Breakingcricket

ಮಾ. 12ರಂದು ಆರ್ ಸಿಬಿ ನೂತನ ನಾಯಕನ ಘೋಷಣೆ: ಕೊಹ್ಲಿ ಹೇಳಿದ್ದೇನು? IPL 2022: Virat Kohli teases RCB fans ahead of captain, other major announcements on March 12

ಮಾರ್ಚ್​ 12ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನ ಆಯ್ಕೆ ಘೋಷಣೆ ಆಗಲಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಕಾಲೆಳೆದಿದ್ದಾರೆ.

ಐಪಿಎಲ್ ಟಿ-20 ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಹುತೇಕ ಎಲ್ಲಾ ಫ್ರಾಂಚೈಸಿಗಳು ತಂಡದ ನಾಯಕನನ್ನು ಘೋಷಣೆ ಮಾಡಿವೆ. ಆದರೆ ಆರ್ ಸಿಬಿ ಇದುವರೆಗೆ ಯಾವುದೇ ಘೋಷಣೆ ಮಾಡದೇ ಕುತೂಹಲ ಕಾಯ್ದುಕೊಂಡಿತ್ತು.

ಮಾರ್ಚ್ 27ರಂದು ಆರ್ ಸಿಬಿ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದ್ದು, ಇದೀಗ ಆರ್ ಸಿಬಿ ಮಾರ್ಚ್ 12 ಶನಿವಾರದಂದು ನೂತನ ನಾಯಕನ ಘೋಷಣೆ ಮಾಡಲಿದೆ.

ಟ್ವಿಟರ್ ನಲ್ಲಿ ಈ ಸುಳಿವು ನೀಡಿದ ವಿರಾಟ್ ಕೊಹ್ಲಿ, ಮತ್ತೊಂದು ಕುತೂಹಲದ ಐಪಿಎಲ್ ಅನ್ನು ಎದುರು ನೋಡುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ… ಎಂದು ಅರ್ಧದಲ್ಲೇ ನಿಲ್ಲಿಸಿ ಅಭಿಮಾನಿಗಳ ಕಾಲೆಳೆದಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News