BreakingcricketTop News

ರಿಷಭ್ ಪಂತ್ ಕೈ ತಪ್ಪಿದ ಶತಕ: ಭಾರತ 6 ವಿಕೆಟ್ ಗೆ 357 ರನ್! IND v SL: Pant, Vihari help India dominate Sri Lanka in Kohli’s 100th Test

ಶತಕ ವಂಚಿತ ರಿಷಭ್ ಪಂತ್ ಹಾಗೂ ಹನುಮ ವಿಹಾರಿ ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಿನದ ಗೌರವ ಪಡೆದಿದೆ.

ಮೊಹಾಲಿಯಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿದೆ.

ನಾಯಕ ರೋಹಿತ್ ಶರ್ಮ (29) ಮತ್ತು ಮಯಾಂಕ್ ಅಗರ್ ವಾಲ್ (33) ಮೊದಲ ವಿಕೆಟ್ ಗೆ 52 ರನ್ ಪೇರಿಸಿ ಉತ್ತಮ ಆರಂಭ ನೀಡಿದ ಬೆನ್ನಲ್ಲೇ ನಿರ್ಗಮಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಪೂಜಾರ ಜಾಗವನ್ನು ಮೊದಲ ಬಾರಿ ತುಂಬಿದ ಹನುಮ ವಿಹಾರಿ ಅರ್ಧಶತಕ ಗಳಿಸಿ ಗಮನ ಸೆಳೆದರು.

ಹನುಮ ವಿಹಾರಿ ಮತ್ತು 100ನೇ ಪಂದ್ಯವಾಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರನೇ ವಿಕೆಟ್ ಗೆ 90 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಕೊಹ್ಲಿ 45 ರನ್ ಬಾರಿಸಿ ನಿರ್ಗಮಿಸಿದರೆ, ಹನುಮ ವಿಹಾರಿ 128 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 58 ರನ್ ಗಳಿಸಿ ಔಟಾದರು.

ಟಿ-20 ಕ್ರಿಕೆಟ್ ನಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ (27) ನಿರಾಸೆ ಮೂಡಿಸಿದರು. ಈ ಹಂತದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರಿಷಭ್ ಪಂತ್ 97 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 96 ರನ್ ಗಳಿಸಿದ್ದಾಗ ಲಕ್ಮಲ್ ಎಸೆತದಲ್ಲಿ ಬೌಲ್ಡ್ ಆಗಿ 4 ರನ್ ಗಳಿಂದ ಶತಕ ವಂಚಿತರಾದರು. ಇದಕ್ಕೂ ಮುನ್ನ ರವೀಂದ್ರ ಜಡೇಜಾ (ಅಜೇಯ 45) ಜೊತೆ 96 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು 300ರ ಗಡಿ ದಾಟಿಸಿದರು.

Spread the love

Related Articles

Leave a Reply

Your email address will not be published.

Back to top button
Flash News