cricketTop News

ರಣಜಿ ಟ್ರೋಫಿ: ಪುದುಚೇರಿ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಜಯ Karnataka won by an innings and 20 runs

ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಇನಿಂಗ್ಸ್ ಹಾಗೂ 20 ರನ್ ಗಳ ಸುಲಭ ಜಯ ದಾಖಲಿಸಿದೆ.

ಚೆನ್ನೈನ್ ಎಸ್ ಎನ್ ಎನ್ ಕಾಲೇಜ್ ಮೈದಾನದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಗೆ 455 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಪುದುಚೇರಿ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 241 ರನ್ ಗಳಿಗೆ ಕಟ್ಟಿಹಾಕಿದ ಕರ್ನಾಟಕದ ತಂಡ, ಫಾಲೋಆನ್ ಹೇರಿದ್ದು, ಎರಡನೇ ಇನಿಂಗ್ಸ್​ ನಲ್ಲಿ 194 ರನ್ ಗಳಿಗೆ ಆಲೌಟ್ ಮಾಡಿ ಜಯಭೇರಿ ಬಾರಿಸಿತು.

ಕರ್ನಾಟಕದ ಪರ ಮೊದಲ ಇನಿಂಗ್ಸ್ ನಲ್ಲಿ ದೇವದತ್ ಪಡಿಕ್ಕಲ್ 178 ರನ್ ಸಿಡಿಸಿದರೆ, ನಾಯಕ ಮನೀಷ್ ಪಾಂಡೆ 107 ರನ್ ಗಳಿಸಿದರು. ಕೆ. ಸಿದ್ದಾರ್ಥ್ 85 ರನ್ ಗಳಿಸಿದರು.

ಫಾಲೋಆನ್ ಗೆ ಒಳಗಾಗಿದ್ದ ಪುದುಚೇರಿ ತಂಡ ಎರಡನೇ ಇನಿಂಗ್ಸ್ ನಲ್ಲಿ ಕೇವಲ 194 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ 3 ಹಾಗೂ ವಿಧ್ಯಾದರ್ ಪಾಟೀಲ ಮತ್ತು ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದುಕೊಂಡರು. ದೇವದತ್ತ ಪಡಿಕ್ಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Spread the love

Related Articles

Leave a Reply

Your email address will not be published.

Back to top button
Flash News