ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಪಂಚರಾಜ್ಯಗಳಲ್ಲಿ 7 ಹಂತಗಳ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಭಾರತ್ ವರ್ಷ್ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಮರಳಿ ಅಧಿಕಾರ ಹಿಡಿಯಲಿದ್ದರೆ, ಪಂಜಾಬ್ ನಲ್ಲಿ ಆಡಳಿತರೂಢ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿಯಲಿದ್ದು, ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಚುನಾವಣೋತ್ತರ ಸಮೀಕ್ಷೆಗಳ ವಿವರ
ಉತ್ತರ ಪ್ರದೇಶ
ಒಟ್ಟು ಸ್ಥಾನ- 403, ಬಹುಮತಕ್ಕೆ ಬೇಕಾದ ಸ್ಥಾನ- 202
ಬಜೆಪಿ- 221-225, ಸಮಾಜವಾದಿ- 140, ಬಹುಜನ ಸಮಾಜವಾದಿ ಪಕ್ಷ 14-24, ಕಾಂಗ್ರೆಸ್-4
ಪಂಜಾಬ್
ಒಟ್ಟು ಸ್ಥಾನ- 117, ಬಹುಮತಕ್ಕೆ 60 ಸ್ಥಾನ
ಆಮ್ ಆದ್ಮಿ- 56-62, ಕಾಂಗ್ರೆಸ್ 24-20, ಬಿಜೆಪಿ- 1-6
ಉತ್ತರಾಖಂಡ್
ಒಟ್ಟು ಸ್ಥಾನ-70, ಬಹುಮತಕ್ಕೆ ಬೇಕಾದ ಸ್ಥಾನ- 35
ಬಿಜೆಪಿ- 29-34, ಕಾಂಗ್ರೆಸ್- 35, ಆಪ್-1, ಇತರೆ 5
ಗೋವಾ
ಒಟ್ಟು ಸ್ಥಾನ 40
ಬಿಜೆಪಿ 17-19, ಕಾಂಗ್ರೆಸ್ 11-13, ಆಪ್- 1-2, ಇತರೆ 2-7