Breakingದೇಶ-ವಿದೇಶ

ಆರ್ ಬಿಐನಿಂದ ತ್ವರಿತ ಹಣ ಪಾವತಿ ವ್ಯವಸ್ಥೆಗೆ ಚಾಲನೆ! RBI Launches Instant Payment System “UPI 123PAY”, Helpline For DigiSaathi

ಮೊಬೈಲ್ ಗ್ರಾಹಕರ ತ್ವರಿತ ಪಾವತಿಗೆ ಅನುಕೂಲವಾಗಲು ಡಿಜಿಸಾಥಿ ಆ್ಯಪ್ ಗೆ ಹೆಲ್ಪ್ ಲೈನ್ UPI 123PAYಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಾಲನೆ ನೀಡಿದೆ.

ಭವಿಷ್ಯದ ಮೊಬೈಲ್ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ತುರ್ತು ಹಣ ಪಾವತಿಗೆ ಹೊಸ ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಆರ್ ಬಿಐ ನಿರ್ದೇಶಕ ಶಶಿಕಾಂತ್ ದಾಸ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಸುಮಾರು 40 ಕೋಟಿ ಮೊಬೈಲ್ ಗ್ರಾಹಕರು ಹಣ ಪಾವತಿಯನ್ನು ಮೊಬೈಲ್ ನಲ್ಲಿಯೇ ಮಾಡುವ ಸಾಧ್ಯತೆ ಇದೆ. ಇದರಿಂದ ಹೆಚ್ಚು ಸುರಕ್ಷಿತವಾಗಿ ತುರ್ತು ಹಣ ಪಾವತಿಗೆ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಶಶಿಕಾಂತ್ ದಾಸ್ ತಿಳಿಸಿದ್ದಾರೆ.

ಒಂದು ಬಾರಿಯ ಪಾವತಿಗೆ 4 ತಂತ್ರಜ್ಞಾನಗಳು ಏಕಕಾಲದಲ್ಲಿ ಕಾರ್ಯ ನಿರ್ವಹಿಸಲಿವೆ. ಐವಿಆರ್ (interactive voice response) ನಂಬರ್, ಆ್ಯಪ್ ಮುಂತಾದ ಅಂಶಗಳು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಮಿಸ್ ಕಾಲ್ ಮೂಲಕ ಆ್ಯಪ್ ಹ್ಯಾಕ್ ಮಾಡಿ ಹಣ ದೋಚುವ ಪ್ರಯತ್ನಗಳಿಗೂ ಕಡಿವಾಣ ಹಾಕಲಾಗಿದೆ ಎಂದು ಅವರು ವಿವರಿಸಿದರು.

Spread the love

Related Articles

Leave a Reply

Your email address will not be published.

Back to top button
Flash News