Breakingದೇಶ-ವಿದೇಶ

ಬಲೂನ್ ಮಾರುವ ಹುಡುಗಿ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಹೇಗೆ ಗೊತ್ತಾ? baloon sale girl became model

ಸಾಮಾಜಿಕ ಜಾಲತಾಣದ ಈಗ ಎಷ್ಟು ಪರಿಣಾಮಕಾರಿ ಆಗಿದೆ ಅಂದರೆ ಬೀದಿ ವ್ಯಾಪಾರಿಗಳು, ಭಿಕ್ಷಕರು, ದಿನಗೂಲಿ ನೌಕರರು ಕೂಡ ದಿನಬೆಳಗಾಗುವಷ್ಟರಲ್ಲಿ ಸ್ಟಾರ್ ಗಳಾಗಿ ಉದಯಿಸುತ್ತಿದ್ದಾರೆ.

ಹೌದು, ಇತ್ತೀಚೆಗಷ್ಟೇ ಕೇರಳದ 60 ವರ್ಷದ ವೃದ್ಧ ರೂಪದರ್ಶಿ ಆಗಿ ಗಮನ ಸೆಳೆದಿದ್ದನ್ನು ನೋಡಿದ್ದೀರಿ. ಇದೀಗ ರಸ್ತೆ ಬದಿಯಲ್ಲಿ ಬಲೂನ್ ಮಾರುತ್ತಿದ್ದ ಯುವತಿ ಈಗ ಸ್ಟಾರ್ ಮಾಡೆಲ್ ಆಗಿ ಗಮನ ಸೆಳೆಯುತ್ತಿದ್ದಾಳೆ.

ಕಿಸ್ಬು ಎಂಬ ಯುವತಿ ದೇವಸ್ಥಾನಗಳ ಮುಂದೆ ಬಲೂನ್ ಮಾರುತ್ತಾ ಜೀವನ ಸಾಗಿಸುತ್ತಿದ್ದಳು. ಆದರೆ ಫೋಟೋಗ್ರಾಫರ್ ಕಣ್ಣಿಗೆ ಬಿದ್ದ ಈಕೆ ದಿಢೀರನೆ ಫೇಮಸ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ದೇವಸ್ಥಾನದ ಮುಂದೆ ಬಲೂನ್ ಮಾರುತ್ತಿದ್ದ ಹುಡುಗಿಯ ಫೋಟೊ ಕ್ಲಿಕ್ಕಿಸಿದ ಅರ್ಜುನ್ ಕೃಷ್ಣನ್ ಕೆಲವು ದಿನಗಳ ನಂತರ ಹುಡುಗಿಯ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದರು. ಆದರೆ ಯಾರೂ ಊಹಿಸಿಕೊಳ್ಳಲು ಆಗದಷ್ಟು ರೀತಿಯಲ್ಲಿ ಪ್ರತಿಕ್ರಿಯೆಗಳು ಬಂದಿ ಸ್ವತಃ ಫೋಟೊಗ್ರಾಫರ್ ಅಚ್ಚರಿಗೆ ಒಳಗಾಗಿದ್ದಾರೆ.

ಜನವರಿ 17ರಂದು ನಡೆಯುತ್ತಿದ್ದ ಉತ್ಸವದಲ್ಲಿ ಬಲೂನ್ ಮಾರುತ್ತಿದ್ದ ಕಿಸ್ಬೂಳನ್ನು ನೋಡಿದ ಅರ್ಜುನ್ ವಿಚಿತ್ರವಾಗಿ ಆಕರ್ಷಿಸುತ್ತಿದ್ದ ಆಕೆಯ ಒಂದೆರಡು ಫೋಟೊ ತೆಗೆದಿದ್ದರು. ಫೋಟೊಗೆ ಅದ್ಭುತ ಪ್ರತಿಕ್ರಿಯೆ ಬರುತ್ತಿದ್ದಂತೆ ಮತ್ತೆ ಮತ್ತೆ ಆಕೆಯ ಫೋಟೊ ತೆಗೆದು ಪ್ರಕಟಿಸಿದರು. ನಂತರ ಆಕೆಯ ಹೆತ್ತವರನ್ನು ಸಂಪರ್ಕಿಸಿ ಆಕೆಯನ್ನು ಮಾಡೆಲಿಂಗ್ ಗೆ ಕರೆತಂದರು.

ಮೇಕಪ್ ಕಲಾವಿದೆ ರಮ್ಯಾ ಗರಡಿಗೆ ಬಂದ ಈ ಯುವತಿ ಚಿತ್ರಣವೇ ಬದಲಾಯಿತು. ಈಗ ಆಕೆ ರೂಪದರ್ಶಿ ಆಗಿ ಗಮನ ಸೆಳೆಯುತ್ತಿದ್ದಾಳೆ.

Spread the love

Related Articles

Leave a Reply

Your email address will not be published.

Back to top button
Flash News