ಬೆಂಗಳೂರು:ಏನ್ರಿ ಇದು ಅನ್ಯಾಯ..ಹೀಗಾ ಕಾರ್ಮಿಕರನ್ನು ಶೋಷಿಸುವುದು.. ಕಾರ್ಮಿಕರೆಂದ್ರೆ ಪಶುಗಳಂತೆ ಕಾಣ್ತಾರಾ.. ಸಾರಿಗೆ ಕಾರ್ಮಿಕರನ್ನು ಪರಿಪರಿಯಾಗಿ ಗೋಳೋಯ್ದುಕೊಳ್ಳುತ್ತಿರುವ ,ಕ್ರೌರ್ಯ ಮೆರೆಯುತ್ತಿರುವ ಅಧಿಕಾರಿಗಳ ಧೋರಣೆ ಹೀಗೆ ಸಾರ್ವಜನಿಕವಾಗಿ ಪ್ರಶ್ನೆಗೆ ಈಡಾಗುತ್ತಿದೆ..
ಸಾರಿಗೆ ಆಡಳಿತ ಮಂಡಳಿಯನ್ನು ಹೀಗೆ ಪ್ರಶ್ನಿಸೊಕ್ಕೆ ಕಾರಣಗಳೂ ಇವೆ.ಕಂಡಕ್ಷರ್ಸ್,.,,ಡ್ರೈವರ್ಸ್ ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ರಣಹದ್ದುಗಳಂತೆ ಕಾಯೋದೇ ತಪಾಸಣಾ ಸಿಬ್ಬಂದಿಯ ಕೆಲಸ ಎನ್ನುವಂತಾಗಿದೆ.ಮೇಲಾಧಿಕಾರಿಗಳು ಕೊಟ್ಟಿರೋ ಫೈನ್ ಟಾರ್ಗೆಟ್ ರೀಚ್ ಮಾಡುವ ಒಂದೇ ಒಂದು ಕಾರಣಕ್ಕೆ ತಪ್ಪೇ ಎಸಗದ ಕಂಡಕ್ಟರ್ಸ್-ಡ್ರೈವರ್ಸ್ ಗಳನ್ನು ತಪ್ಪಿಗೆ ಸಿಲುಕಿಸುವ ಅಮಾನವೀಯ ಹಾಗೂ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಚೆಕ್ಕಿಂಗ್ ಸಿಬ್ಬಂದಿ..
ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಚೆಕ್ಕಿಂಗ್ ಸಿಬ್ಬಂದಿಯ ಅಮಾನವೀಯತೆಯ ಮುಖಕ್ಕೆ ಕೈ ಗನ್ನಡಿ ಹಿಡಿದಂತಿರುವ ಎರಡು ಪ್ರಕರಣಗಳು ಸಿಕ್ಕಿವೆ.ಮೊದಲನೇ ಪ್ರಕರಣ ರಾಯಚೂರಿನಲ್ಲಿ ಹೆಚ್ಚೆಂದರೆ ಅರ್ಧ ಕೆಜಿ ಗಾತ್ರದ ಗ್ಯಾಸ್ ಸ್ಟೌವ್ ನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕನಿಗೆ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕಂಡಕ್ಟರ್ ಗೆ ನೊಟೀಸ್ ಕೊಡಲಾಗಿದೆ.ಎರಡನೇ ಪ್ರಕರಣ ಅರಸೀಕೆರೆ ಘಟಕದ ವ್ಯಾಪ್ತಿಯಲ್ಲಿ ನಡೆದಿದೆ.ಹೆಚ್ಚೆಂದರೆ ಒಂದು ಕೆಜಿ ತೂಗುವ ಹಲಸಿನ ಹಣ್ಣನ್ನು ಹೊತ್ತೊಯ್ಯುತ್ತಿದ್ದ ವಿಕಲಚೇತನ ಪ್ರಯಾಣಿಕನಿಂದ ಟಿಕೆಟ್ ನೀಡಿ ಹಣ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ನೊಟೀಸ್ ನೀಡಲಾಗಿದೆ.
ರಾಯಚೂರು 2ನೇ ಘಟಕದ ಕಂಡಕ್ಟರ್ ಗೋರಕನಾಥ್ ಎಂಬಾತ ಸುಮಾರು ಅರ್ಧ ಕೆಜಿ ತೂಕದ ಗ್ಯಾಸ್ ಸ್ಟೌವ್ ನೊಂದಿಗೆ ಪ್ರಯಾಣಿಕನೋರ್ವ ಬಸ್ ಹತ್ತಿದ್ದಾನೆ.ಅದಕ್ಕೇಕೆ ಟಿಕೆಟ್ ಇಶ್ಯೂ ಮಾಡಬೇಕೆನ್ನುವ ಕಾರಣಕ್ಕೆ ಸುಮ್ಮನಾಗಿದ್ದಾನೆ.ಅರ್ಧಕ್ಕೆ ಬಸ್ಸನ್ನೇರಿದ ತಪಾಸಣಾ ಸಿಬ್ಬಂದಿ ಗ್ಯಾಸ್ ಸ್ಟೌವ್ ಗೆ ಟಿಕೆಟ್ ಇಶ್ಯೂ ಮಾಡಬೇಕಿತ್ತು.ಅದನ್ನೇಕೆ ಮಾಡಿಲ್ಲ ಎಂದು ತಕ್ಷಣಕ್ಕೆ ಕಾರಣ ಕೇಳಿ ಶಿಸ್ತು ನೋಟಿಸ್ ನೀಡಿ ಕೆಳಕ್ಕಿಳಿದಿದ್ದಾರೆ.ಪರಿ ಪರಿಯಾಗಿ ಕೇಳಿಕೊಂಡರೂ ಕೇಳಿಲ್ಲ.
