BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜ್ಯ-ರಾಜಧಾನಿ

GANTE SHOCK TO DODDA GANESHA TEMPLE..! “ದೊಡ್ಡ ಗಣಪತಿ ದೇವಸ್ಥಾನ”ಕ್ಕೆ “ಗಂಟೆ” ಶಾಕ್..!? ದೇವಸ್ಥಾನದಲ್ಲಿ ಜೋರಾಗಿ ಗಂಟೆ ಹೊಡೆದರೆ ಕೇಸ್..

ಬೆಂಗಳೂರು:ಇದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಾ ಗೊತ್ತಿಲ್ಲ..ಆದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಟ್ಟಿರುವ ನೊಟೀಸ್ ಇದೀಗ  ಮತ್ತೊಂದು ವಿವಾದ-ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಾ ಎನಿಸುತ್ತಿದೆ.ಇದಕ್ಕೆ ಕಾರಣ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ಸಮೂಹ ದೇವಸ್ಥಾನಗಳಿಗೆ ನೀಡಿರುವ ನೊಟೀಸ್.

ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಕಾರ್ಯಕ್ರಮಗಳಾಗಲಿ ಅಥವಾ ಪೂಜಾರತಿ ಸನ್ನಿವೇಶದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದ ಮಾಡಬೇಕೆನ್ನುವ ನಿಯಮವಿದೆ.ದೊಡ್ಡ ಗಣಪತಿ ದೇವಸ್ಥಾನ ಈ ನಿಯಮ ಉಲ್ಲಂಘಿಸುತ್ತಿದೆ ಎಂದು ಅನೇಕರು ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ಬಸವನಗುಡಿ ಪೊಲೀಸ್ ಠಾಣೆ ಮೂಲಕ ದೊಡ್ಡ ಗಣಪತಿ ದೇವಸ್ಥಾನ ಸಮೂಹಕ್ಕೆ ನೋಟೀಸ್ ಜಾರಿ ಮಾಡಿಸಿದೆ.

ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಗಂಟೆ ಹೊಡೆಯದಂತೆ, ದೊಡ್ಡ ಗಣೇಶ ದೇವಸ್ಥಾನ ,ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ ,ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳಿಗೆ ಆದೇಶ ಹೊರಡಿಸಲಾಗಿದೆ.

ಸೂಚನೆಯ ಹೊರತಾಗಿಯೂ ಹೆಚ್ಚಿನ ಶಬ್ದ ಬರುವಂತೆ ಗಂಟೆ ಹೊಡೆದಲ್ಲಿ ಪ್ರಕರಣ ದಾಖಲಿಸಲಾಗುವುದು.ಢಮರುಗ, ಧ್ವನಿ ವರ್ಧಕ ಯಂತ್ರಗಳಿಂದ ಧ್ವನಿ ಹೊರಡಿಸಬಾರದು.ಹೆಚ್ಚಿನ ಶಬ್ದ ಕೇಳಿಬಂದಲ್ಲಿ Noise Pollution (regulation and control rules amended 2000 farmed under the Environment Pollution act 1986 ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News