Breakingಕ್ರೀಡೆ/ವಿಶ್ಲೇಷಣೆ

ಅರಣ್ಯ ಇಲಾಖೆ ಅಧಿಕಾರಿ ದೌರ್ಜನ್ಯ: ವಿಷ ಸೇವಿಸಿ ರೈತ ಮಹಿಳೆಯರು ಆತ್ಮಹತ್ಯೆಗೆ ಯತ್ನ forest officer torucher, womens try to sucde

ಅರಣ್ಯ ಇಲಾಖೆ ಅಧಿಕಾರಿಯ ದೌರ್ಜನ್ಯದಿಂದ ಬೇಸತ್ತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ.

ಇದು ನಮ್ಮ ಭೂಮಿ ನಮ್ಮ ಹಕ್ಕು ಎಂದು ಸಾಗುವಳಿದಾರರು ಹಕ್ಕು ಕೇಳಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸರೋಜವ್ವ ಶಾಂತಗೌಡ ಪಾಟೀಲ ಮತ್ತು ನಿರ್ಮಲಾ ರಾಮನಗೌಡ ಪಾಟೀಲ ಅಸ್ವಸ್ಥರಾಗಿದ್ದರೂ ಅವರನ್ನು ಆಸ್ಪತ್ರೆಗೆ ಸಾಗಿಸದೇ ಅಧಿಕಾರಿಗಳ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಹೊಲ ಹೋದ ಮೇಲೆ ಬದುಕಿ ಎನೂ ಪ್ರಯೋಜನ ಎಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಆಗ್ರಹವಾಗಿದೆ.

ಸರ್ಕಾರ ಬಗರ್ ಬುಕುಂ ಸಾಗುವಳಿದಾರರ ರಕ್ಷಣೆಗೆ ಬಾರದೇ ಇದ್ದರೆ ಉಗ್ರ ಹೋರಾಟ ಅನಿವಾರ್ಯ ಎನ್ನುವುದು ಬಗರ್ ಹುಕುಂ ಸಾಗುವಳಿದಾರರ ಆಗ್ರಹವಾಗಿದೆ. ರೈತರ ಮೇಲೆ ದೌರ್ಜನ್ಯವೆಸಗುತ್ತಿರುವ ತಾಲೂಕು ಅರಣ್ಯ ಅಧಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News