ಮತ್ತೊಂದು ಪ್ರಕರಣ ಹಾಸನ ಜಿಲ್ಲೆ ಅರಸೀಕೆರೆ ಘಟಕಕ್ಕೆ ಸಂಬಂಸಿದ್ದಾಗಿದೆ.ವಿಕಲಚೇತನನೊಬ್ಬ ಹೆಚ್ಚೆಂದರೆ ಒಂದು ಕೆಜಿಗೂ ಹೆಚ್ಚಿಲ್ಲದ ಹಲಸಿನ ಹಣ್ಣನ್ನು ಚೀಲದಲ್ಲಿ ಇಟ್ಕೊಂಡು ಬಸ್ಸನ್ನೇರಿದ್ದಾನೆ.ಕಂಡಕ್ಟರ್ ರಘು ಎಂಬಾತ ಪ್ರಯಾಣಿಕನಿಂದ ಟಿಕೆಟ್ ಗೆ ಮಾತ್ರ ಹಣ ಪಡೆದು ಸುಮ್ಮನಿದ್ದಾನೆ.ಅದೆಲ್ಲಿಂದ ಬಂದ್ರೋ ಗೊತ್ತಿಲ್ಲ ಚೆಕ್ಕಿಂಗ್ ಸಿಬ್ಬಂದಿ.ರಘು ಮಾಡಿದ್ದು ಘನಘೋರ ಕೃತ್ಯ ಎಂಬ ರೇಂಜ್ನಲ್ಲಿ ಆತನನ್ನು ತರಾಟೆಗೆ ತೆಗೆದುಕೊಂಡು ನೊಟೀಸ್ ಹರಿದು ಬಸ್ಸಿಂದ ಇಳಿದು.ಇವತ್ತಿನ ಟಾರ್ಗೆಟ್ ರೀಚಾಯ್ತೆಂದುಕೊಂಡು ನಿಟ್ಟುಸಿರು ಬಿಟ್ಟಿದ್ದಾರಂತೆ.
ನಿಯಮ ಏನಿದೆ ಗೊತ್ತಾ..? ಅಂದ್ಹಾಗೆ ಯಾವುದೆ ಬಸ್ ಇರಲಿ, ಪ್ರಯಾಣಿಕ 15-25 ಕೆಜಿಗಾತ್ರದವರೆಗಿನ ವಸ್ತುಗಳನ್ನು ಕೊಂಡೊಯ್ದರೆ ಅದಕ್ಕೆ ಪ್ರತ್ಯೇಕ ಟಿಕೆಟ್ ಇಶ್ಯೂ ಮಾಡಬೇಕೆನ್ನುವ ನಿಯಮಗಳೇನು ಇಲ್ಲ..15 ಕೆಜಿ ವರೆಗಿನ ವಸ್ತುಗಳಿಗೆ ಟಿಕೆಟ್ ನಿಂದ ವಿನಾಯ್ತಿ ಇದೆ ಎನ್ನುವ ಅಧಿಸೂಚನೆಯೇ ಸಾರಿಗೆ ನಿಗಮಗಳಿಂದ ಹೊರಬಿದ್ದಿದೆ ಅಂತೆ..7 ಕೆಜಿ ಹಾಸಿಗೆ,5 ಕೆಜಿ ಹಣ್ಣಿನ ಬುಟ್ಟಿ,9 ಕೆಜಿ ತೂಕದ ಹಣ್ಣುಗಳು,12 ಕೆಜಿ ಸೂಟ್ ಕೇಸ್ ಗಳನ್ನೊಳಗೊಂಡಂತೆ ಒಟ್ಟು 33 ಕೆಜಿ ಗಾತ್ರದ ವಸ್ತುಗಳನ್ನು ಕೊಂಡೊಯ್ಯಬಹುದು..ಹಾಗೆಯೇ 20 ಕೆಜಿ ಭಾರತ ತೂಕದ ಕೃಷಿ ಸಾಮಾಗ್ರಿಗಳನ್ನು ಕೊಂಡೊಯ್ಯಬಹುದು.ಇದಕ್ಕೆ ಯಾವುದೇ ರೀತಿಯ ಲಗೇಜ್ ದರವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತಿಲ್ಲ ಎನ್ನುವುದು ಕೂಡ ಆದೇಶದಲ್ಲಿ ಉಲ್ಲೇಖವಾಗಿದೆ.
