Breakingರಾಜ್ಯ-ರಾಜಧಾನಿ

ನಿಮಗೆ ಮಾನ ಮರ್ಯಾದೆ ಇಲ್ವಾ, ಸರಕಾರ ಸಂಬಳ ಕೊಡಲ್ವಾ: ಎಚ್.ಡಿ. ಕುಮಾರಸ್ವಾಮಿ ಗರಂ

ಐಎಂಎ ಕೇಸ್ ಮೂಲಕ ವಾಹನ ಸವಾರರಿಂದ ದಂಡ ವಸೂಲಿ ಮಾಡುತ್ತಿರುವ ಪೊಲೀಸರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದ ಕೃಷಿ ಮಾರುಕಟ್ಟೆ ಎದುರು ಪೊಲೀಸರು ದಂಡ ಹಾಕುತ್ತಿರುವುದನ್ನು ಗಮನಿಸಿದ ಅವರು, ಜನರ ರಕ್ಷಣೆ ಕೊಡಲು ಪೋಷ್ಟಿಂಗ್ ಹಾಕಿದ್ದಾರೋ? ಇಲ್ಲ ಜನರಿಗೆ ತೊಂದರೆ ಕೊಡಲು ಹಾಕಿದ್ದಾರೋ ಎಂದು ಪ್ರಶ್ನಿಸಿದರು.

ನಿನ್ನೆ ಮಧ್ಯಾಹ್ನ 3 ಗಂಟೆಯಲ್ಲಿ ದುಡ್ಡು ಹೊಡೆದುಕೊಂಡು ಹೋಗಿದ್ದಾರೆ. ಅವರನ್ನು ಹಿಡಿಯಲು ನಿಮ್ಮಿಂದ ಆಗಿಲ್ಲ. ಆದರೆ ಹಳ್ಳಿ ಜನಕ್ಕೆ ತೊಂದರೆ ಕೊಡುತ್ತೀರಾ ನೀವು? ಎಂದು ಪೊಲೀಸರ ವಿರುದ್ಧ ಗರಂ ಎಚ್‌ಡಿಕೆ ಗರಂ ಆದರು.

ನೀವು ಇದೇ ಕೆಲಸಕ್ಕೆ ನಿಂತಿದ್ದರೆ ನಾನು ಅಸೆಂಬ್ಲಿಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ನಿಮಗೆ ಇದು ಎರಡನೇ ಬಾರಿ ಹೇಳುತ್ತಿರುವುದು. 500, 1000 ಯಾರಪ್ಪನ ಮನೆ ದುಡ್ಡು ನಿಮಗೆ ದಂಡ ಕಟ್ಟೋಕೆ? ಹೆರಿಗೆಗೆ ಹೋಗುವ ಹೆಣ್ಣು ಮಕ್ಕಳ ರಸ್ತೆಯಲ್ಲಿ ಅಡ್ಡ ಹಾಕುತ್ತೀರಾ? ಆ ಕಾನ್ಸ್‌ಟೇಬಲ್ ಗಳಿಗೆ ಹೇಳಿ ಅವರಿಗೆ ತಿಂದಿದ್ದು ಹೆಚ್ಚಾಗಿದೆ ಅಂತ ಎಂದು ಕುಮಾರಸ್ವಾಮಿ ಗುಡುಗಿದರು.

ಕಾಲೇಜು ಹುಡುಗರ ಬಳಿ ಜೇಬಿಗೆ ಕೈ ಹಾಕಿ ಹಣ ತೆಗೆದುಕೊಳ್ಳುತ್ತಾನೆ ಎಂದು ಸ್ಥಳೀಯರು ಆರೋಪಿಸಿದಾಗ ನಿಮಗೆ ಮಾನ ಮಾರ್ಯಾದೆ ಇಲ್ವಾ? ಸರ್ಕಾರ ಸಂಬಳ ಬರಲ್ವಾ ನಿಮಗೆ? ಎಂದು ಅವರು ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published.

Back to top button
Flash News