ಮಾಡಲು ಅವಕಾಶ.

* ಪ್ರತಿ ಫ್ರಾಂಚೈಸಿಯು ಕನಿಷ್ಠವೆಂದರೂ 67.5 ಕೋಟಿ ರುಪಾಯಿ ಖರ್ಚು ಮಾಡಲೇಬೇಕು.

* ಪ್ರತಿ ಫ್ರಾಂಚೈಸಿ ಕನಿಷ್ಠ 18 ಆಟಗಾರರು, ಗರಿಷ್ಠ 25 ಆಟಗಾರರನ್ನು ಖರೀದಿಸಬಹುದು.

* ಆರ್‌ಸಿಬಿ 3 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. 22 ಆಟಗಾರರ ಖರೀದಿಗೆ  ಅವಕಾಶ.

ಅಂದ್ಹಾಗೆ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಂಡಿದ್ದರೆ, ಲೀಸ್ಟ್ ನಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ. 355 ಆಟಗಾರರು ಈ ವರೆಗೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿಯೇ ಇಲ್ಲ. ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಒಟ್ಟು 7 ಆಟಗಾರರು ಹರಾಜಿನಲ್ಲಿದ್ದಾರೆ. 48 ಆಟಗಾರರು 2 ಕೋಟಿ ರು.ಗೆ ತಮ್ಮ ಮೂಲಬೆಲೆಯನ್ನು  ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ. 34 ಆಟಗಾರರ ಮೂಲ ಬೆಲೆ 1 ಕೋಟಿ ರು. ಇದೆ ಎಂದು ಐಪಿಎಲ್ ಆಕ್ಷನ್ ಕಮಿಟಿ ತಿಳಿಸಿದೆ.

Spread the love

Related Articles

Leave a Reply

Your email address will not be published.

Back to top button
Flash News