BreakingScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜ್ಯ-ರಾಜಧಾನಿ

BE AWARE OF MOBILE WHILE RIDING…ವಾಹನ ಸವಾರರ ಬೀ ಕೇರ್ ಫುಲ್.. ಮೊಬೈಲ್ ರೈಡ್ ಗೆ ಕಾದಿದೆ ಭಾರೀ ದಂಡ..

ಬೆಂಗಳೂರು.ವಾಹನದಲ್ಲಿ ಚಲಿಸುವಾಗ ಮೊಬೈಲ್ ಬಳಸುವಂತದ್ದು ಸರ್ವೇ ಸಾಮಾನ್ಯವಾಗಿದೆ. ಇದು ಅಕ್ಷಮ್ಯ, ಕಾನೂನು ಪ್ರಕಾರ ಅಪರಾಧ ಎನ್ನುವ ಮಾಹಿತಿ ಇದ್ದಾಗ್ಯೂ ಆ ಭಯವಿಲ್ಲದೆ ವಾಹನ ಸವಾರರು ಮೊಬೈಲ್ ಅನ್ನು ಬಳಸುವುದು ಕಾಮನ್ ಆಗೋಗಿದೆ.

ಆದ್ರೆ ಆಡುಗೋಡಿ ವ್ಯಾಪ್ತಿಯಲ್ಲಿ ಮೊಬೈಲ್ ಗಳನ್ನು ಇಟ್ಟುಕೊಂಡು ವಾಹನ ಚಲಾಯಿಸುವ ಧೈರ್ಯ ವಾಹನ ಸವಾರರು ಮಾಡಿದ್ರೆ ಜೇಬು ಸುಡೋದು ಗ್ಯಾರಂಟಿ.ಏಕೆಂದರೆ ಸಂಚಾರಿ ಪೊಲೀಸರು ಕಟ್ಟುನಿಟ್ಟಾಗಿ ಅಂತಹವರ ವಿರುದ್ಧ ದಂಡ ಪ್ರಹಾರ ಮಾಡಲು ಮುಂದಾಗಿದ್ದಾರೆ ಅದು ಕೂಡ ಸಾವಿರಗಳಲ್ಲಿ.

ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದೊಂದು ಫಲಕ ಎಲ್ಲೆಡೆ ಕಾಣಿಸುತ್ತಿದೆ. ಮೊದಲ ಬಾರಿಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದಲ್ಲಿ ಸಂಚರಿಸುವಂಥವರು ಮೊಬೈಲನ್ನು ಬಳಸಿದರೆ ಅವರಿಗೆ 1,500ದಂಡವನ್ನು ವಿಧಿಸಲಾಗುವುದು.  4 ಚಕ್ರ ವಾಹನ ಸಂಚರಿಸಿದರೆ 3,000 ಹಾಗೂ ಭಾರೀ ವಾಹನಗಳ ಚಾಲಕರಿಗೆ 5,000 ದಂಡ ವಿಧಿಸುವುದಾಗಿ ಬೋರ್ಡ್ ಗಳಲ್ಲಿ ಉಲ್ಲೇಖವಾಗಿದೆ.

ಇದು ಮೊದಲನೆಯ ಬಾರಿ ನಿಯಮ ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಪ್ರಮಾಣ ಇದನ್ನು ನಿರ್ಲಕ್ಷಿಸಿ ಎರಡನೆಯ ಬಾರಿ ರೂಲ್ಸ್ ಗಳನ್ನು ಫಾಲೋ ಮಾಡದಿದ್ದರೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ನಾಲ್ಕು ಚಕ್ರ ಹಾಗೂ ಭಾರೀ ವಾಹನ  ಸವಾರರಿಗೆ 10,000 ದಂಡ ವಿಧಿಸುವುದಾಗಿ ಡಿಸ್ ಪ್ಲೇ ಮಾಡಲಾಗಿದೆ‌. ಅಂದ್ಹಾಗೆ ಈ ನಿಯಮಗಳು ನಿನ್ನೆಯಿಂದಲೇ ಜಾರಿಯಾಗಿದೆ ಅಂತೆ.‌ಸೋ ಬಿ‌ ಕೇರ್ ಫುಲ್..

Spread the love

Related Articles

Leave a Reply

Your email address will not be published.

Back to top button
Flash News