ದೇಶಕ್ಕಾಗಿ ಹೋರಾಟ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಅವಲಂಬಿಸಿಲ್ಲ. 2024ರಲ್ಲಿ ಇದು ನಿರ್ಧಾರವಾಗಲಿದೆ ಎಂದು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ಈ ಫಲಿತಾಂಶ 2024ರ ಫಲಿತಾಂಶದ ದಿಕ್ಸೂಚಿ ಎಂಬ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ.
ಯಾವುದೇ ರಾಜ್ಯಗಳ ಫಲಿತಾಂಶ ಆಧರಿಸಿ ಲೋಕಸಭಾ ಚುನಾವಣೆ ನಿರ್ಧಾರವಾಗುವುದಿಲ್ಲ. 2024ರ ಫಲಿತಾಂಶದ ದಿಕ್ಸೂಚಿ 2022ರ ಫಲಿತಾಂಶ ಅಲ್ಲ. ಇದು ಸ್ವತಃ ಸಾಹೇಬರಿಗೆ ಗೊತ್ತು. ಆದರೆ ಅವರು ಜನರ ದಾರಿ ತಪ್ಪಿಸಲು ಮಾಡಿದ ತಂತ್ರ ಅಷ್ಟೇ ಎಂದರು.
ಚುನಾವಣೆಯ ಫಲಿತಾಂಶವನ್ನು ತಮಗೆ ಬೇಕಾದಂತೆ ಪ್ರತಿಬಿಂಬಿಸುವುದರಿಂದ ಜನರು ದಾರಿ ತಪ್ಪುವುದಿಲ್ಲ. ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು.