ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಜಿಟಿ ದೇವೇಗೌಡ I will contest from chamundeshwari: gt devegowda

ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಜಿಟಿ ದೇವೇಗೌಡ

0

ನಾನು ಮುಂದಿನ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು. ಆದರೆ ಯಾವ ಪಕ್ಷದಿಂದ ಅಂತ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಕೋಲಾರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ನಾನು ಮತ್ತು ನನ್ನ ಮಗ ಹರೀಶ್ ಇಬ್ಬರೂ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸಿದ್ದರಾಮಯ್ಯ ಜೊತೆ ಮಾತುಕತೆಯೂ ನಡೆದಿದೆ. ಚಾಮುಂಡೇಶ್ವರಿಯಲ್ಲಿ ಸೀಟು ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಕೂಡ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವಿರಬೇಕು ಎಂಬ ಒತ್ತಾಯ ಇದೆ. ಹಾಗಾಗಿ ಅನಿವಾರ್ಯವಾಗಿ ಈ ಕ್ಷೇತ್ರದಲ್ಲ  ಮುಂದುವರೆಯುತ್ತಿದ್ದೇನೆ. ಜೆಡಿಎಸ್ ಪಕ್ಷದಿಂದ ಸಚಿವರಾದ ಬಳಿಕ ವರಿಷ್ಠರಾದ ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿ ವಾಪಸ್ ಆದ ನಂತರ ಇದುವರೆಗೂ ಅವರ ಸಂಪರ್ಕದಲ್ಲಿ ಇಲ್ಲ ಎಂದು ಅವರು ಸ್ಪಷ್ಪಡಿಸಿದರು.

ನಾನು ಸಿದ್ದರಾಮಯ್ಯ ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಒಂದಾಗಿದ್ದು. ಅಲ್ಲಿ ನಾನು 1983ರಿಂದ ಇಬ್ಬರ ರಾಜಕೀಯ ಜೀವನ ಬಹಿರಂಗಪಡಿಸಿದ್ದೆ. ಆಗ ಸಿದ್ದರಾಮಯ್ಯ ಅದನ್ನೆಲ್ಲಾ ಒಪ್ಪಿಕೊಂಡಿದ್ದರು. ಅವರು ಕೂಡ ನನ್ನ ಕುರಿತು ಒಳ್ಳೆಯ ಮಾತನಾಡಿದರು ಎಂದು ದೇವೇಗೌಡ ವಿವರಿಸಿದರು.

ನನ್ನ ಮಗ ಹರೀಶ್ ಗೌಡ ಹಾಗೂ ನಾನು ಇಬ್ಬರು‌ ನಿಲ್ಲಬೇಕು ಎಂದಿದ್ದೇವೆ. ನಮ್ಮ ಅಭಿಪ್ರಾಯ ಸ್ಪಷ್ಟವಾಗಿ ತಿಳಿಸಿದ್ದೇನೆ. ಅವರು ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ. ಹಾಗಾಗಿ ಯಾವ ತೀರ್ಮಾನ ತೆಗೆದುಕೊಂಡಿಲ್ಲ, ಯಾವ ತೀರ್ಮಾನ ಮಾಡಿಲ್ಲ ಅಲ್ಲಿಗೆ ಬಿಟ್ಟಿದ್ದಾರೆ. ಹರೀಶ್ ಗೌಡ ಗೆ ಹುಣಸೂರು, ಕೆ.ಅರ್.ನಗರ, ಚಾಮರಾಜ ನಗರ 3 ಕ್ಷೇತ್ರಗಳನ್ನ ಕೇಳಿದ್ದೇನೆ. ಸಿದ್ದರಾಮಯ್ಯ ಅವರನ್ನ ಮೈಸೂರು ಜಿಲ್ಲೆಯ ಹುಣಸೂರು ಜನರೆ ಕರೆಯುತ್ತಿದ್ದಾರೆ. ಶ್ರೀನಿವಾಸಗೌಡರು ಕೋಲಾರಕ್ಕೂ ಕರೆದಿದ್ದಾರೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರ ಜೊತೆಗೆ ಯಾವುದೆ ಚರ್ಚೆ ಮಾಡಿಲ್ಲ. ಆದರೆ ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೆ ನಿಲ್ಲುವುದು. ಆದರೆ ಈ ಸಂಬಂಧ ಯಾವುದೇ ಒಪ್ಪಂದ ಆಗಿಲ್ಲ. ನಾನು ಕಾಂಗ್ರೇಸ್ ಗೆ ಹೋಗಿಲ್ಲ, ಹಾಗಾಗಿ ಅಲ್ಲಿ ನಡೆಯುವ ತೀರ್ಮಾನ ನನಗೆ ಗೊತ್ತಿಲ್ಲ ಎಂದು ಜಿಟಿ ದೇವೇಗೌಡ ಸ್ಪಷ್ಟಪಡಿಸಿದರು.

Spread the love
Leave A Reply

Your email address will not be published.

Flash News