Breakingಕ್ರೈಮ್ /ಕೋರ್ಟ್

ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು, ಮಗು ಕಚ್ಚಿ ಕೊಲೆಗೆ ಯತ್ನಿಸಿದ ವಿಕೃತ ಪತಿ! man try to kill pregnent wife

ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದೂ ಅಲ್ಲದೇ ಮಗುವನ್ನು ಕಚ್ಚಿ ವಿಕೃತ ಪತಿಯೊಬ್ಬ ಕೊಲೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೈಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಎರಡೂವರೆ ತಿಂಗಳ ಗರ್ಭಿಣಿ ಮೀನಾ (23) ಸುಟ್ಟಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಬು (37) ಕೊಲೆಗೆ ಯತ್ನಿಸಿದ ಪತಿ.

ಮೊದಲ ಪತಿ ಮೃತಪಟ್ಟಿದ್ದರಿಂದ ಮೀನಾ, ಬಾಬುನನ್ನು ಎರಡನೇ ಮದುವೆ ಆಗಿದ್ದರು. 7 ವರ್ಷದ ಹಿಂದೆ ಮೊದಲ ವಿಜಯಕಾಂತ್ ಅವರನ್ನು ವಿವಾಹವಾಗಿದ್ದು, 3 ವರ್ಷಗಳ ಹಿಂದೆ ಮೃತಪಟ್ಟಿದ್ದ.

ನಂತರ ಮೀನಾಗೆ ಬಾಬು ಎಂಬಾತನ ಪರಿಚಯವಾಗಿದ್ದು, ಮದುವೆ ಆಗುತ್ತೇನೆ ಎಂದು ಬಾಬು ಮುಂದೆ ಬಂದಿದ್ದರಿಂದ ಇನ್ನಾದರೂ ಚೆನ್ನಾಗಿರಬಹುದು ಎಂದು ಒಪ್ಪಿಕೊಂಡಿದ್ದರು.

ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ ಬಾಬು ಜೊತೆ ಮಾರ್ಚ್‍ 9ರಂದು ಇದೇ ವಿಷಯಕ್ಕೆ ಜಗಳವಾಗಿದ್ದು, ದುಡ್ಡು ಕೊಡದಿದ್ದರೆ ಡೀಸೆಲ್ ಸುರಿದು ಸುಟ್ಟು ಹಾಕುತ್ತೇನೆ ಎಂದು ಬೆದರಿಸಿದ್ದ.

ನೀನು ಯಾಕೆ ಸಾಯಿಸ್ತಿಯಾ? ನಾನೇ ಸಾಯ್ತಿನಿ ಎಂದು ಮೀನಾ ಹೇಳಿದಾಗ ಬಾಬು ಡೀಸೆಲ್ ಸುರಿದು ಮೀನಾಗೆ ಬೆಂಕಿ ಹಚ್ಚಿದ್ದ. ಇದೇ ವೇಳೆ ಸಿಟ್ಟಿನಿಂದ ಮೊದಲ ಪತಿಯಿಂದ ಜನಿಸಿದ್ದ ಹೆಣ್ಣು ಮಗುವನ್ನು ಕಚ್ಚಿ ವಿಕೃತಿ ಮೆರೆದಿದ್ದ.

ಬೈಯಪ್ಪನಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಬಾಬುನನ್ನು ಬಂಧಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News