Breakingದೇಶ-ವಿದೇಶ

ಪಂಜಾಬ್ ನಲ್ಲಿ ಆಮ್ ಆದ್ಮಿ ಜಯಭೇರಿ, ರಾಷ್ಟ್ರೀಯ ಪಕ್ಷವಾಗಿ ಬಡ್ತಿ AAP became national party

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಕ್ಷ ಇದೀಗ ರಾಷ್ಟ್ರೀಯ ಪಕ್ಷವಾಗಿ ಉದಯವಾಗಿದೆ.

ದೆಹಲಿಯಲ್ಲಿ ಸತತ ಎರಡನೇ ಬಾರಿ ಅಧಿಕಾರ ಹಿಡಿದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 90 ಸ್ಥಾನಗಳಲ್ಲಿ  ಮುನ್ನಡೆ ಪಡೆಯುವ ಮೂಲಕ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡ, ಪಂಜಾಬ್ ಗೆಲುವಿನ ಮೂಲಕ ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಪಕ್ಷವಾಗಿದೆ. ದೇಶದ ಅತಿ ದೊಡ್ಡ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಗೆ ಶೀಘ್ರವೇ ಪರ್ಯಾಯಗಿ ಆಮ್ ಆದ್ಮಿ ಬೆಳೆಯಲಿದೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಅತ್ಯಂತ ಮಹತ್ವದ ದಿನ, ಈಗ ನಾವು ಪ್ರಾದೇಶಿಕ ಪಕ್ಷವಲ್ಲ. ಭಗವಂತ ನಮಗೆ ಹಾಗೂ ಅರವಿಂದ್ ಕೇಜ್ರಿವಾಲ್ ಗೆ ಒಳಿತನ್ನು ಮಾಡಲಿ, ಮುಂದೊಂದು ದಿನ ಅರವಿಂದ್ ಕೇಜ್ರಿವಾಲ್ ದೇಶವನ್ನು ಮುನ್ನಡೆಸುವಂತಾಗಲಿ ಎಂದು ರಾಘವ್ ಚಡ್ಡ ಹೇಳಿದ್ದಾರೆ.

ಆಮ್ ಅದ್ಮಿ ಪಕ್ಷ 2012 ರಲ್ಲಿ ಸ್ಥಾಪನೆಗೊಂಡು ಎರಡು ರಾಜ್ಯಗಳನ್ನು ಗೆದ್ದಿರುವುದಕ್ಕೆ ಹೋಲಿಕೆ ಮಾಡಿಕೊಂಡರೆ ಬಿಜೆಪಿ ತನ್ನ ಸ್ಥಾಪನೆಯ ವರ್ಷದಿಂದ ಎರಡು ರಾಜ್ಯಗಳನ್ನು ಗೆಲ್ಲುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿತ್ತು ಎಂದು ರಾಘವ್ ಚಡ್ಡಾ ಹೇಳಿದ್ದು ಆಮ್ ಆದ್ಮಿ ಪಕ್ಷ ಪಂಜಾಬ್ ನ ಆರ್ಥಿಕತೆ ಹಾಗೂ ಗತವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಿಸಲಿದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News