Breakingದೇಶ-ವಿದೇಶ

ಉಕ್ರೇನ್ ಮೇಲೆ ರಷ್ಯಾದಿಂದ ರಾಸಾಯನಿಕ ಬಾಂಬ್ ದಾಳಿ! russia us vacume bomb on ukraine

ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ಬಾಂಬ್ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿದೆ ಎಂದು ಇಂಗ್ಲೆಂಡ್ ಹೊಸ ಬಾಂಬ್ ಸಿಡಿಸಿದೆ.

ಇಂಗ್ಲೆಂಡ್ ರಕ್ಷಣಾ ಸಚಿವಾಲಯ ಈ ಸ್ಫೋಟಕ ವಿಷಯ ಬಹಿರಂಗಪಡಿಸಿದ್ದು, ಟಿಎಂಎಸ್-1ಎ ಹೆಸರಿನ ಈ ರಾಸಾಯನಿಕ ಬಾಂಬ್ ದಾಳಿ ನಡೆಸಿದ್ದರಿಂದ ಹಲವು ಅಡ್ಡಪರಿಣಾಮಗಳು ಉಂಟಾಗುತ್ತಿವೆ ಎಂದು ಆರೋಪಿಸಿದೆ.

ಇದಕ್ಕೂ ಮುನ್ನ ರಷ್ಯಾ ರಾಸಾಯನಿಕ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿತ್ತು. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಈ ರಾಸಯನಿಕ ಬಾಂಬ್ ದಾಳಿ ನ್ಯೂಕ್ಲಿಯರ್ ಗೆ ಪರ್ಯಾಯವಾಗಿದ್ದು, ನ್ಯೂಕ್ಲಿಯರ್ ಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದು ಹಾನಿ ಮಾಡಿದರೂ ಮಾನವರ ದೇಹದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಸಾಂಪ್ರದಾಯಕ ಅಥವಾ ಸಾಮಾನ್ಯ ಬಾಂಬ್ ದಾಳಿಗಿಂತ ಇದು ಅತ್ಯಂತ ಭೀಕರವಾಗಿದ್ದು, ಹಲವು ಕಿ.ಮೀ. ವ್ಯಾಪ್ತಿಯವರೆಗೆ ಹರಡಲಿದ್ದು, ದೇಹದ ಒಳಗಿನ ಅಂಗಾಂಗಗಳನ್ನು ಇದು ಹಾನಿ ಮಾಡುತ್ತದೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News