Breakingcricket

ವನಿತೆಯರ ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು womens world cup: india loss

ಮಧ್ಯಮ ಕ್ರಮಾಂಕದಲ್ಲಿ ಹರ್ಮಪ್ರೀತ್ ಕೌರ್ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ತಂಡ ವನಿತೆಯರ ಏಕದಿನ ವಿಶ್ವಕಪ್ ಪಂದ್ಯದಲ್ಲಿ 62 ರನ್ ಗಳಿಂದ ನ್ಯೂಜಿಲೆಂಡ್ ವಿರುದ್ಧ ಆಘಾತ ಅನುಭವಿಸಿದೆ.

ಹ್ಯಾಮಿಲ್ಟನ್ ಮೈದಾನದಲ್ಲಿ ನಡೆದ ಲೀಗ್ ನ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 9 ವಿಕೆಟ್ ಗೆ 260 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ 46.4 ಓವರ್ ಗಳಲ್ಲಿ 198 ರನ್ ಗಳಿಗೆ ಆಲೌಟಾಯಿತು.

ಭಾರತದ ಪರ ಹರ್ಮಪ್ರೀತ್ ಕೌರ್ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 71 ರನ್ ಗಳಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ. ನಾಯಕಿ ಮಿಥಾಲಿ ರಾಜ್ (31), ಯಸ್ತಿಕ ಭಾಟಿಯಾ (28) ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡಿದರು.

ನ್ಯೂಜಿಲೆಂಡ್ ಪರ ಮಾರಕ ದಾಳಿ ಸಂಘಟಿಸಿದ ಅಮೆಲಾ ಕೆರ್ ಮತ್ತು ಲಿಯಾ ಟಹುಹು ತಲಾ 3 ವಿಕೆಟ್ ಪಡೆದರೆ, ಹೈಲಿ ಜಾನ್ಸನ್ 2 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪರ ಆ್ಯಮಿ ಸಟ್ಟರ್ ವೇಟ್ 75 ಹಾಗೂ ಅಮೆಲಾ ಕೆರ್ 50 ರನ್ ಬಾರಿಸಿದ್ದೂ ಅಲ್ಲದೇ 3ನೇ ವಿಕೆಟ್ ಗೆ 73 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದರು. ಭಾರತದ ಪರ ಪೂಜಾ ವಸ್ತ್ರಾಕರ್ 4 ವಿಕೆಟ್ ಪಡೆದರು.

Spread the love

Related Articles

Leave a Reply

Your email address will not be published.

Back to top button
Flash News