ಬೆಂಗಳೂರು..ನಮ್ಮದು..ಸಂತುಲಿತ..ಜನಸ್ನೇಹಿ..ಜನಪರ ಬಜೆಟ್ ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬೊಮ್ಮಾಯಿ ಸರ್ಕಾರದ ಹಣೇಬರಹ ಏನನ್ನೋದಕ್ಕೆ ಬಜೆಟ್ ಕೈ ಗನ್ನಡಿಹಿಡಿದಂತಿದೆ.
ಕೊರೋನಾ ಹೊಡೆತಕ್ಕೆ ಸಿಲುಕಿ ಜರ್ಝರಿತವಾಗಿರುವ ಖಾಸಗಿ ಸಾರಿಗೆಗೆ ಬಜೆಟ್ ನಲ್ಲಿ ಯಾವುದೇ ಕೊಡುಗೆ ನೀಡಿಲ್ಲವೆಂದು ಹಿರಿಯ ವಕೀಲ ಹಾಗೂ ಖಾಸಗಿ ಸಾರಿಗೆ ಒಕ್ಕೂಟದ ಮುಖಂಡ ನಟರಾಜ ಶರ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ಬಾರಿಯ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದೆವು.ಆದರೆ ನಮ್ಮನ್ನು ನಿರಾಶೆಗೊಳಿಸಲಾಗಿದೆ.
ಆಡಳಿತಾತ್ಮಕ ವಿಷಯವನ್ನು ಬಜೆಟ್ ನಲ್ಲಿ ಸೇರಿಸಿ, ಅದನ್ನೇ ಕೊಡುಗೆ ಎಂದು ಘೋಷಿಸಿದ ಮುಖ್ಯಮಂತ್ರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಉದ್ದಿಮೆ ಡೀಸಲ್ ದರ ಹೆಚ್ಚಳ ಮತ್ತು ಮಹಾಮಾರಿ ಕೋವಿದ್ ನಿಂದ ತತ್ತರಿಸಿಹೋಗಿದೆ, ಕೋಟಿ ಕೋಟಿ ರೂಗಳನ್ನು ಹೂಡಿಕೆ ಮಾಡಿ, ಮನೆಗಳನ್ನು ಅಡ ಇಟ್ಟು ಸಾಲ ಪಡೆದ ಮಾಲೀಕರು ಸಾಲ ಕಟ್ಟಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮತ್ತು ರಸ್ತೆಗೆ ಬರುತ್ತಿರುವ ಈ ಉದ್ದಿಮೆಗೆ ಮಾನ್ಯ ಮುಖ್ಯ ಮಂತ್ರಿಗಳು ಪೂರ್ವ ಭಾವಿ ಸಭೆ ಕರೆದು ಚರ್ಚೆ ನಡೆಸಿದ ನಂತರವೂ ಯಾವುದೇ ರೀತಿಯ ಬೆಂಬಲ ನೀಡದೆ ಇರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಲ್ಲಿ ಮುಂಗಡ ತೆರಿಗೆ ಕಟ್ಟಲು ಇದ್ದ 15 ದಿನಗಳ ಗ್ರೇಸ್ ದಿನಗಳನ್ನು 30 ದಿನಕ್ಕೆ ಏರಿಸಿದ್ದು ಮತ್ತು 3 ತಿಂಗಳ ಮುಂಗಡ ತೆರಿಗೆಯನ್ನು ಪ್ರತಿ ತಿಂಗಳು ಕಟ್ಟುವ ವ್ಯವಸ್ಥೆಯು ಆಡಳಿತಾತ್ಮಕ ವ್ಯವಸ್ಥೆ ಆಗಿದೆಯೇ ಹೊರತು ಇದರಿಂದ ಸರಕಾರದ ಆಯ ವ್ಯವಗಳಿಗೆ ಯಾವುದೇ ವ್ಯತ್ಯಾಸ ಆಗಿರುವುದಿಲ್ಲ ಮತ್ತು ತಮ್ಮ ಬೊಕ್ಕಸದಿಂದ ಯಾವುದೇ ಕೊಡುಗೆಯನ್ನು ನೀಡಿರುವುದಿಲ್ಲ ಎಂದಿದ್ದಾರೆ.
ಕಳೆದ 6 ತಿಂಗಳಿಂದ ಮೇಲೆ ತಿಳಿಸಲಾದ ಸೌಲಭ್ಯ ಹಂತ ಹಂತವಾಗಿ ಫೈಲ್ ಬಂದಿದ್ದು ಇದನ್ನು ನಾವು ಹಿಂಬಾಲಿಸಿಕೊಂಡು ಬಂದಿದ್ದೇವೆ.
ಈ ರೀತಿ ಆಡಳಿತಾತ್ಮಕ ವಿಷಯವನ್ನು ಬಜೆಟ್ ನಲ್ಲಿ ಪ್ರಕಟಿಸುವ ಮೂಲಕ ಮುಖ್ಯ ಮಂತ್ರಿಗಳು ಬಜೆಟ್ ನ ಸೂಕ್ಷ್ಮತೆಯನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನಟರಾಜ ಶರ್ಮ ಬೇಸರ ವ್ಯಕ್ತಪಡಿಸಿದ್ದಾರೆ.