BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

HISTORIACAL ACB RAID ON BBMP:BDA ಬೆನ್ನಲ್ಲೇ BBMP ಮೇಲೆ ACB “ಬೃಹತ್” ದಾಳಿ:27 ಕಚೇರಿಗಳ ಮೇಲೆ 200 ಸಿಬ್ಬಂದಿಯ ತಂಡಗಳಿಂದ ಎಸಿಬಿ ದಾಳಿ..

ಬೆಂಗಳೂರು: ಬಿಡಿಎ ನಲ್ಲಿ ವ್ಯಾಪಕ ಅಕ್ರಮ-ಭ್ರಷ್ಟಾಚಾರ ಬಯಲಿಗೆಳೆದ ಮೇಲೆ ಎಸಿಬಿ ದೃಷ್ಟಿಇದೀಗ ಬಿಬಿಎಂಪಿ ಮೇಲೆ ನೆಟ್ಟಂತಿದೆ.ಈ ಹಿನ್ನಲೆಯಲ್ಲಿಯೇ ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲೂ ಎಸಿಬಿ ವಿವಿಧ ತಂಡಗಳಾಗಿ  ದಾಳಿ ಮಾಡಿದೆ.

ಬಿಬಿಎಂಪಿ ಕೇಂದ್ರ ಕಚೇರಿಯ ಮೇಲೂ ದಾಳಿ ನಡೆದಿದ್ದು,ಭ್ರಷ್ಟಾಚಾರದ ಗೂಡೆಂದೇ ಪರಿಗಣಿಸಲ್ಪಡುವ  ನಗರ ಯೋಜನೆ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ವ್ಯಾಪಕ ಗೋಲ್ಮಾಲ್ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಸರಣಿ  ದಾಳಿ ನಡೆಯುತ್ತಿದ್ದು, ಏಕಕಾಲಕ್ಕೆಅನೇಕ ತಂಡಗಳಾಗಿ ಎಸಿಬಿ ತನ್ನ ದಾಳಿ ಮುಂದುವರೆಸಿದೆ. ದಾಳಿ ವೇಳೆ ಅಕ್ರಮಗಳಿಗೆ ಸಂಬಂಧಿಸಿದ ಅನೇಕ ಕಡತಗಳು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.ಬಿಬಿಎಂಪಿ ಮೇಲೆ ಏಕಕಾಲಕ್ಕೆ ನಡೆದ ಬೃಹತ್ ರೇಡ್ ಇದಾಗಿದೆ.ಅಂದ್ಹಾಗೆ 200ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯ ತಂಡಗಳಲ್ಲಿದೆ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News