ಈ ದೃಷ್ಟಿಯಲ್ಲಿ ನೋಡಿದ್ರೆ ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ನಿಗಮಗಳ ಸೂಚನೆ ಧಿಕ್ಕರಿಸಿರುವುದಷ್ಟೇ ಅಲ್ಲ,ಅನಗತ್ಯವಾಗಿ ಕಂಡಕ್ಟರ್ಸ್ ಗಳಿಗೆ ಮಾನಸಿಕ ಕಿರುಕುಳ,ಕರ್ತವ್ಯಕ್ಕೆ ಧಕ್ಕೆ ಹಾಗೂ ಶಿಸ್ತುಕ್ರಮದ ನೋಟಿಸ್ ನೀಡಿರುವ ಕಾರಣಕ್ಕೆ ಚೆಕ್ಕಿಂಗ್ ಸಿಬ್ಬಂದಿ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ.
-ಆನಂದ್.ಸಾರಿಗೆ ಯೂನಿಯನ್ ಮುಖಂಡ
ಅದೇನ್ ಕಿತ್ ದಬಾಕ್ತಿದ್ದಾರೋ ಸಚಿವ ಶ್ರೀರಾಮುಲು ಅವ್ರು.. ?!: ಸಾರಿಗೆ ನಿಗಮಗಳಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಕೆಳ ಹಂತದ ಕಾರ್ಮಿಕರು ಅಕ್ಷರಶಃ ನಲುಗಿ ಹೋಗುತ್ತಿದ್ದರೂ ಸಾರಿಗೆ ಸಚಿವ ಶ್ರೀರಾಮುಲು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.ಅವರ ಮೌನ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.ಶ್ರೀರಾಮಲು ಬಂದ್ಮೇಲೆ ಪರಿಸ್ತಿತಿ ಸುಧಾರಿಸ್ಬೋದು.ಅವರ ಗಟ್ಟಿಧ್ವನಿಯಿಂದ ಮೊಂಡು ಬಿದ್ದಿರುವ ಆಡಳಿತಶಾಹಿಗೆ ಚುರುಕು ಮುಟ್ಟಿಸುತ್ತಾರೆ.ಅವರ ಕಿರುಕುಳಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿರುವ ನಮಗೆ ನ್ಯಾಯ ಸಿಗುತ್ತೆ ಎಂದೆಲ್ಲಾ ಭಾವಿಸಿದ್ದ ಲಕ್ಷಾಂತರ ಕಾರ್ಮಿಕರಿಗೆ ತೀವ್ರ ನಿರಾಶೆಯಾಗೊಕ್ಕೆ ಹೆಚ್ಚು ದಿನಗಳೇನು ಬೇಕಾಗಿಲ್ಲವಲ್ಲ..ಸಂವೇದನೆಯೇ ಇಲ್ಲದ ಇಂಥಾ ಜನಪ್ರತಿನಿಧಿಯಿಂದ ಏನ್ ನಿರೀಕ್ಷಿಸುವುದು ನಮ್ಮ ಮೂರ್ಖತನ ಎಂಬ ಸಮರ್ಥನೆಗೆ ಕಾರ್ಮಿಕರು ಬಂದೋಗಿದ್ದಾರೆ.
ಬಹುತೇಕ ಕಂಟ್ರೋಲ್ ತಪ್ಪಿರುವ ಆಡಳಿತಶಾಹಿಯನ್ನು ಕಂಟ್ರೋಲ್ ಗೆ ತರುವುದರಲ್ಲಿ ಸಚಿವ ಶ್ರಿರಾಮುಲು ಫೇಲ್ಯೂರ್ ಆಗಿದ್ದಾರಾ ಎನ್ನುವಂಥ ಪ್ರಶ್ನೆ ಹುಟ್ಟುವಂಥ ಸನ್ನಿವೇಶವನ್ನು ಶ್ರೀರಾಮಲು ಅವರೇ ತಂದುಕೊಳ್ಳುತ್ತಿದ್ದಾರೆ.ಅವರು ಸಚಿವರಾಗಿ ಬಂದ್ಮೇಲೆ ಸಂಭವಿಸಿದಂಥ ಆಡಳಿತಶಾಹಿಯ ದೌರ್ಜನ್ಯದ ಸಾಕಷ್ಟು ಘಟನೆಗಳನ್ನು ಟ್ಯಾಕಲ್ ಮಾಡುವಲ್ಲಿಯೂ ಸಚಿವರು ಸೋತಿರುವುದು ಎದ್ದು ಕಾಣುತ್ತದೆ.ಅವರು ಎಲ್ಲಿವರೆಗೆ ಮೈ ಕೊಡವಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಕೊಬ್ಬಿ ಹೋಗಿರುವ ಆಡಳಿತಶಾಹಿಯೂ ಕ್ಯಾರೆ ಎನ್ನೊಲ್ಲ..