ತುಂಗಾತೀರದ ನೆಲೆಸಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 401ನೇ ಪಟ್ಟಾಭಿಷೇಕ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಮಠದ ಪ್ರಾಂಗಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜೆ ಹಾಗೂ ಪಾದುಕೆಗಳಿಗೆ ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ.
ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ರಾಘವೇಂದ್ರ ಸ್ವಾಮಿಗಳ ಸ್ವರ್ಣ ಪಾದುಕೆಗಳಿಗೆ ನಾಣ್ಯಗಳು, ಮುತ್ತು, ರತ್ನಗಳಿಂದ ಅಭಿಷೇ ನೇರವೇರಿಸಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆ ಕೈಂಕಾರ್ಯಗಳು ಮಂತ್ರ-ಘೋಷಗಳೊಂದಿಗೆ ನಡೆಸಲಾಗುತ್ತಿದೆ.
ಪಟ್ಟಾಭಿಷೇಕ ಮಹೋತ್ಸವ ನೋಡಲು ದೇಶದ ನಾನಾ ಮೂಲೆಗಳಿಂದ ಭಕ್ತರು ಆಗನಿಸುತ್ತಿದ್ದು, ಸಾವಿರಾರು ಭಕ್ತರು ಮಹೋತ್ಸವ ಭಾಗವಹಿಸಿದ್ದರು. ವಿಶೇಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಪಾಲ್ಗೊಂಡಿದರು. ಇಂದಿನವರೆಗೆ ಆರು ದಿನಗಳ ರಾಯರ ಪಟ್ಟಾಭಿಷೇಕ, ವರ್ಧಂತಿ ಉತ್ಸವ ನಡೆಯಲಿದೆ. ಈ ವೇಳೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಲಿದ್ದು, ಹಲವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.