BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿಸಿನೆಮಾ ಹಂಗಾಮ

“GOLDEN QUEEN” AMULYA DELIVERS TWINS.. “ಅವಳಿ ಮಕ್ಕಳಿ”ಗೆ ಜನ್ಮ ನೀಡಿದ ನಟಿ ಅಮೂಲ್ಯ-ತಾಯಿ-ಮಗು ಆರೋಗ್ಯದಿಂದ ಇದ್ದಾರೆ ಎಂದು ಪೋಸ್ಟ ಹಾಕಿದ ಪತಿ ಜಗದೀಶ್..

ಬೆಂಗಳೂರು:ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಎರಡು ಗಂಡು ಮಕ್ಕಳಿಗೆ ಅಮೂಲ್ಯ ಜನ್ಮ ನೀಡಿದ್ದು, ತಾಯಿ-ಮಕ್ಕಳಿಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಅಮೂಲ್ಯ ಮಾವ ಹಾಗೂ ಬಿಜೆಪಿ ಮುಖಂಡ ರಾಮಚಂದ್ರ ತಿಳಿಸಿದ್ದಾರೆ.

ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದೆ ಭಾರೀ ಸುದ್ದಿಯಾಗಿತ್ತು.ಇನ್ನು ಕೆಲವು ಸುದ್ದಿ ಸಂಸ್ಥೆಗಳು ಅಮೂಲ್ಯ ಜನ್ಮ ನೀಡುವುದು ತ್ರಿವಳಿ ಮಕ್ಕಳಿಗೆ ಎಂದು ಭವಿಷ್ಯ ನುಡಿದಿದ್ದವು.

ಅಮೂಲ್ಯ ಪ್ರಗ್ನೆಂಟ್ ಆಗಿರುವ ಸುದ್ದಿಯೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಟ್ರೋಲಿಗರ ಮಿಶ್ರಪ್ರತಿಕ್ರಿಯೆಗೂ ಕಾರಣವಾಗಿತ್ತು.ಅಮೂಲ್ಯ ತಾಯಿಯಾದ ವಿಚಾರ ಚಿತ್ರರಂಗದಲ್ಲಿ ಯಾವೊಬ್ಬ ನಟಿ ತಾಯಿಯಾದಷ್ಟು  ಪ್ರಮಾಣದಲ್ಲಿ ಸುದ್ದಿಯಾಗಿರಲಿಲ್ಲ.ಇದಕ್ಕೆ ಖುದ್ದು ರಾಮಚಂದ್ರ ಅವರ ಕುಟುಂಬವೇ ಮುಜುಗರ ಅನುಭವಿಸುವಂತಾಗಿತ್ತು..

ಅಂದ್ಹಾಗೆ ಮನೆಯಲ್ಲಿ ಹೊಸ ಅತಿಥಿಗಳ ಆಗಮನಕ್ಕೆ ಕಾರಣವಾಗಿರುವ ಅವಳಿ ಮಕ್ಕಳ ಜನನದ ಸುದ್ದಿಯನ್ನು ಅಮೂಲ್ಯ ಪತಿ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೊಂದು ವಾರದೊಳಗೆ ಅಮೂಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ.

Spread the love

Related Articles

Leave a Reply

Your email address will not be published.

Back to top button
Flash News