ಕೋವಿಡ್ ಸೋಂಕು ಮೆದುಳನ್ನು ಸಂಕುಚಿತಗೊಳಿಸಲದೆ. ಇದರಿಂದ ನೆನಪಿನ ಶಕ್ತಿ ನಾಶವಾಗುತ್ತದೆ ಅಲ್ಲದೇ ಘಾಸಿ ಮಾಡುತ್ತದೆ ಎಂದು ನೂತನ ಸಮೀಕ್ಷೆಯೊಂದು ವರದಿ ಮಾಡಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ನಡೆಸಿದ ನೂತನ ಸಮೀಕ್ಷೆಯಲ್ಲಿ ಈ ವಿಷಯ ದೃಢಪಟ್ಟಿದ್ದು, ಕೊರೊನಾ ವೈರಸ್ ಮೆದಳಿನಲ್ಲಿ ಸಣ್ಣ ರಂಧ್ರವನ್ನು ಮಾಡುವ ಶಕ್ತಿ ಹೊಂದಿದೆ ಎಂಬ ಆಘಾತಕಾರಿ ವಿಷಯ ಪತ್ತೆಯಾಗಿದೆ.
ಕೋವಿಡ್ ಬಂದರೂ ಆಸ್ಪತ್ರೆಗೆ ದಾಖಲಾಗದೇ ಗುಣಮುಖರಾದವರಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಅದರ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ ಎಂದು ಅವರು ಹೇಳಿದರು.
ಸಣ್ಣ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡವರಲ್ಲೂ ಶೇ0.2ರಿಂದ ಶೇ.2ರಷ್ಟು ಮೆದುಳು ಸಂಕುಚಿತಗೊಂಡಿರುವುದು ಸಂಶೋಧನೆ ವೇಳೆ ದೃಢಪಟ್ಟಿದೆ.
5181 ರೋಗಿಗಳನ್ನು ಎರಡು ಬಾರಿ ಪರೀಕ್ಷೆಗೊಳಪಡಿಸಲಾಗಿದ್ದು, 785 ಮಂದಿಯ ಮೆದುಳಿನಲ್ಲಿ ಬದಲಾವಣೆ ಕಂಡು ಬಂದಿದೆ. ಎರಡು ಬಾರಿ ಸ್ಕ್ಯಾನಿಂಗ್ ನಡುವೆ 401 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಎರಡು ಬಾರಿ ಸ್ಕ್ಯಾನಿಂಗ್ ನಡುವೆ 141 ದಿನಗಳ ಅಂತರ ಇತ್ತು ಎಂದು ಆಕ್ಸ್ ಫರ್ಡ್ ವಿವಿ ಸಂಶೋಧನಾ ವರದಿ ಹೇಳಿದೆ.
ಬ್ರಿಟನ್ ನಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಡೆಲ್ಟಾ ವೈರಸ್ ವೇಳೆ ಈ ಸಂಶೋಧನೆ ಮಾಡಲಾಗಿದೆ ಎಂದು ಹೇಳಲಾಗಿದೆ.