60 ವರ್ಷದ ಹಿಂದಿನ ದಾಖಲೆ ಮುರಿದ ರವೀಂದ್ರ ಜಡೇಜಾ! Ravindra Jadeja Becomes Sixth Cricketer To Register 150-Plus Score, Five Wickets In Same Test

60 ವರ್ಷದ ಹಿಂದಿನ ದಾಖಲೆ ಮುರಿದ ರವೀಂದ್ರ ಜಡೇಜಾ!

0

ಆಲ್ ರೌಂಡರ್ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 150ಕ್ಕೂ ಅಧಿಕ ರನ್ ಹಾಗೂ 9 ವಿಕೆಟ್ ಪಡೆದ ವಿಶ್ವದ 6ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಯಾದ ಜಡೇಜಾ ಮೊದಲ ಇನಿಂಗ್ಸ್ ನಲ್ಲಿ 175 ರನ್ ಗಳಿಸುವ ಮೂಲಕ 7ನೇ ಕ್ರಮಾಂಕದಲ್ಲಿ 163 ರನ್ ಗಳಿಸಿದ್ದ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.

ಮೊದಲ ಇನಿಂಗ್ಸ್ ನಲ್ಲಿ 175 ರನ್ ಹಾಗೂ 5 ವಿಕೆಟ್ ಪಡೆದಿದ್ದ ಜಡೇಜಾ ಎರಡನೇ ಇನಿಂಗ್ಸ್ ನಲ್ಲೂ 4 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಒಂದು ಪಂದ್ಯದಲ್ಲಿ 150ಕ್ಕಿಂತ ಅಧಿಕ ರನ್ ಹಾಗೂ 5ಕ್ಕಿಂತ ಹೆಚ್ಚು ವಿಕೆಟ್ ಪಡೆದ 6ನೇ ಆಟಗಾರ ಎನಿಸಿಕೊಂಡರು.

ಟೆಸ್ಟ್ ಕ್ರಿಕೆಟ್ ನಲ್ಲಿ ಜಡೇಜಾ ಈ ಸಾಧನೆ ಮಾಡಿದ 3ನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಅಲ್ಲದೇ 60 ವರ್ಷಗಳ ನಂತರ ಈ ಸಾಧನೆ ಮಾಡಿದ ಭಾರತೀಯ ಎಂಬ ಸಾಧನೆ ಮಾಡಿದರು. 1962ರಲ್ಲಿ ಪಾಲಿ ಉಮ್ರಿಗರ್ ಈ ಸಾಧನೆ ಮಾಡಿದ್ದರು.

Spread the love
Leave A Reply

Your email address will not be published.

Flash News