BreakingTop Newsಜಿಲ್ಲೆ

ಗಂಡ ಹೆಂಡಿರ ಜಗಳಕ್ಕೆ ಗ್ರಾಮದ ಮುಖಂಡ ಬಲಿ husband-wife husband fight, leader killed

ಗಂಡ ಹೆಂಡಿರ ಜಗಳದಲ್ಲಿ ಗ್ರಾಮದ ಮುಖಂಡ ಬಲಿಯಾದ ಘಟನೆ ಗದಗ ಜಿಲ್ಲೆಯ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಸೋಮಲಪ್ಪ ನಾಯಕ್ (55) ಕೊಲೆಯಾಗಿದ್ದು, ಕೊಲೆ ಮಾಡಿದ ವಿಷ್ಣು ನಾಯಕ್ (42) ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷದಿಂದ ವಿಷ್ಣು ನಾಯಕ್ ನಿಂದ ದೂರವಾಗಿದ್ದ ಪತ್ನಿ ಸುಮಿತ್ರಾ ಜೊತೆ ರಾಜಿ ಸಂಧಾನ ಸರಿಯಾಗಿ ಮಾಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ವಿಷ್ಣು ನಾಯಕ್, ಸೋಮಲಪ್ಪ ಅವರನ್ನು ಇರಿದು ಕೊಲೆ ಮಾಡಿದ್ದಾನೆ.

ದಂಪತಿಗೆ 4 ಮಕ್ಕಳಿದ್ದು, ಗಂಡನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಹಾವೇರಿಯ ತವರು ಮನೆ ಸೇರಿದ್ದರು. ರಾಜೀ ಪಂಚಾಯ್ತಿ ಮಾಡಿ ದಂಪತಿ ಸೇರಿಸಲು ಊರಿನ ಮುಖಂಡರು ಸಭೆ ಸೇರಿಸಿದ್ದರು.

ಊರ ಜನರ ಮಾತು ಕೇಳದೆ ತವರು ಮನೆಯಲ್ಲೇ ಸುಮಿತ್ರಾ ಉಳಿದಿದ್ದರಿಂದ ಸಿಟ್ಟಾಗಿದ್ದ ವಿಷ್ಣು ನಿನ್ನೆ ಗ್ರಾಮದ ಉತ್ಸವದ ಬಗ್ಗೆ ಮೀಟಿಂಗ್ ಸೇರಿದ್ದ ವೇಳೆ ಏಕಾಏಕಿ ಗಲಾಟೆ ಆರಂಭಿಸಿ ಸೋಮಲಪ್ಪ ಅವರಿಗೆ ಚಾಕು ಇರಿದು ಪರಾರಿಯಾಗಿದ್ದ.

ಇರಿತದಿಂದ ಗಾಯಗೊಂಡಿದ್ದ ಸೋಮಲಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಚಾಕು ಇರಿದು ಪೊಲೀಸ್ ಸ್ಟೇಷನ್ ಗೆ ವಿಷ್ಣು ಶರಣಾಗಿದ್ದ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News